Video: ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿ ಗೆದ್ದಂತೆ ಸಂಭ್ರಮಿಸಿದ ಮಹಿಳೆ
ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಹೀಗಾಗಿ ಎಲ್ಲಿ ನೋಡಿದರಲ್ಲಿ ಡಿಜಿಟಲ್ ಪಾವತಿಗಳು. ಸಣ್ಣ ಪುಟ್ಟ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್‌ಗಳಲ್ಲಿಯೂ ಸ್ಕ್ಯಾನರ್ ಗಳು. ಆದರೆ ಇಲ್ಲೊಬ್ಬ ಮಹಿಳೆ ಮೊದಲ ಬಾರಿಗೆ ಡಿಜಿಟಲ್ ಪಾವತಿ ಮಾಡಿ ಖುಷಿ ಪಟ್ಟ ಕ್ಷಣದ ವಿಡಿಯೋ ಇದಾಗಿದೆ. ಈ ಕ್ಲಿಪಿಂಗ್ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

ಹೆತ್ತವರಿಗೆ (parents) ಮಕ್ಕಳೇ ಪ್ರಪಂಚ. ಹೀಗಾಗಿ ಮಕ್ಕಳ ಸಂತೋಷಕ್ಕಾಗಿ ತಂದೆ ತಾಯಿ ಏನನ್ನೂ ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಇತ್ತ ಮಕ್ಕಳಿಗೂ ಕೂಡ ತಮ್ಮ ಹೆತ್ತವರ ಮೊಗದಲ್ಲಿನ ಖುಷಿ, ಸಂತೋಷ ಕಂಡು ಖುಷಿ ಪಡುತ್ತಾರೆ. ಇಲ್ಲೊಬ್ಬಳು ಮಗಳು ತನ್ನ ತಾಯಿಯ (mother) ಖುಷಿಯನ್ನು ಕಣ್ತುಂಬಿಸಿಕೊಂಡಿದ್ದಾಳೆ. ಮಹಿಳೆಯೊಬ್ಬಳು ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ಆಕೆಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಮಗಳ ಮುಂದೆ ತನ್ನ ಖುಷಿಯನ್ನು ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@venus_mathur ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಮಗಳು ವೀನಸ್ ಮಾಥುರ್, ನನಗೆ ಎಲ್ಲವನ್ನೂ ಕಲಿಸಿದ ಮಹಿಳೆ. ಇಂದು, ನನ್ನಿಂದ ಹೊಸದನ್ನು ಕಲಿತಳು. ಅವಳ ಮೊದಲ ಆನ್‌ಲೈನ್ ಪಾವತಿ ಎಂಬ ಶೀರ್ಷಿಕೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಬಳಿ, ತಾನು ಮೊದಲ ಬಾರಿಗೆ ಡಿಜಿಟಲ್ ಮೂಲಕ ಹಣವನ್ನು ಹೇಗೆ ಕಳುಹಿಸುವಲ್ಲಿ ಯಶಸ್ವಿಯಾದೆ. ತನ್ನನ್ನುಆ ಕ್ಷಣವೂ ಹೇಗೆ ಹೆಮ್ಮೆ ಪಡಿಸುವಂತೆ ಮಾಡಿತು ಎಂದು ವಿವರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ತಾನು ನಂಬರ್ ನಮೂದಿಸಿ ಯಶಸ್ವಿಯಾಗಿ ಪಾವತಿ ಮಾಡಿದ್ದೇನೆ ಎನ್ನುತ್ತಿದ್ದಂತೆ ಆ ಕ್ಷಣವನ್ನು ರೆಕಾರ್ಡ್ ಮಾಡುತ್ತಿರುವ ಆಕೆಯ ಮಗಳು ಆಶ್ಚರ್ಯದಿಂದ ಪ್ರತಿಕ್ರಿಯಿಸುತ್ತಾ, “ಅರೆ ವಾಹ್” ಎಂದು ಹೇಳುತ್ತಾಳೆ. ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ನನಗೆ ತುಂಬಾ ಆತ್ಮವಿಶ್ವಾಸವನ್ನು ನೀಡಿತು ಎಂದು ತಾಯಿ ಹೇಳುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಮಗಳು ವಾವ್ ಸೂಪರ್ ಅಮ್ಮ ಎನ್ನುತ್ತಾಳೆ. ಇತ್ತೀಚಿನ ದಿನಗಳಲ್ಲಿ ತಾನು ಹೊಸ ಅನುಭವಗಳನ್ನು ಆನಂದಿಸಲು ಪ್ರಾರಂಭಿಸಿದ್ದೇನೆ. ಹೊಸದನ್ನು ಕಲಿಯುವುದರ ಬಗ್ಗೆ ತನಗೆ ಎಷ್ಟು ಹೆಮ್ಮೆ ಇದೆ ಎಂಬುದನ್ನು ಮಹಿಳೆ ಹೇಳುವುದನ್ನು ಕಾಣಬಹುದು.
ಇದನ್ನೂ ಓದಿ: ನೆಮ್ಮದಿಯಿಂದ ಚಹಾ ಕುಡಿಯಲು ಆಗ್ತಾ ಇಲ್ಲ; ಕಂದಮ್ಮನ ಆರೈಕೆಯನ್ನು ನೆನೆದು ಭಾವುಕಳಾದ ತಾಯಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ತಾಯಿ ಸ್ವತಂತ್ರರಾಗುವುದನ್ನು ನೋಡುವುದು ಅದೆಂತಹ ಅನುಭವ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅವಳ ಮುಖದಲ್ಲಿರುವ ಸಂತೋಷವನ್ನು ನೋಡಿ ಎಂದಿದ್ದಾರೆ. ಮತ್ತೊಬ್ಬರು, ಏನೋ ಸಾಧಿಸಿದೆ ಎನ್ನುವ ಭಾವ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
