AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಸಾಯೋವರೆಗೂ ಚಿರಋಣಿ’; ಧನ್ಯವಾದ ಹೇಳಿದ ಆ್ಯಂಕರ್ ಅನುಶ್ರೀ

ಆ್ಯಂಕರ್ ಅನುಶ್ರೀ ತಮ್ಮ ವೃತ್ತಿ ಜೀವನದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಗೆ ಧನ್ಯವಾದ ಅರ್ಪಿಸಿದ್ದಾರೆ. ನಟಿಯಾಗುವ ಪ್ರಯತ್ನ ವಿಫಲವಾದಾಗ, ಜೀ ಕನ್ನಡ ಹೊಸ ಬದುಕು ನೀಡಿತು ಎಂದು ಸ್ಮರಿಸಿದ್ದಾರೆ. ತಮ್ಮ ಯಶಸ್ಸಿಗೆ ಜೀ ಕನ್ನಡವೇ ಪ್ರಮುಖ ಕಾರಣ ಎಂದು ಭಾವಪರವಶರಾಗಿ, "ನಾನು ಸಾಯೋವರೆಗೂ ಚಿರಋಣಿ" ಎಂದು ಹೇಳಿದ್ದಾರೆ.

‘ನಾನು ಸಾಯೋವರೆಗೂ ಚಿರಋಣಿ’; ಧನ್ಯವಾದ ಹೇಳಿದ ಆ್ಯಂಕರ್ ಅನುಶ್ರೀ
ಅನುಶ್ರೀ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 31, 2026 | 8:10 AM

Share

ಅನುಶ್ರೀ (Anushree) ಅವರು ಈಗ ಆ್ಯಂಕರ್ ಅನುಶ್ರೀ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ವೃತ್ತಿ ಜೀವನ. ಅವರು ಆ್ಯಂಕರಿಂಗ್ ಮಾಡಿ, ಆ್ಯಂಕರ್ ಅನುಶ್ರೀ ಎಂದೇ ಫೇಮಸ್ ಆಗಿದ್ದಾರೆ. ಈಗ ಅನುಶ್ರೀ ಅವರು ವೃತ್ತಿ ಜೀವನಕ್ಕೆ 20 ವರ್ಷಗಳು ತುಂಬಿವೆ. ಈ ವಿಶೇಷ ಕ್ಷಣವನ್ನು ಜೀ ಕನ್ನಡದವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-2025 ಮತ್ತು ‘ಕಿಲಾಡಿ ಜೂನಿಯರ್ಸ್’ಮಹಾಸಂಗಮ’ದಲ್ಲಿ ಆಚರಿಸಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಅನುಶ್ರೀ ಅವರು ಈ ಸಂದರ್ಭದಲ್ಲಿ ಭಾವುಕರಾದರು.

ಅನುಶ್ರೀ ಅವರು ಆ್ಯಂಕರಿಂಗ್ ಮೂಲಕ ಗಮನ ಸೆಳೆದವರು. ಅವರು ನಟಿಯಾಗಿಯೂ ಪ್ರುತ್ನಿಸಿದರು. ಆದರೆ, ಅಷ್ಟಾಗಿ ಯಶಸ್ಸು ಕಾಣಲೇ ಇಲ್ಲ. ಅವರಿಗೆ ಹೊಸ ಬದುಕು ನೀಡಿದ್ದು ಜೀ ಕನ್ನಡ ವಾಹಿನಿ ಎಂದರೂ ತಪ್ಪಾಗಲಾರದರು. ಯಾವುದೇ ರಿಯಾಲಿಟಿ ಶೋ ಬಂದರು ಅವರ ಉಪಸ್ಥಿತಿ ಇದ್ದೇ ಇರುತ್ತದೆ. ಒಂದು ಶೋಗೆ ಅವರು ಆ್ಯಂಕರಿಂಗ್ ಮಾಡಿಯೇ ಮಾಡುತ್ತಾರೆ. ಈಗ ಅನುಶ್ರೀ ಅವರ ವೃತ್ತಿ ಜೀವನಕ್ಕೆ 20 ವರ್ಷ ಆಗಿದ್ದನ್ನು ಸಂಭ್ರಮಿಸಲಾಗಿದೆ.

View this post on Instagram

A post shared by Zee Kannada (@zeekannada)

‘ನೂರಾರು ಕನಸು ಇತ್ತು. ಎಲ್ಲವನ್ನೂ ಕಟ್ಟಿಟ್ಟು, ದುಡಿಮೆಯನ್ನೇ ಕನಸನ್ನಾಗಿ ಮಾಡಿಕೊಂಡ ಆ ಅನುಶ್ರೀಗೆ ಧನ್ಯವಾದಗಳು. ನನಗೆ ನಾನೇ ಧನ್ಯವಾದ ಹೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು. ಆ ಬಳಿಕ ಅಕುಲ್ ಬಾಲಾಜಿ, ಕುರಿ ಪ್ರತಾಪ್, ಅನುಪಮಾ ಗೌಡ ಸೇರಿದಂತೆ ಅನೇಕರು ಅನುಶ್ರೀಗೆ ಅಭಿನಂದನೆ ತಿಳಿಸಿದರು. ಅವರ ಕೆಲಸವನ್ನು ಶ್ಲಾಘಿಸಿದರು.

ಇದನ್ನೂ ಓದಿ: ಬಡತನ ಇದ್ದರೆ ಡಿಕೆಡಿಲಿ ಚಾನ್ಸ್ ಸಿಗುತ್ತೆ ಎಂದವರಿಗೆ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಅನುಶ್ರೀ

‘ನಾನು ಸಾಯೋವರೆಗೂ ಚಿರಋಣಿ ಆಗಿ ಇರುತ್ತೇನೆ’ ಎಂದು ಜೀ ಕನ್ನಡ ವಾಹಿನಿಗೆ ಅನುಶ್ರೀ ಧನ್ಯವಾದ ತಿಳಿಸಿದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಅನುಶ್ರೀ ಅವರ ಆ್ಯಂಕರ್​​ನ ಕರ್ನಾಟಕದ ಜನತೆ ಮೆಚ್ಚಿದೆ. ಆದರೆ, ಒಂದು ಒಳ್ಳೆಯ ವೇದಿಕೆ ನೀಡಿದ್ದು ಜೀ ಕನ್ನಡ ವಾಹಿನಿ. ಹೀಗಾಗಿ, ಜೀ ವಾಹಿನಿಗೆ ಅವರು ಚಿರಋಣಿ ಆಗಿರೋದಾಗಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.