LPG
ಎಲ್‌ಪಿಜಿ ಎಂದರೆ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್. ಹೆಸರೇ ಸೂಚಿಸುವಂತೆ ಇದು ಧ್ರವೀಕರಿಸಿದ ಪೆಟ್ರೋಲಿಯಂ ಅನಿಲ. ಪ್ರೊಪೇನ್, ಪ್ರೊಪಿಲೀನ್ ಇತ್ಯಾದಿ ಹೈಡ್ರೋಕಾರ್ಬನ್ ಗ್ಯಾಸ್ಗಳ ಮಿಶ್ರಣ ಇರುವ ಇಂಧನವಾಗಿದೆ. ಪೆಟ್ರೋಲಿಯಂನ ಉಪ ಉತ್ಪನ್ನಗಳಲ್ಲಿ ಇದೂ ಒಂದು. ಎಲ್‌ಪಿಜಿ ಬಹೂಪಯೋಗಿ ಆಗಿರುವ ಇಂಧನವಾಗಿದೆ. ಅಡುಗೆಯ ಇಂಧನವಾಗಿ ಇದನ್ನು ಬಳಸಬಹುದು. ವಾಹನಗಳಿಗೆ ಇಂಧನವಾಗಿ ಬಳಸಬಹುದು. ರಾಸಾಯನಿಕ ಕಾರ್ಖಾನೆಗಳಲ್ಲಿ ಇದರ ಉಪಯೋಗ ಇದೆ. ಇದು ಮಾಲಿನ್ಯಕಾರಕ ಹೊಗೆಯನ್ನು ಹೊರಸೂಸುವುದಿಲ್ಲ. ಹೀಗಾಗಿ, ಅಡುಗೆ ಅನಿಲವಾಗಿ ಎಲ್ಲೆಡೆ ವ್ಯಾಪಕವಾಗಿ ಬಳಕೆಯಲ್ಲಿ ಇದೆ. ಸೌದೆ ಒಲೆ, ಕೆರೋಸಿನ್ಗೆ ಹೋಲಿಸಿದರೆ ಎಲ್‌ಪಿಜಿ ಉತ್ತಮ ಆಯ್ಕೆ. ಭಾರತದಲ್ಲಿ ಎಲ್ಪಿಜಿಗಳನ್ನು ಸಿಲಿಂಡರ್ಗಳಲ್ಲಿ ತುಂಬಸಿ ಸರಬರಾಜು ಮಾಡಲಾಗುತ್ತದೆ. ಗೃಹ ಬಳಕೆಗೆ ಪ್ರತ್ಯೇಕ ಸಿಲಿಂಡರ್ಗಳಿವೆ. ಹೋಟೆಲ್ ಇತ್ಯಾದಿ ವಾಣಿಜ್ಯ ಬಳಕೆಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳಿವೆ. ಅಡುಗೆಗೆ ಬಳಸುವ ಎಲ್ಪಿಜಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಕಮರ್ಷಿಯಲ್ ಎಲ್ಪಿಜಿಗೆ ಸಬ್ಸಿಡಿ ಇರುವುದಿಲ್ಲ.