AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ ಮಾಡಿ ದಾಖಲೆ

ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ ಮಾಡಿ ದಾಖಲೆ

ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Oct 03, 2026 | 10:25 PM

Share

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ.ಗಿರಿಸಾಗರದ ಈ ಎತ್ತುಗಳು ಅಪರೂಪದ ಸಾಧನೆ ಮಾಡಿವೆ.ಗುಂಡಪ್ಪ ನೀರುಗ್ಗಿ ಮತ್ತು ಜಕ್ಕಪ್ಪ ನವಲಗನ್ ಎಂಬ ರೈತರಿಗೆ ಸೇರಿದ ಎತ್ತುಗಳಿಂದ ಈ ದಾಖಲೆ ನಿರ್ಮಾಣವಾಗಿದೆ.ಸಾಮಾನ್ಯವಾಗಿ ಒಂದು ಜೋಡೆತ್ತು ದಿನಕ್ಕೆ 4 ರಿಂದ 5 ಎಕರೆ ಮಾತ್ರ ಬಿತ್ತನೆ ಮಾಡುತ್ತವೆ. ಆದರೆ ಈ ಎತ್ತುಗಳು ಬೆಳಿಗ್ಗೆ 5 ಗಂಟೆಯಿಂದ ಸಂಜೆ 3 ಗಂಟೆವರೆಗೆ, ಅಂದರೆ 10 ತಾಸಿನಲ್ಲಿ 20 ಎಕರೆ ಬಿಳಿಜೋಳ ಬಿತ್ತನೆ ಮಾಡಿ ಟ್ರ್ಯಾಕ್ಟರ್ ಗೂ ಮೀರಿದ ವೇಗದಲ್ಲಿ ಕೆಲಸ ಮಾಡಿವೆ.

ಬಾಗಲಕೋಟೆ, (ಅಕ್ಟೋಬರ್ 03): ಮಾನವ ಸಂಪನ್ಮೂಲ ಹೆಚ್ಚಿದ್ದರೂ ವ್ಯವಸಾಯಕ್ಕೆ ಯಾಂತ್ರಿಕತೆಗೆ ಜೋತು ಬಿದ್ದ ಕಾರಣ, ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು, ವ್ಯವಸಾಯ ಮಾಡಲು ಎತ್ತುಗಳು ಸಿಗುತ್ತಿಲ್ಲ. ಹಿಂದಿನ ಕಾಲದಲ್ಲಿ ಮನಗೊಂದು ಜೋಡೆತ್ತುಗಳು ಇರುತ್ತಿದ್ದವು ಆದ್ರೆ, ಇದೀಗ ಟ್ರ್ಯಾಕ್ಟರ್​​ಗಳು ಬಂದ ಮೇಲೆ ಎತ್ತುಗಳು ಮಾಯವಾಗಿದ್ದು, ಟ್ರ್ಯಾಕ್ಟರ್​​​ಗಳಿಂದ ವೇಗವಾಗಿ ಕೆಲಸ ಕಾರ್ಯಗಳು ಎಂದು ಎತ್ತುಗಳನ್ನು ಬಳಕೆ ಮಾಡುತ್ತಿಲ್ಲ. ಆದ್ರೆ, ಈ ಜೋಡೆತ್ತುಗಳು ಟ್ರ್ಯಾಕ್ಟರ್​​​​​ ಗೂ ಮೀರಿದ ಸಹಾಯ ಮಾಡಿ ಹೊಸ ದಾಖಲೆ ಬರೆದಿವೆ. ಹೌದು….ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ.ಗಿರಿಸಾಗರದ ಈ ಎತ್ತುಗಳು ಅಪರೂಪದ ಸಾಧನೆ ಮಾಡಿವೆ.ಗುಂಡಪ್ಪ ನೀರುಗ್ಗಿ ಮತ್ತು ಜಕ್ಕಪ್ಪ ನವಲಗನ್ ಎಂಬ ರೈತರಿಗೆ ಸೇರಿದ ಎತ್ತುಗಳಿಂದ ಈ ದಾಖಲೆ ನಿರ್ಮಾಣವಾಗಿದೆ.ಸಾಮಾನ್ಯವಾಗಿ ಒಂದು ಜೋಡೆತ್ತು ದಿನಕ್ಕೆ 4 ರಿಂದ 5 ಎಕರೆ ಮಾತ್ರ ಬಿತ್ತನೆ ಮಾಡುತ್ತವೆ. ಆದರೆ ಈ ಎತ್ತುಗಳು ಬೆಳಿಗ್ಗೆ 5 ಗಂಟೆಯಿಂದ ಸಂಜೆ 3 ಗಂಟೆವರೆಗೆ, ಅಂದರೆ 10 ತಾಸಿನಲ್ಲಿ 20 ಎಕರೆ ಬಿಳಿಜೋಳ ಬಿತ್ತನೆ ಮಾಡಿ ಟ್ರ್ಯಾಕ್ಟರ್ ಗೂ ಮೀರಿದ ವೇಗದಲ್ಲಿ ಕೆಲಸ ಮಾಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರವಿ ಹೆಚ್ ಮೂಕಿ, ಕಲಘಟಗಿ
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More