AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇರಾನ್ ಮೇಲಿನ ದಾಳಿ, ಅಮೆರಿಕಕ್ಕೆ ಹತ್ತಕ್ಕೆ ಹತ್ತಲ್ಲ, ಹದಿನೈದು ರೇಟಿಂಗ್​ ಕೊಟ್ಟ ಟ್ರಂಪ್

Video: ಇರಾನ್ ಮೇಲಿನ ದಾಳಿ, ಅಮೆರಿಕಕ್ಕೆ ಹತ್ತಕ್ಕೆ ಹತ್ತಲ್ಲ, ಹದಿನೈದು ರೇಟಿಂಗ್​ ಕೊಟ್ಟ ಟ್ರಂಪ್

ನಯನಾ ರಾಜೀವ್
|

Updated on:Mar 05, 2026 | 10:27 AM

Share

ಇರಾನ್ ಜತೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ಮಿಲಿಟರಿಯ ಕಾರ್ಯಕ್ಷಮತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಹಿರಂಗವಾಗಿ ಶ್ಲಾಘಿಸಿದ್ದಾರೆ.ಹಾಗೆಯೇ 10ಕ್ಕೆ ಹತ್ತಲ್ಲ 15 ರೇಟಿಂಗ್ ಕೊಟ್ಟಿದ್ದಾರೆ. ಯುದ್ಧ ಪ್ರಾರಂಭವಾದ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಾರ್ಯಾಚರಣೆ ತ್ವರಿತ ಪ್ರಗತಿಯನ್ನು ಸಾಧಿಸಿದೆ ಮತ್ತು ಅಮೆರಿಕ ದೃಢವಾಗಿ ನಿಂತಿದ್ದು, ಪ್ರಬಲ ಸೇನೆಯಾಗಿ ಹೊರಹೊಮ್ಮಿದೆ ಎಂದಿದ್ದಾರೆ.

ವಾಷಿಂಗ್ಟನ್, ಮಾರ್ಚ್​ 05: ಇರಾನ್ ಜತೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ಮಿಲಿಟರಿಯ ಕಾರ್ಯಕ್ಷಮತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಹಿರಂಗವಾಗಿ ಶ್ಲಾಘಿಸಿದ್ದಾರೆ.ಹಾಗೆಯೇ 10ಕ್ಕೆ ಹತ್ತಲ್ಲ 15 ರೇಟಿಂಗ್ ಕೊಟ್ಟಿದ್ದಾರೆ. ಯುದ್ಧ ಪ್ರಾರಂಭವಾದ ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಾರ್ಯಾಚರಣೆ ತ್ವರಿತ ಪ್ರಗತಿಯನ್ನು ಸಾಧಿಸಿದೆ ಮತ್ತು ಅಮೆರಿಕ ದೃಢವಾಗಿ ನಿಂತಿದ್ದು, ಪ್ರಬಲ ಸೇನೆಯಾಗಿ ಹೊರಹೊಮ್ಮಿದೆ ಎಂದಿದ್ದಾರೆ.

ಅಮೆರಿಕದ ಮಿಲಿಟರಿ ಕ್ರಮವನ್ನು ಅತ್ಯಂತ ಯಶಸ್ವಿಯಾಗಿ ವಿವರಿಸಿದರು. ಯುದ್ಧರಂಗದಲ್ಲಿನ ಪರಿಸ್ಥಿತಿ ನಿರೀಕ್ಷೆಗಿಂತ ಉತ್ತಮವಾಗಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ವೇಗವಾಗಿ ಹೆಚ್ಚುತ್ತಿರುವ ಸಮಯದಲ್ಲಿ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧ ಈಗ ಆರನೇ ದಿನಕ್ಕೆ ಕಾಲಿಟ್ಟಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 05, 2026 10:26 AM
Follow Us