ಹುಬ್ಬಳ್ಳಿಯಲ್ಲಿ ಆಟೋ ಗ್ಯಾಸ್ ಬಂಕ್ ಬಂದ್: ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಹುಬ್ಬಳ್ಳಿಯಲ್ಲಿ ಎಲ್‌ಪಿಜಿ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ದಿನನಿತ್ಯ ಜಗಳಗಳು ನಡೆಯುವಂತಾಗಿದೆ. ಆಟೋ ಚಾಲಕರು ಹೆಚ್ಚಿದ ಇಂಧನ ವೆಚ್ಚದಿಂದಾಗಿ ಪ್ರಯಾಣದ ದರವನ್ನು ಹೆಚ್ಚಿಸಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಎಲ್‌ಪಿಜಿ ಬಂಕ್‌ಗಳು ಮುಚ್ಚಿರುವುದರಿಂದ ಚಾಲಕರು ಪರದಾಡುತ್ತಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 13: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಎಲ್‌ಪಿಜಿ ಪೂರೈಕೆ ವ್ಯತ್ಯಯವಾಗಿದ್ದು, ಆಟೋ ಚಾಲಕರಿಗೂ ಇದರ ಬಿಸಿ ತಟ್ಟಿದೆ. ಹುಬ್ಬಳ್ಳಿಯಲ್ಲಿ ಆಟೋ ಎಲ್‌ಪಿಜಿ ಸಿಲಿಂಡರ್ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಹೆಚ್ಚಾಗಿವೆ. ಎಲ್‌ಪಿಜಿ ದರ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋ ಚಾಲಕರು ಪ್ರಯಾಣದ ದರವನ್ನು ಹೆಚ್ಚಿಸಿದ್ದಾರೆ. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಚೆನ್ನಮ್ಮ ವೃತ್ತದಿಂದ ಇಂಡಿ ಪಂಪ್‌ಗೆ ಹಿಂದೆ 10 ರೂಪಾಯಿ ಇದ್ದ ದರವನ್ನು ಈಗ 15 ರೂಪಾಯಿಗೆ ಏರಿಸಲಾಗಿದೆ. ಇದಲ್ಲದೆ, ಸಿದ್ಧಾರೂಢ ಮಠಕ್ಕೆ 20 ರೂಪಾಯಿ ಮತ್ತು ಆನಂದ ನಗರಕ್ಕೆ 30 ರೂಪಾಯಿಯಷ್ಟು ದರ ವಿಧಿಸಲಾಗುತ್ತಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಆಟೋ ಚಾಲಕರು ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದರಿಂದ ಮತ್ತು ನಗರದಲ್ಲಿ ಐದಕ್ಕೂ ಹೆಚ್ಚು ಎಲ್‌ಪಿಜಿ ಬಂಕ್‌ಗಳು ಮುಚ್ಚಿರುವುದರಿಂದ ತಮಗೆ ಪರ್ಯಾಯವಿಲ್ಲ ಎಂದು ಹೇಳುತ್ತಿದ್ದಾರೆ.
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
