ಶಿವಗಂಗೆಯಲ್ಲಿ ಅದ್ವೈತ್ ಉಪಾಧ್ಯಾಯ ನಾಪತ್ತೆ ಕೇಸ್: ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಶಿವಗಂಗೆಯಲ್ಲಿ ನಾಪತ್ತೆಯಾಗಿರುವ ಅದ್ವೈತ್ ಉಪಾಧ್ಯಾಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೋಲೀಸರ ತನಿಖೆಯಲ್ಲಿ ಆತ ಹೈಲಿ ಟ್ಯಾಲೆಂಟೆಡ್ ಹ್ಯಾಕರ್ ಎಂಬುದು ಬಹಿರಂಗವಾಗಿದೆ. ನಿಶ್ಚಿತಾರ್ಥವಾಗಿದ್ದರೂ ಹಲವು ಯುವತಿಯರೊಂದಿಗೆ ಸಂಪರ್ಕದಲ್ಲಿದ್ದ ಅದ್ವೈತ್, ಶಿವಗಂಗೆಗೆ ಬರುವ ಮುನ್ನ ಶಾಂತಲಾ ಡ್ರಾಪ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎಂಬುದು ತಿಳಿದುಬಂದಿದೆ.
ನೆಲಮಂಗಲ, ಆಗಸ್ಟ್ 11: ಶಿವಗಂಗೆಯಲ್ಲಿ ನಾಪತ್ತೆಯಾಗಿದ್ದ ಟ್ರೆಕ್ಕರ್ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಪೋಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಅದ್ವೈತ್ ಹೈಲಿ ಟ್ಯಾಲೆಂಟೆಡ್ ಹ್ಯಾಕರ್ ಆಗಿದ್ದ ಎನ್ನಲಾಗಿದೆ. ಪ್ರಾಪ್ತಿ ಚೌಹಾಣ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಬೇರೊಂದು ಹುಡುಗಿಯೊಂದಿಗೆ ಚಾಟ್ ಮಾಡುತ್ತಿದ್ದ ವಿಚಾರ ಪೋಲೀಸರ ತನಿಖೆಯಲ್ಲಿ ಬಯಲಾಗಿದೆ. ಶಿವಗಂಗೆಗೆ ಬರುವ ಮುನ್ನವೇ ಅದ್ವೈತ್, ಚಾಟ್ ಜಿಪಿಟಿಯಲ್ಲಿ ಶಾಂತಲಾ ಡ್ರಾಪ್ ಬಗ್ಗೆ ಮತ್ತು ಅಲ್ಲಿಂದ ಇಳಿಯುವ ಮಾರ್ಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಟ್ರೆಕ್ಕಿಂಗ್ ನೆಪದಲ್ಲಿ ಪ್ರಾಪ್ತಿಗೆ ಫೋಟೋ ಕಳುಹಿಸಿದ್ದ ಅದ್ವೈತ್, ಶಾಂತಲಾ ಡ್ರಾಪ್ ಬಳಿ ಮೊಬೈಲ್ ಮತ್ತು ಡ್ರೋಣ್ ಕ್ಯಾಮರಾವನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಕುದೂರು ಬಳಿ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೋಲೀಸರಿಗೆ ಮಾಹಿತಿ ಸಿಕ್ಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ

