Viral Video
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಹಾಗೂ ಸುದ್ದಿಗಳನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು. ಓದುಗರಿಗೆ ಈ ಜಗತ್ತಿನಲ್ಲಿ ತಿಳಿಯದ ಸುದ್ದಿಗಳನ್ನು ಟ್ರೆಂಡಿಂಗ್ನಲ್ಲಿ ನೀಡಲಾಗುವುದು. ಅದೆಷ್ಟು ಜನರಿಗೆ ನಮ್ಮ ಸುತ್ತ-ಮುತ್ತಲಿನಲ್ಲಿ ನಡೆಯುವ ವಿಚಾರಗಳು ತಿಳಿದಿರುವುದಿಲ್ಲ. ಹಾಗೂ ಅದನ್ನು ತಿಳಿಸುವ ಕೆಲಸವನ್ನು ಟ್ರೆಂಡಿಂಗ್ ಕ್ಯಾಟಗರಿಯಲ್ಲಿ ತಿಳಿಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ಸುದ್ದಿಗಳು, ತಕ್ಷಣಕ್ಕೆ ವೈರಲ್ ಕ್ಯಾಟಗರಿಗಳಲ್ಲಿ ನೀಡಿಲಾಗುವುದು. ಜಗತ್ತಿನಲ್ಲಿ ಆಗುವ ವೈರಲ್ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ,
Video: ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ
ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದಲ್ಲಿ ಎಷ್ಟೇ ಒತ್ತಡವಿರಲಿ, ಧೈರ್ಯ ತುಂಬುವ ವ್ಯಕ್ತಿಗಳಿದ್ದರೆ ಅವರಷ್ಟು ಅದೃಷ್ಟವಂತರು ಮತ್ತೊಬ್ಬರಿಲ್ಲ. ಇಲ್ಲೊಬ್ಬ ಯುವತಿಯು ವೃತ್ತಿ ಜೀವನದ ಒತ್ತಡದಿಂದ ಕುಸಿದಿದ್ದು ತಂದೆಯ ಮಾತು ಈಕೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- Sainandha P
- Updated on: Dec 4, 2025
- 5:54 pm
Video: ನನ್ನಮ್ಮನಿಗೆ ಫೋನ್ ಮಾಡಿ, ನನ್ನ ಅಮ್ಮನ ಹೆಸರು ಮಮ್ಮಾ; ಶಾಲೆಯಲ್ಲಿ ಕಣ್ಣೀರಿಟ್ಟ ಪುಟಾಣಿ
ಸಣ್ಣ ಮಕ್ಕಳೇ ಹಾಗೆ, ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದನ್ನು ನೋಡಿರುತ್ತೀರಿ. ಆದರೆ ಈಗಿನ ಶಿಕ್ಷಣವು ಮಕ್ಕಳ ಬಾಲ್ಯವನ್ನು ಕಸಿದುಕೊಂಡಿದೆ. ಎರಡರಿಂದ ಮೂರು ವರ್ಷದ ಪುಟ್ಟ ಮಕ್ಕಳ ಕಿಟಕಿಯಲ್ಲಿ ಇಣುಕುತ್ತಾ ಅಮ್ಮನಿಗಾಗಿ ಗೊಗರೆಯುತ್ತಿದ್ದಾರೆ. ಕರುಳು ಚುರ್ ಎನ್ನುವ ಈ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- Sainandha P
- Updated on: Dec 4, 2025
- 12:37 pm
Video: ಕಾಯಕದಲ್ಲೇ ಖುಷಿ ಕಾಣುವ ವ್ಯಕ್ತಿಯ ಚಿತ್ರ ಬಿಡಿಸಿ ಮೊಗದಲ್ಲಿ ನಗು ಮೂಡಿಸಿದ ಯುವಕಲಾವಿದ
ಕಲಾವಿದರೇ ಹಾಗೆ, ಅಪರಿಚಿತ ವ್ಯಕ್ತಿಯ ಚಿತ್ರವನ್ನು ಬಿಡಿಸಿ ಅವರ ಮೊಗದಲ್ಲಿ ನಗು ಮೂಡಿಸುತ್ತಾರೆ. ಆದರೆ ಇಲ್ಲೊಬ್ಬ ಕಲಾವಿದ ಮನೆ ಮನೆಗೆ ಪೇಪರ್ ಹಾಕುತ್ತಿರುವ ವ್ಯಕ್ತಿಯ ಚಿತ್ರ ಬಿಡಿಸಿ, ಮೊಗದಲ್ಲಿ ನಗು ತರಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.
- Sainandha P
- Updated on: Dec 3, 2025
- 3:50 pm
ಅಂಜನಾದ್ರಿಯಲ್ಲೂ ಲಾರೆನ್ಸ್ ಬಿಷ್ಣೋಯಿ ಫೊಟೋ ಪ್ರತ್ಯಕ್ಷ! ತಾನು ಗ್ಯಾಂಗ್ಸ್ಟರ್ ಅಭಿಮಾನಿ ಎಂದ ಹನುಮ ಭಕ್ತ
ಕೊಪ್ಪಳದ ಅಂಜನಾದ್ರಿಯಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಹನುಮ ಮಾಲೆ ಧರಿಸಿ ಬಂದ ಬೆಳಗಾವಿ ಜಿಲ್ಲೆಯ ಭಕ್ತನೊಬ್ಬ ಲಾರೆನ್ಸ್ ಬಿಷ್ಣೋಯಿ ಫೋಟೊ ಹಿಡಿದುಕೊಂಡು ಬಂದಿದ್ದು, ತಾನು ಆತನ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಸದ್ಯ ಆ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
- Shivakumar Pattar
- Updated on: Dec 3, 2025
- 1:59 pm
Video: ಎಂಬಿಎ ಪದವಿ, ಕೈ ತುಂಬಾ ಸಂಬಳ, ಐಷಾರಾಮಿ ಬದುಕು ಕಂಡ ವ್ಯಕ್ತಿ ಇಂದು ಬೀದಿ ಬದಿ ಭಿಕ್ಷುಕ
ಬದುಕು ಹೊಡೆತಗಳ ಮೇಲೆ ಹೊಡೆತಗಳನ್ನು ನೀಡುತ್ತದೆ. ಮೇಲೆದ್ದು ಸುಧಾರಿಸಿಕೊಳ್ಳಲು ಕೆಲವರಿಗೆ ಸಾಧ್ಯ ಆಗೋದೇ ಇಲ್ಲ. ನಮ್ಮ ಸುತ್ತಮುತ್ತಲಿನಲ್ಲಿರುವ ಕೆಲ ಜನರ ಜೀವನವನ್ನು ನೋಡಿದ್ರೆ ಕಣ್ಣಂಚಲಿ ನೀರು ಬರುತ್ತದೆ. ಡಬಲ್ ಡಿಗ್ರಿ ಪಡೆದು ತಿಂಗಳಿಗೆ ಒಂದು ಲಕ್ಷ ರೂ ಸಂಬಳ ಬರುವ ಉದ್ಯೋಗದಲ್ಲಿದ್ದ ವ್ಯಕ್ತಿ ಇಂದು ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಾ ತುತ್ತು ಅನ್ನಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ. ಕಣ್ಣಲ್ಲಿ ನೀರು ತರಿಸುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- Sainandha P
- Updated on: Dec 3, 2025
- 12:53 pm
Bengaluru life Vs Village life: ಹಳ್ಳಿ ಜೀವನ ಸ್ವರ್ಗ; ಇದು ಹಳ್ಳಿಯ ಮುಗ್ಧ ಜನರ ಮನಸ್ಸಿನ ಮಾತು
ಓದು ಮುಗಿಯುತ್ತಿದ್ದಂತೆ ಕೆಲಸಕ್ಕೆಂದು ಬೆಂಗಳೂರಿನತ್ತ ಯುವಕ ಯುವತಿಯರು ಮುಖ ಮಾಡ್ತಾರೆ. ಸಿಟಿ ಲೈಫ್ನ್ನು ಎಂಜಾಯ್ ಮಾಡುವ ಇಂದಿನ ಯುವಪೀಳಿಗೆ ಹಳ್ಳಿ ಜನರ ಈ ಮಾತು ಕೇಳಿದ್ರೆ ಶಾಕ್ ಆಗ್ತೀರಾ. ಹೌದು, ಬೆಂಗಳೂರು ಜೀವನಕ್ಕಿಂತ ಹಳ್ಳಿ ಜೀವನವೇ ಸ್ವರ್ಗ ಎಂದು ಇಲ್ಲಿ ಖುಷಿಯಿಂದ ಬದುಕುತ್ತಿರುವ ಹಳ್ಳಿ ಜನರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ.
- Sainandha P
- Updated on: Dec 3, 2025
- 11:36 am
ಚಾಮರಾಜನಗರ: 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗ್ರಾಮಕ್ಕೆ ಲಗ್ಗೆ, ಬೆಚ್ಚಿಬೀಳಿಸುವ ವಿಡಿಯೋ ಇಲ್ಲಿದೆ ನೋಡಿ
ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿ ಭಾಗದ ರೈತರು ಕಾಡಾನೆ ಭೀತಿಯಿಂದ ಜಮೀನುಗಳಿಗೆ ತೆರಳದೆ ಮನೆಯಲ್ಲೇ ಉಳಿಯುವಂತಾಗಿದೆ. ಅರಳವಾಡಿ ಹಾಗೂ ತಾಳವಾಡಿ ಗ್ರಾಮಗಳ ಬಳಿ 40ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ರೈತರನ್ನು ಬೆಚ್ಚಿಬೀಳಿಸಿದೆ. ಕಾಡಾನೆ ಹಿಂಡು ಗ್ರಾಮದಲ್ಲಿ ಸಂಚರಿಸುತ್ತಿರುವ ಭಯಾನಕ ವಿಡಿಯೋ ಇಲ್ಲಿದೆ ನೋಡಿ.
- Suraj Prasad SN
- Updated on: Dec 3, 2025
- 8:14 am
Video: ಕುಂದದ ಜೀವನೋತ್ಸಾಹ; 76 ರ ಹರೆಯದಲ್ಲೂ ವಾಚ್ ರಿಪೇರಿ ಮಾಡಿ ನೆಮ್ಮದಿ ಜೀವನ ಸಾಗಿಸುತ್ತಿರುವ ವ್ಯಕ್ತಿ
ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ಬದುಕು ನಮ್ಮನ್ನು ಎಲ್ಲಿಗೋ ಕೊಂಡ್ಯೊಯುತ್ತದೆ. ಇದಕ್ಕೆ ಈ ಹಿರಿಜೀವವೇ ಉದಾಹರಣೆ. ವಾಚ್ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿರುವ ಈ ವ್ಯಕ್ತಿಯೂ ಎಲ್ಲರಿಗೂ ಸ್ಫೂರ್ತಿ. ತಮ್ಮ ಇಳಿ ವಯಸ್ಸಿನಲ್ಲೂ ಬದುಕಿಗೆ ಆಸರೆಯಾಗಿರುವ ಈ ಕಾಯಕವನ್ನು ಮಾಡುತ್ತಾ ಖುಷಿ ಕಾಣುವ ಈ ವೃದ್ಧ ವ್ಯಕ್ತಿಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
- Sainandha P
- Updated on: Dec 2, 2025
- 6:27 pm
Video: ಇದು ಸ್ಪೆಷಲ್ ಫ್ರೂಟ್ ಗ್ರೇವಿ ಮೊಮೊಸ್; ಟೇಸ್ಟ್ ಅಂತೂ ಸೂಪರ್
ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಕಾಂಬಿನೇಷನ್ ಫುಡ್ ಬಹಳನೇ ಟ್ರೆಂಡ್ ಆಗಿ ಬಿಟ್ಟಿದೆ. ಊಹಿಸಲು ಸಾಧ್ಯವಾಗದ ಆಹಾರ ಪ್ರಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಬೀದಿ ಬದಿ ವ್ಯಾಪಾರಿಯೊಬ್ಬ ಫ್ರೂಟ್ ಗ್ರೇವಿ ಮೊಮೊಸ್ ತಯಾರಿಸಿ ಆಹಾರ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
- Sainandha P
- Updated on: Dec 2, 2025
- 4:35 pm
Video: ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟು ಟ್ರಿಪ್ಗೆ ಹೋಗಿದ್ದ ಫ್ಯಾಮಿಲಿ, ಮುಂದೆ ಆಗಿದ್ದೇ ಬೇರೆ
ಸಾಮಾನ್ಯವಾಗಿ ಕೆಲವರು ತಿಂಗಳಲ್ಲಿ ಒಂದು ಅಥವಾ ಎರಡು ಟ್ರೇ ಮೊಟ್ಟೆಗಳನ್ನು ತಂದು ಇಟ್ಟುಕೊಳ್ತಾರೆ. ಈ ಕುಟುಂಬವು ಕೂಡ ಮೂರು ಟ್ರೇ ಮೊಟ್ಟೆಗಳನ್ನು ಮನೆಯಲ್ಲಿ ತಂದು ಇಟ್ಟಿದೆ. ಆ ಬಳಿಕ ಒಂದಲ್ಲ ಬರೋಬ್ಬರಿ ಎರಡು ಟ್ರಿಪ್ಗೆಂದು ತೆರಳಿದೆ. ಪ್ರವಾಸ ಮುಗಿಸಿ ಮನೆಗೆ ಬಂದ ಸದಸ್ಯರು ಮನೆ ತುಂಬಾ ಓಡಾಡುತ್ತಿದ್ದ ಕೋಳಿ ಮರಿಗಳನ್ನು ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
- Sainandha P
- Updated on: Dec 2, 2025
- 12:59 pm