AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?

ಅಕ್ಷತಾ ವರ್ಕಾಡಿ
|

Updated on: Mar 10, 2026 | 3:54 PM

Share

2026ರ ಪರಾಭವನಾಮ ಸಂವತ್ಸರದ ಯುಗಾದಿಯಲ್ಲಿ ವೃಶ್ಚಿಕ ರಾಶಿಯವರಿಗೆ ಡಾ. ಬಸವರಾಜ ಗುರೂಜಿ ಉತ್ತಮ ಫಲಗಳನ್ನು ಭವಿಷ್ಯ ನುಡಿದಿದ್ದಾರೆ. ಗುರುಬಲದಿಂದ ವೃತ್ತಿ, ಆರ್ಥಿಕ ಸ್ಥಿತಿ ಹಾಗೂ ಕೌಟುಂಬಿಕ ಜೀವನದಲ್ಲಿ ಪ್ರಗತಿ ನಿರೀಕ್ಷಿಸಲಾಗಿದೆ. ವ್ಯಾಪಾರ, ರಿಯಲ್ ಎಸ್ಟೇಟ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಾಕ್‌ಪಾಟ್ ಯೋಗವಿದ್ದು, ವರ್ಷದ ಒಟ್ಟಾರೆ ಫಲವು ಶೇ. 75ರಷ್ಟು ಶುಭಕರವಾಗಿದೆ.

ಡಾ. ಬಸವರಾಜ ಗುರೂಜಿಯವರು 2026ರ ಯುಗಾದಿ ಪರಾಭವನಾಮ ಸಂವತ್ಸರದ ವೃಶ್ಚಿಕ ರಾಶಿಯ ಭವಿಷ್ಯವನ್ನು ವಿವರಿಸಿದ್ದಾರೆ. ಈ ವರ್ಷವು ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ಗುರು ಗ್ರಹವು 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಸಂಚಾರ ಮಾಡುವುದರಿಂದ ಅದೃಷ್ಟ ಕೂಡಿ ಬರುವ ಕಾಲ ಇದಾಗಿದೆ. ಶನಿಯು ಪಂಚಮದಲ್ಲಿದ್ದರೆ, ರಾಹು ನಾಲ್ಕರಿಂದ ಮೂರಕ್ಕೆ ಮತ್ತು ಕೇತು ಹತ್ತರಿಂದ ಒಂಬತ್ತಕ್ಕೆ ಸಂಚಾರ ಮಾಡಲಿದೆ.

ಆರೋಗ್ಯ ಸ್ಥಿತಿ ಉತ್ತಮವಾಗಿರಲಿದ್ದು, ಸುಖ-ದುಃಖದ ಅನುಪಾತ 6:3 ಇರಲಿದೆ. ವೃತ್ತಿ, ವ್ಯಾಪಾರ ಹಾಗೂ ಆರ್ಥಿಕವಾಗಿ ಸಬಲತೆಯನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಪ್ರಗತಿ, ಬಾಕಿ ವಸೂಲಿ, ಅರ್ಧಂಬರ್ಧ ಕೆಲಸಗಳ ಪೂರ್ಣ, ಅಣ್ಣ-ತಮ್ಮಂದಿರಿಂದ ಸಹಕಾರ ದೊರೆಯಲಿದೆ. ರಿಯಲ್ ಎಸ್ಟೇಟ್, ಭೂ ವ್ಯಾಪಾರಿಗಳು, ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಇದು ಜಾಕ್‌ಪಾಟ್ ವರ್ಷವೆಂದು ಗುರುಗಳು ಹೇಳಿದ್ದಾರೆ. ಕೋಪ-ತಾಪಗಳನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಕಾಡಬಹುದು. ಪಾಲುದಾರಿಕೆ ಮತ್ತು ಆಸ್ತಿ ವಿಚಾರಗಳಲ್ಲಿ ಎಚ್ಚರ ಅಗತ್ಯ. ಒಟ್ಟಾರೆಯಾಗಿ, ಶೇ.75 ಶುಭಫಲಗಳನ್ನು ವೃಶ್ಚಿಕ ರಾಶಿಯವರು ನಿರೀಕ್ಷಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

Follow Us