ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 14ರ ದಿನಭವಿಷ್ಯ
Daily Numerology March 14: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 14ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಈ ದಿನ ಶಮಿ ವೃಕ್ಷದ ಆರಾಧನೆಯನ್ನು ಮಾಡಿ. ಸಂಜೆ ಸಮಯದಲ್ಲಿ ಶಮಿ (ಬನ್ನಿ) ಮರದ ಬುಡದಲ್ಲಿ ದೀಪ ಹಚ್ಚುವುದು ವೃತ್ತಿಜೀವನದ ಅಡೆತಡೆಗಳನ್ನು ನಿವಾರಿಸುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಭೂಮಿ ಅಥವಾ ಮನೆಗೆ ಸಂಬಂಧಿಸಿದ ದಾಖಲೆ- ಕಾಗದ- ಪತ್ರಗಳನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಇಷ್ಟು ಸಮಯ ಕಾಡುತ್ತಿದ್ದ ಹಿನ್ನಡೆ ಅಥವಾ ವಿಳಂಬ ಗತಿ ಇದ್ದಲ್ಲಿ ಅದು ನಿವಾರಣೆ ಆಗುವಂಥ ಯೋಗ ಇದೆ. ಅಯ್ಯೋ, ಬೇರೆಯವರಿಂದ ಸಹಾಯ ಕೇಳಬೇಕಾದ ಸನ್ನಿವೇಶ ಬರುತ್ತದೆಯೇ ಎಂದು ಆತಂಕಗೊಂಡಿದ್ದಲ್ಲಿ ಇತರರ ಸಹಾಯ ಇಲ್ಲದೆ ಕೆಲಸ- ಕಾರ್ಯಗಳು ಆಗುವುದಕ್ಕೆ ಬೇಕಾದದ್ದು ದೊರೆಯುವ ಅವಕಾಶ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಒಂದು ಬಗೆಯ ಸಮಾಧಾನ, ನೆಮ್ಮದಿ ದೊರೆಯಲಿದೆ. ಮನೆಯಿಂದ ದೂರದಲ್ಲಿ ನಿಮ್ಮ ಹಿರಿಯರು ಇದ್ದಲ್ಲಿ ಅಥವಾ ವೃದ್ಧಾಶ್ರಮ ಅಥವಾ ಇನ್ಯಾವುದಾದರೂ ಕಡೆ ಮನೆಯ ಹಿರಿಯರನ್ನು ಬಿಟ್ಟಿದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣ ಆಗಲಿದೆ. ಇದೇ ಕಾರಣಕ್ಕೆ ತುರ್ತಾಗಿ ಹಣದ ಅಗತ್ಯ ಕಂಡುಬರಲಿದೆ. ನಿಮ್ಮದು ಬೇಜವಾಬ್ದಾರಿ ಎಂಬ ಆಕ್ಷೇಪಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಇತರರ ಹಣದ ನಿಗಾ ಮಾಡುವ ಅಥವಾ ಆ ಹಣದ ಲೆಕ್ಕಾಚಾರದ ವ್ಯವಹಾರವನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅಂತಾದಲ್ಲಿ ಇತರ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮದುವೆ ನಿಶ್ಚಯ ಆಗಿರುವಂಥವರಿಗೆ ಅಂದುಕೊಂಡಿದ್ದಕ್ಕಿಂತ ಖರ್ಚು ಹೆಚ್ಚಾಗುವ ಸುಳಿವು ದೊರೆಯಲಿದೆ. ಈಗಾಗಲೇ ಇದಕ್ಕಾಗಿ ಹಣ ಹೊಂದಿಸಿಕೊಂಡಿದ್ದವರಿದ್ದರೆ ಇದೀಗ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ.
ಲೇಖನ- ಸ್ವಾತಿ ಎನ್.ಕೆ.
Published On - 12:35 am, Sat, 14 March 26
