AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಾಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ; ಐತಿಹಾಸಿಕ ಗೆಲುವಿನ ಮೂಲಕ ರಾಜಕೀಯಕ್ಕೆ ಪ್ರಶಾಂತ್ ಕಿಶೋರ್ ಎಂಟ್ರಿ

ರಾಷ್ಟ್ರಾಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ; ಐತಿಹಾಸಿಕ ಗೆಲುವಿನ ಮೂಲಕ ರಾಜಕೀಯಕ್ಕೆ ಪ್ರಶಾಂತ್ ಕಿಶೋರ್ ಎಂಟ್ರಿ

ಸುಷ್ಮಾ ಚಕ್ರೆ
|

Updated on: Aug 03, 2026 | 6:08 PM

Share

ಬಿಜೆಪಿಯ ಭದ್ರಕೋಟೆಯಾದ ಬಂಕಿಪುರದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರಶಾಂತ್ ಕಿಶೋರ್ ಬಿಜೆಪಿಯನ್ನು ಸೋಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಬಂಕಿಪುರದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ಬಿಹಾರದ ಏಕೈಕ ಸ್ಥಾನವಾದ ಬಂಕಿಪುರದಲ್ಲಿ ಉಪಚುನಾವಣೆ ನಡೆಯಿತು. ಬಿಜೆಪಿಯ ಸೋಲು ಪಾಟ್ನಾದಿಂದ ದೆಹಲಿಯವರೆಗೆ ಪ್ರತಿಧ್ವನಿಸಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಹಲವಾರು ಕೇಂದ್ರ ಸಚಿವರು, ಇಡೀ ಬಿಹಾರ ಸಚಿವ ಸಂಪುಟದೊಂದಿಗೆ ಬಂಕಿಪುರದಲ್ಲಿ ಬೀಡುಬಿಟ್ಟರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ನವದೆಹಲಿ, ಆಗಸ್ಟ್ 3: 3 ದಶಕಗಳ ನಂತರ ಬಿಜೆಪಿ ತನ್ನ ಭದ್ರಕೋಟೆಯಾದ ಬಿಹಾರದ ಬಂಕಿಪುರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಕ್ಷೇತ್ರವಾದ ಬಂಕಿಪುರದಲ್ಲಿ (Bankipur By-Election) ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ (Prashant Kishor) ಮೊದಲ ಪ್ರಯತ್ನದಲ್ಲೇ ಬಿಜೆಪಿಗೆ ಹೀನಾಯ ಸೋಲಿನ ರುಚಿ ತೋರಿಸುವ ಮೂಲಕ ಗೆಲುವಿನ ನಗು ಬೀರಿದ್ದಾರೆ. ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಬಂಕಿಪುರದ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಹಲವಾರು ಕೇಂದ್ರ ಸಚಿವರು, ಇಡೀ ಬಿಹಾರ ಸಚಿವ ಸಂಪುಟದೊಂದಿಗೆ ಬಂಕಿಪುರದಲ್ಲಿ ಬೀಡುಬಿಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರಶಾಂತ್ ಕಿಶೋರ್ ಗೆಲ್ಲುವುದು ಖಚಿತವಾಗುತ್ತಿದ್ದಂತೆ ಜನ ಸುರಾಜ್ ಪಕ್ಷದ ಕಾರ್ಯಕರ್ತರು ಅವರನ್ನು ರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿ ಸಂಭ್ರಮಾಚರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us