AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದಕ ವಿಜೇತರಿಗೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ನಗದು ಬಹುಮಾನವೆಷ್ಟು?

Indian athletes prize money: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 39 ಪದಕಗಳೊಂದಿಗೆ 4ನೇ ಸ್ಥಾನ ಪಡೆಯಿತು. ಆಯೋಜಕರಿಂದ ನಗದು ಬಹುಮಾನವಿಲ್ಲವಾದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತದ ಕ್ರೀಡಾಪಟುಗಳಿಗೆ ವಿವಿಧ ಕ್ರೀಡಾಕೂಟಗಳ (ಒಲಿಂಪಿಕ್ಸ್, ಕಾಮನ್‌ವೆಲ್ತ್, ಏಷ್ಯನ್) ಪದಕಗಳಿಗೆ ಪ್ರೋತ್ಸಾಹಕ ನಗದು ಬಹುಮಾನ ನೀಡುತ್ತವೆ. ಇದರ ವಿವರವಾದ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಪದಕ ವಿಜೇತರಿಗೆ ಕೇಂದ್ರ ಮತ್ತು ರಾಜ್ಯದಿಂದ ಸಿಗುವ ನಗದು ಬಹುಮಾನವೆಷ್ಟು?
Commonwealth Games
ಪೃಥ್ವಿಶಂಕರ
|

Updated on:Aug 03, 2026 | 9:06 PM

Share

11 ದಿನಗಳ ಕಾಲ ನಡೆದ 2026 ರ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games) ಅಂತ್ಯಗೊಂಡಿದೆ. ಈ ಕ್ರೀಡಾಕೂಟದಲ್ಲಿ ಭಾರತ ಒಟ್ಟು 39 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ದೇಶದ ಕ್ರೀಡಾಪಟುಗಳು ಒಟ್ಟು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ಪದಕ ವಿಜೇತರಿಗೆ ಪದಕಗಳ ಜೊತೆಗೆ ಬಹುಮಾನದ ರೂಪದಲ್ಲಿ ಎಷ್ಟು ಹಣ ಸಿಕ್ಕಿತು ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರವೆಂದರೆ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜಕರಿಂದ ಪದಕ ವಿಜೇತರಿಗೆ ನಗದು ರೂಪದಲ್ಲಿ ಯಾವುದೇ ಬಹುಮಾನ ಸಿಗುವುದಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದವರಿಗೆ ನಗದು ರೂಪದಲ್ಲಿ ಬಹುಮಾನವನ್ನು ನೀಡುತ್ತದೆ. ಅದರ ಪಟ್ಟಿ ಇಲ್ಲಿದೆ.

ಒಲಿಂಪಿಕ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 75 ಲಕ್ಷ ರೂ.
  • ಬೆಳ್ಳಿ ಗೆದ್ದವರಿಗೆ 50 ಲಕ್ಷ ರೂ.
  • ಕಂಚು ಗೆದ್ದವರಿಗೆ 30 ಲಕ್ಷ ರೂ.

ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 30 ಲಕ್ಷ ರೂ.
  • ಬೆಳ್ಳಿ ಗೆದ್ದವರಿಗೆ 20 ಲಕ್ಷ ರೂ.
  • ಕಂಚು ಗೆದ್ದವರಿಗೆ 10 ಲಕ್ಷ ರೂ.

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 30 ಲಕ್ಷ ರೂ.
  • ಬೆಳ್ಳಿ ಗೆದ್ದವರಿಗೆ 20 ಲಕ್ಷ ರೂ.
  • ಕಂಚು ಗೆದ್ದವರಿಗೆ 10 ಲಕ್ಷ ರೂ.

ಕೇಂದ್ರ ಸರ್ಕಾರವನ್ನು ಹೊರತುಪಡಿಸಿ ರಾಜ್ಯ ಸರ್ಕಾರಗಳು ಕೂಡ ತಮ್ಮ ರಾಜ್ಯವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದವರಿಗೆ ಭಾರಿ ಮೊತ್ತದ ಹಣವನ್ನು ಬಹುಮಾನವನ್ನಾಗಿ ನೀಡುತ್ತವೆ. ಅದರಂತೆಯೇ ನಮ್ಮ ಕರ್ನಾಟಕ ಸರ್ಕಾರ ಕೂಡ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದವರಿಗೆ ನಿಗದಿತ ಹಣವನ್ನು ಬಹುಮಾನವನ್ನಾಗಿ ನೀಡುತ್ತಿದೆ.

ಒಲಿಂಪಿಕ್ಸ್ ಪದಕ ವಿಜೇತರಿಗೆ ಸಿಗುವ ನಗದು ಬಹುಮಾನ

  • ಚಿನ್ನ ಗೆದ್ದವರಿಗೆ 6 ಕೋಟಿ ರೂ. ಜೊತೆಗೆ ಸರ್ಕಾರಿ ನೌಕರಿ
  • ಬೆಳ್ಳಿ ಗೆದ್ದವರಿಗೆ 4 ಕೋಟಿ ರೂ.
  • ಕಂಚು ಗೆದ್ದವರಿಗೆ 3 ಕೋಟಿ ರೂ.

ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಪದಕಗಳ ಆಧಾರದ ಮೇಲೆ (ಚಿನ್ನ, ಬೆಳ್ಳಿ, ಕಂಚು) 15 ಲಕ್ಷದಿಂದ 35 ಲಕ್ಷದವರೆಗೆ ಬಹುಮಾನವನ್ನು ನೀಡಲಾಗುತ್ತದೆ.

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ

  • ಚಿನ್ನದ ಪದಕ: 7 ಲಕ್ಷ ರೂ.
  • ಬೆಳ್ಳಿ ಪದಕ: 5 ಲಕ್ಷ ರೂ.
  • ಕಂಚಿನ ಪದಕ: 3 ಲಕ್ಷ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 pm, Mon, 3 August 26

Follow Us