Kannada Cinema
1934ರಲ್ಲಿ ಮೊದಲ ಕನ್ನಡ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಗುವ ಮೂಲಕ ಉದಯವಾದ ಕನ್ನಡ ಚಿತ್ರರಂಗಕ್ಕೆ 89 ವರ್ಷದ ಸುದೀರ್ಘ ಇತಿಹಾಸವಿದೆ.
ಮನರಂಜನೆಯ ಜೊತೆಗೆ ಜನ ಜಾಗೃತಿ ಮೂಡಿಸುವ, ಅಭಿರುಚಿ ಬೆಳೆಸುವ ಸಿನಿಮಾಗಳನ್ನು ಕನ್ನಡ ಚಿತ್ರರಂಗ ನೀಡುತ್ತಲೇ ಬಂದಿದೆ. ಸಿನಿಮಾಗಳ ಮೂಲಕ ಕನ್ನಡತನವನ್ನು ಪಸರಿಸುತ್ತಾ ಬಂದಿದೆ. ಸುಬ್ಬಯ್ಯ ನಾಯ್ಡು, ಭಾಗವತರ್, ಪಂಡರೀಬಾಯಿ ಅವರುಗಳು ಬಿತ್ತಿದ ಕನ್ನಡ ಚಿತ್ರರಂಗದ ಬೀಜಕ್ಕೆ ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಲೋಕೇಶ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ನಾಗ್, ಅಂಬರೀಶ್ ಅಂಥಹಾ ಇನ್ನೂ ಅನೇಕ ಮಹನೀಯರು ನೀರೆರೆದು ಹೆಮ್ಮರವಾಗಿ ಬಳೆಸಿದ್ದಾರೆ.
ಕನ್ನಡ ಚಿತ್ರರಂಗ ಇಂದು ವಾರ್ಷಿಕವಾಗಿ ಸಾವಿರಾರು ಕೋಟಿ ವ್ಯವಹಾರ ನಡೆಯುವ ತಾಣ, ವರ್ಷಕ್ಕೆ ಸರಾಸರಿ 200 ರಿಂದ 250 ಕನ್ನಡ ಸಿನಿಮಾಗಳು ಇಲ್ಲಿ ತಯಾರುತ್ತಿವೆ. ಇತ್ತೀಚೆಗಿನ ವರ್ಷಗಳಲ್ಲಿ ‘ಕೆಜಿಎಫ್’, ‘ಕಾಂತಾರ’, ‘ವಿಕ್ರಾಂತ್ ರೋಣ’ ಇನ್ನೂ ಕೆಲವು ಸಿನಿಮಾಗಳು ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಗೊಳಿಸಿವೆ.