ನಿದ್ದೆ ಎಂದರೆ ಸಾವು, ಬೆಳಗ್ಗೆ ಎದ್ದರೆ ಪುನರ್ಜನ್ಮ: ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ನಟ ಅನಂತ್ ನಾಗ್ ಅವರು ತಮ್ಮ ಜೀವನ ಪಯಣವನ್ನು ಹಂಚಿಕೊಂಡಿದ್ದಾರೆ. ಹಿಂಜರಿಕೆ, ವೈಫಲ್ಯದ ಭಯ ಮೀರಿ ರಂಗಭೂಮಿ ತಮ್ಮಲ್ಲಿನ ಕಲಾವಿದನನ್ನು ರೂಪಿಸಿತು ಎಂದಿದ್ದಾರೆ. ಮುಂಬೈ ರಂಗಭೂಮಿಯ ಅನುಭವ, ಗುರುಗಳ ಪಾತ್ರ ಹಾಗೂ ನಿದ್ದೆ ಸಾವು, ಬೆಳಗ್ಗೆ ಎದ್ದರೆ ಪುನರ್ಜನ್ಮ ಎಂಬ ಅವರ ಜೀವನದ ದೃಷ್ಟಿಕೋನವನ್ನು ಈ ಸಂದರ್ಶನದಲ್ಲಿ ಅನಾವರಣಗೊಳಿಸಿದ್ದಾರೆ. ಆಶಾವಾದ ಮತ್ತು ದೃಢ ಸಂಕಲ್ಪದ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 03: ಹಿರಿಯ ನಟ ಅನಂತ್ ನಾಗ್ ಅವರು ತಮ್ಮ ಬದುಕಿನ ಆರಂಭಿಕ ದಿನಗಳ ಸಂಘರ್ಷ ಹಾಗೂ ನಟನಾ ಪಯಣವನ್ನು ಟಿವಿ9 ಕನ್ನಡ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿ ನಾಟಕವೊಂದರಲ್ಲಿ ಪಾತ್ರ ನಿರ್ವಹಿಸುವ ಅವಕಾಶ ಪಡೆದುಕೊಂಡಿದ್ದ ಅವರು ಅಲ್ಲಿಂದ ನಟನಾ ಪಯಣವನ್ನು ಆರಂಭಿಸಿದರು. ಮುಂಬೈ ರಂಗಭೂಮಿ ಅವರನ್ನು ಎರಡನೇ ಮನೆಯಂತೆ ಬರಮಾಡಿಕೊಂಡಿತು. ವೆಂಕಟರಾವ್ ತಲಗೇರಿ, ಪ್ರಭಾಕರ್ ಮುದೂರ್, ಆರ್.ಡಿ. ಕಾಮತ್ ಸೇರಿದಂತೆ ಅನೇಕ ಗುರುಗಳ ಮಾರ್ಗದರ್ಶನದಲ್ಲಿ ಅವರು ತರಬೇತಿ ಪಡೆದರು. ನಿರಂತರ ಅಭ್ಯಾಸ ಮತ್ತು ಮೂರು ನಾಟಕಗಳಲ್ಲಿ ಸತತವಾಗಿ ಅಭಿನಯಿಸಿದ ನಂತರ ನಟನೆಯಲ್ಲಿ ನಾನು ಯಶಸ್ವಿ ಆಗಬಹುದು ಎಂಬ ಛಲ ಅವರಲ್ಲಿ ಮೂಡಿತು. ಇನ್ನು ಜೀವನದಲ್ಲಿ ನಿದ್ದೆ ಎಂದರೆ ಸಾವು ಮತ್ತು ಪ್ರತಿದಿನ ಬೆಳಿಗ್ಗೆ ಎದ್ದೇಳುವುದು ಹೊಸ ಪುನರ್ಜನ್ಮವಿದ್ದಂತೆ ಎಂದು ಜೀವನದ ತತ್ವವನ್ನು ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

