ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಆನೇಕಲ್ನ ಖಾಸಗಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಸದ್ಯ ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಈ ಘಟನೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ವಿಡಿಯೋ ನೋಡಿ.
- Ramu Ram
- Updated on: Jan 9, 2026
- 4:33 pm
ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ ಆರೋಪ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಆನೇಕಲ್ನ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ನೊಂದು ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಸೆಮಿನಾರ್, ರೇಡಿಯಾಲಜಿ ಕೇಸ್ ನೀಡದೆ ಮತ್ತು ವೈಯಕ್ತಿಕ ವಿಚಾರದಲ್ಲಿ ಆಕೆಯನ್ನು ಅವಮಾನಿಸಿಸಲಾಗಿತ್ತು. ಹೀಗಾಗಿ ವಿದ್ಯಾರ್ಥಿನಿ ನೊಂದಿದ್ದಳು ಎನ್ನಲಾಗಿದೆ. ಮಗಳ ಸಾವಿಗೆ ನ್ಯಾಯ ಕೋರಿ ಪೋಷಕರು ಮತ್ತು ಸ್ನೇಹಿತರು ಶವಾಗಾರದ ಎದುರು ಪ್ರತಿಭಟಿಸಿದ್ದಾರೆ.
- Ramu Ram
- Updated on: Jan 9, 2026
- 2:51 pm
ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ
ಚಂದಾಪುರದಿಂದ ಅತ್ತಿಬೆಲೆವರೆಗೆ ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಾಲ್ಕೈದು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿ ಆ್ಯಂಬುಲೆನ್ಸ್ ಸಿಲುಕಿ, ರೋಗಿಯೊಬ್ಬರು ನರಳಾಡುವಂತಾಯಿತು. ದಿನನಿತ್ಯ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
- Ramu Ram
- Updated on: Jan 9, 2026
- 11:15 am
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ರಾತ್ರಿಪೂರ್ತಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷದ ಹಿನ್ನೆಲೆ ರೌಡಿಶೀಟರ್ನ ಅಪಹರಿಸಿರೋ ಗ್ಯಾಂಗ್ ಆತನ ಬೆಳರು ಕತ್ತರಿಸಿ ವಿಕೃತಿ ಮೆರೆದಿದ್ದಲ್ಲದೆ, ಚಿತ್ರಹಿಂಸೆ ನೀಡಿರುವ ಘಟನೆ ಆನೇಕಲ್ ತಾಲ್ಲೂಕಿನ ಹುಸ್ಕೂರು ಬಳಿ ನಡೆದಿದೆ. ರೌಡಿಶೀಟರ್ ಸ್ಥಿತಿ ಸದ್ಯ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
- Ramu Ram
- Updated on: Jan 8, 2026
- 2:27 pm
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕರ್ನಾಟಕದಲ್ಲೇ ಕನ್ನಡ ಮಾತನಾಡಬಾರದು ಎಂದು ಧಮ್ಕಿ ಹಾಕಿದರೆ ಹೇಗೆ? ಬನ್ನೇರುಘಟ್ಟ ರಸ್ತೆ ಸಮೀಪದ ಕಲ್ಕೆರೆ ಬಳಿ ಇರುವ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡದಂತೆ ವಾರ್ಡನ್ ಧಮ್ಕಿ ಹಾಕಿದ ಆರೋಪ ಕೇಳಿಬಂದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಸದ್ಯ ಈ ವಿಚಾರವಾಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
- Ramu Ram
- Updated on: Jan 5, 2026
- 11:52 am
Video: ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಇಂದು ಸಂಜೆಯಿಂದ ಈ ರಸ್ತೆ ಬಂದ್
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಅಪಘಾತಗಳನ್ನು ತಡೆಯಲು ಬೆಂಗಳೂರಿನ ಅತಿ ಉದ್ದದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಇಂದು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಂದ್ ಆಗಲಿದೆ. ಬೈಕ್, ಕಾರು, ಬಸ್ ಸೇರಿದಂತೆ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮನವಿ ಮಾಡಿದ್ದಾರೆ.
- Ramu Ram
- Updated on: Dec 31, 2025
- 2:46 pm
ಆನೇಕಲ್: ಸ್ಲೀಪರ್ ಕೋಚ್ ಬಸ್ಗಳ ನಡುವೆ ಭೀಕರ ಅಪಘಾತ
ಚಿತ್ರದುರ್ಗ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆನೇಕಲ್ನಲ್ಲಿ ಎರಡು ಸ್ಲೀಪರ್ ಕೋಚ್ ಬಸ್ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಚಂದಾಪುರ ಫ್ಲೈಓವರ್ ಮೇಲೆ ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಲೀಪರ್ ಕೋಚ್ ಬಸ್ಗಳು ಡಿಕ್ಕಿಯಾಗಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್, ಭಾರಿ ಸಾವು-ನೋವು ಉಂಟಾಗಿಲ್ಲ.
