ರನೌಟ್ ಮಾಡಿದಕ್ಕೆ ಕೆರಳಿ ಕೆಂಡವಾದ ಪಾಕ್ ಆಟಗಾರ; ಇದರಲಿ ಯಾರದ್ದು ತಪ್ಪು? ನೀವೇ ನೋಡಿ
Salman Agha Run-Out Controversy: ಪಾಕಿಸ್ತಾನ-ಬಾಂಗ್ಲಾದೇಶ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಲ್ಮಾನ್ ಆಘಾ ವಿಚಿತ್ರವಾಗಿ ರನೌಟ್ ಆಗಿದ್ದು ವಿವಾದಕ್ಕೆ ಕಾರಣವಾಯಿತು. ಮೆಹದಿ ಹಸನ್ ಚಾಣಾಕ್ಷತೆಯಿಂದ ಚೆಂಡನ್ನು ಸ್ಟಂಪ್‌ಗೆ ಎಸೆದರು. ಕ್ರೀಸ್‌ನಿಂದ ಹೊರಗಿದ್ದ ಆಘಾ, ಅಂಪೈರ್ ತೀರ್ಪಿನಿಂದ ಕೆರಳಿದರು. ಈ ಘಟನೆ ಪಾಕ್ ತಂಡಕ್ಕೆ ಹಿನ್ನಡೆಯಾಗಿದ್ದು, ಸರಣಿಯಲ್ಲಿನ ಪಂದ್ಯದ ಕುತೂಹಲ ಹೆಚ್ಚಿಸಿದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಹೀಗಾಗಿ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆದಾಗ್ಯೂ ಪಾಕ್ ಇನ್ನಿಂಗ್ಸ್‌ನ 39ನೇ ಓವರ್ನಲ್ಲಿ ನಡೆದ ಅದೊಂದು ಘಟನೆ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಆಘಾ ಕೆರಳುವಂತೆ ಮಾಡಿದಲ್ಲದೆ, ವಿಕೆಟ್ ಕೂಡ ಕಳೆದುಕೊಳ್ಳುವಂತೆ ಮಾಡಿತು.
ಢಾಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್ ವಿಚಿತ್ರ ರನೌಟ್ಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ಈ ಓವರ್‌ನ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು. ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್ ಮೆಹದಿ ಹಸನ್ಗೆ ರವಾನಿಸಲು ಪ್ರಯತ್ನಿಸಿದರು.
ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ಚೆಂಡನ್ನು ಹಿಡಿದು, ನೇರವಾಗಿ ಸ್ಟಂಪ್‌ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್‌ಗೆ ಎಸೆದ ಕೂಡಲೇ ಮೆಹದಿ ಹಸನ್ ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು. ಇದನ್ನು ನೋಡಿ ಕಕ್ಕಾಬಿಕ್ಕಿಯಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫಿಲ್ಡ್ ಅಂಪೈರ್ ಮೂರನೇ ಅಂಪೈರ್ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ತೆಗೆದು ನೆಲದ ಮೇಲೆ ಎಸೆದು ಆಕ್ರೋಶ ಹೊರಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Mar 13, 2026 07:25 PM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

