ಮದುವೆ ವಿಷಯಕ್ಕೆ ವೇದಿಕೆಯಲ್ಲೇ ಅನುಶ್ರೀಗೆ ಕೈ ಮುಗಿದು ಕ್ಷಮೆ ಕೇಳಿದ ಪ್ರೇಮ್
ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಚಿತ್ರದಿಂದ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಮಾಡಿದ್ದಾರೆ. ಈ ವೇಳೆ ವೇದಿಕೆಗೆ ಬಂದ ಪ್ರೇಮ್ ಅವರು ಅನುಶ್ರೀ ಬಳಿ ಕೈ ಮುಗಿದು ಕ್ಷಮೆ ಕೇಳಿದರು. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ತಿಳಿಸಿದರು.
ಜೋಗಿ ಪ್ರೇಮ್ (Jogi Prem) ನಿರ್ದೇಶನ ಮಾಡಿರುವ ‘ಕೆಡಿ’ ಚಿತ್ರದಿಂದ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಮಾಡಿದ್ದಾರೆ. ಈ ವೇಳೆ ವೇದಿಕೆಗೆ ಬಂದ ಪ್ರೇಮ್ ಅವರು ಅನುಶ್ರೀ ಬಳಿ ಕೈ ಮುಗಿದು ಕ್ಷಮೆ ಕೇಳಿದರು. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ತಿಳಿಸಿದರು. ‘ಅನುಶ್ರೀ ಅವರ ಮದುವೆಗೆ ನಾನು ಹೋಗಿರಲಿಲ್ಲ. ಅದಕ್ಕೆ ಇಲ್ಲಿಯೇ ಕ್ಷಮೆ ಕೇಳುತ್ತೇನೆ. ದಯವಿಟ್ಟು ಕ್ಷಮೆ ಇರಲಿ’ ಎಂದು ಪ್ರೇಮ್ ಹೇಳಿದರು. ಆ ಮಾತಿಗೆ ಅನುಶ್ರೀ (Anushree) ನಕ್ಕರು. ಅನುಶ್ರೀ ಮತ್ತು ಪ್ರೇಮ್ ಅವರ ನಡುವೆ ಹಲವು ವರ್ಷಗಳಿಂದ ಒಡನಾಟ ಇದೆ. ಆದರೂ ಕೂಡ ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಸದ್ಯ ‘ಕೆಡಿ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