- Ramu Ram
- Updated on: Dec 31, 2025
- 9:29 am
ಜೈಲಿಂದ ವೀರೇಂದ್ರ ಪಪ್ಪಿ ರಿಲೀಸ್: ಹೂವಿನ ಹಾರ ಹಾಕಿ ಅಭಿಮಾನಿಗಳಿಂದ ಭರ್ಜರಿ ಸ್ವಾಗತ
ಚಿತ್ರದುರ್ಗದ ಚಳ್ಳಕೆರೆ ಶಾಸಕ ವೀರೇಂದ್ರ ಪಪ್ಪಿ, 4 ತಿಂಗಳ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಸಿಕ್ಕ ಹಿನ್ನೆಲೆ ಪಪ್ಪಿ ಬಿಡುಗಡೆಯಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಹೂವಿನ ಹಾರ ಹಾಕಿ, ಘೋಷಣೆ ಕೂಗಿ ಸ್ವಾಗತಿಸಿದರು.
- Ramu Ram
- Updated on: Dec 30, 2025
- 9:25 pm
ಫ್ಲೈ ಓವರ್ ಮೇಲೆ ಖಾಸಗಿ ಬಸ್ಗಳ ನಡುವೆ ರೇಸ್: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಟೂರಿಸ್ಟ್ ಬಸ್ ಚಾಲಕರು ಅತಿವೇಗದಿಂದ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಾರೆ. ನಾ ಮುಂದು ತಾ ಮುಂದು ಎಂಬಂತೆ ಬಸ್ಸುಗಳನ್ನು ಚಲಾಯಿಸಿ ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದಾರೆ. ಬಸ್ಸುಗಳು ಒಂದಕ್ಕೊಂದು ಟಚ್ ಆಗಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ಬಸ್ ಚಾಲಕರ ಅಜಾಗರೂಕತೆಗೆ ಮತ್ತೊಂದು ನಿದರ್ಶನವಾಗಿದೆ.
- Ramu Ram
- Updated on: Dec 30, 2025
- 3:57 pm
ಮೈಸೂರು: ರಾತ್ರಿ ವೇಳೆ ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ನಂಜನಗೂಡು ತಾಲ್ಲೂಕಿನ ಹಳೇಪುರ ಗ್ರಾಮದಲ್ಲಿ ಪೊಲೀಸರು ನೈಟ್ ರೌಂಡ್ಸ್ ವೇಳೆ ಚಿರತೆಯೊಂದು ಕಾಣಿಸಿಕೊಂಡಿದೆ. ಕವಲಂದೆ ಪೊಲೀಸರು ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇದೇ ರೀತಿ ಮೈಸೂರಿನ ಎಚ್.ಡಿ.ಕೋಟೆ ವಲಯದಲ್ಲಿ ಆತಂಕ ಸೃಷ್ಟಿಸಿದ್ದ 2 ಹುಲಿಗಳನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
- Ramu Ram
- Updated on: Dec 29, 2025
- 9:51 am
ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್ ಬಾಡಿಗೆ ದರ ಹೆಚ್ಚಳ: ಅಸಲಿ ಕಾರಣ ಏನು ಗೊತ್ತಾ?
ಬೆಂಗಳೂರಿನಲ್ಲಿ ಜೆಸಿಬಿ, ಟಿಪ್ಪರ್ ಲಾರಿ, ಟ್ರಾಕ್ಟರ್ ಬಾಡಿಗೆ ದುಬಾರಿ ಆಗಿದೆ. ಸರ್ಕಾರದ ತುಘಲಕ್ ನೀತಿಗಳಿಗೆ ಜನಸಾಮಾನ್ಯರು ಈ ದುಬಾರಿ ಬೆಲೆ ತೆರಬೇಕಾಗಿದೆ. ನಿರ್ವಹಣಾ ವೆಚ್ಚ ಭರಿಸಲು ಬಾಡಿಗೆ ಹೆಚ್ಚಿಸಿದ್ದು, ಗ್ರಾಹಕರು ಸಹಕರಿಸಬೇಕೆಂದು ಅಖಿಲ ಭಾರತ ಲಾರಿ ಅಸೋಸಿಯನ್ ಅಧ್ಯಕ್ಷ ಷಣ್ಮುಗಪ್ಪ ಮನವಿ ಮಾಡಿದ್ದಾರೆ.
- Ramu Ram
- Updated on: Dec 28, 2025
- 8:02 pm
ಗ್ರಾಮಸ್ಥರ ಬೆಚ್ಚಿಬೀಳಿಸಿದ ಗಜಪಡೆ: ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!
ಆನೇಕಲ್ ಪ್ರದೇಶದ ತಮಿಳುನಾಡು ಗಡಿ ಭಾಗದ ಗ್ರಾಮಗಳಲ್ಲಿ ಕಾಡಾನೆಗಳ ನಿರಂತರ ಓಡಾಟ, ಉಪಟಳ ಹೆಚ್ಚಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಾಡಾನೆಗಳನ್ನು ಕಾಡಿನೊಳಗೆ ಅಟ್ಟುವುದರ ಜೊತೆಗೆ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಈ ಮಧ್ಯೆ, 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
- Ramu Ram
- Updated on: Dec 25, 2025
- 12:30 pm