AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾ ರಾಜೀವ್

ನಯನಾ ರಾಜೀವ್

ಮುಖ್ಯ ಉಪಸಂಪಾದಕಿ - TV9 Kannada

nayana.rajeev@tv9.com

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow On:
Video: ರಾಂಗ್​ಸೈಡ್​ನಲ್ಲಿ ಬಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ರಾಂಗ್​ಸೈಡ್​ನಲ್ಲಿ ಬಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

ಮುಂಬೈನಲ್ಲಿ ರಸ್ತೆ ಬದಿಯಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಬಾಲಕನಿಗೆ ತಪ್ಪು ಬದಿಯಲ್ಲಿ ಸವಾರಿ ಮಾಡುತ್ತಿದ್ದ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರಾಂಗ್ ಸೈಡಿನಲ್ಲಿ ಬಂದು ಡಿಕ್ಕಿ ಹೊಡೆದಿದ್ದಷ್ಟೇ ಅಲ್ಲದೆ ಆತನಿಗೆ ಏನಾಗಿದೆ ಎಂದು ಒಮ್ಮೆಯೂ ತಿರುಗಿ ನೋಡದೆ ಹೋಗಿದ್ದಾನೆ. ಅಪಘಾತದಲ್ಲಿ ಬಾಲಕನಿಗೆ ಗಂಭೀರ ಗಾಯವಾಗಿದೆ.

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ಸಾಕಷ್ಟು ದೇಶಗಳಲ್ಲಿ ಇನ್ನೂ ಕೂಡ ದೇಹದ ಬಣ್ಣವನ್ನು ಮುಂದಿಟ್ಟುಕೊಂಡು ನಿಂದಿಸುವ ಪರಿಪಾಠ ಮುಂದುವರೆದಿದೆ. ದೊಡ್ಡವರು ಹಾಗಿರಲಿ ಮಕ್ಕಳ ಮನಸ್ಸಿನ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಕೊಂಚವೂ ಅರ್ಥ ಮಾಡಿಕೊಳ್ಳದೆ ಹೀಯಾಳಿಸುತ್ತಾರೆ. ಬಾಲಕಿಯೊಬ್ಬಳು ಅಮ್ಮನ ಬಳಿ ಅಳುತ್ತಾ ಅಮ್ಮಾ ಶಾಲೆಯಲ್ಲಿ ಎಲ್ಲರೂ ನನ್ನ ಬಣ್ಣವನ್ನು ನೋಡಿ ಏನೇನೋ ಮಾತಾಡ್ತಾರೆ ಮೈಬಣ್ಣ ಬದಲಾಯಿಸೋಕೆ ಆಗುತ್ತಾ ಎಂದು ಕಣ್ಣೀರಿಟ್ಟಿರುವ ವಿಡಿಯೋ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಇದು ಬಾಲಕಿಯಲ್ಲಿ ಆಳವಾದ ಮತ್ತು ಮಾಗದ ಗಾಯವನ್ನಾಗಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವರ್ಣಭೇದ ನೀತಿಯು ದಕ್ಷಿಣ ಆಫ್ರಿಕಾದ ಪ್ರತ್ಯೇಕ ಕಾನೂನುಗಳಿಗಿಂತ ಭಿನ್ನವಾದರೂ, ಜನಾಂಗದ ಆಧಾರದ ಮೇಲೆ ತಾರತಮ್ಯ ಮತ್ತು ಶೋಷಣೆಯ ಮಾಡಿರುವ ಇತಿಹಾಸ ಕೂಡ ಇದೆ.

Video: ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

Video: ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡುಗಳು ಹಾರಿವೆ ಎಂದು ಹೇಳಿದ್ದಾರೆ. ಈ ಘಟನೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದು, ಘಟನೆಯನ್ನುಆಘಾತಕಾರಿ ಮತ್ತು ದುಃಖಕರ ಎಂದು ಕರೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮಗಳು ಮಾದಕ ವ್ಯಸನಿ ಎಂಬುದು ತಿಳಿಯುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಮಗಳು ಮಾದಕ ವ್ಯಸನಿ ಎಂಬುದು ತಿಳಿಯುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತನ್ನ ಮಗಳಿಗೆ ಡ್ರಗ್ಸ್ ನೀಡುತ್ತಿದ್ದಾನೆ ಎಂಬ ಸಂಗತಿ ತಿಳಿದಾಗ ವಿದ್ಯಾರ್ಥಿನಿಯ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಮಗಳ ಭವಿಷ್ಯವನ್ನು ಕತ್ತಲೆಗೆ ತಳ್ಳಿದ ಘಟನೆ ತಾಯಿಯನ್ನು ಮನಸ್ಸು ಮುರಿದುಕೊಳ್ಳುವ ಹಂತಕ್ಕೆ ತಳ್ಳಿದೆ.ಮಗಳು ಮಾದಕ ವ್ಯಸನಕ್ಕೆ ಒಳಗಾಗಿದ್ದಾಳೆ ಎಂಬ ವಿಚಾರ ತಿಳಿದ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.

Video: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ

Video: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ

ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತಿದ್ದಕ್ಕೆ ಎಲ್​ಡಿಎಫ್ ಕಾರ್ಯಕರ್ತ ಬಾಬು ವರ್ಗೀಸ್‌ ಮೀಸೆ ಬೋಳಿಸಿಕೊಂಡಿರುವ ವಿಡಿಯೋ ಹರಿದಾಡುತ್ತಿದೆ. ಪಟ್ಟಣಂತಿಟ್ಟ ಪುರಸಭೆ ಚುನಾವಣೆಗೂ ಮುನ್ನ, ವರ್ಗೀಸ್ ಅವರು ಎಡಪಕ್ಷಗಳು ಈ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ವಿಫಲವಾದರೆ ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುವುದಾಗಿ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದರು. ಅಲ್ಲಿ ಮಾತ್ರವಲ್ಲದೆ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಎಲ್‌ಡಿಎಫ್‌ಗೆ ದೊಡ್ಡ ಹೊಡೆತ ನೀಡಿತು. 16 ಸದಸ್ಯರ ಜಿಲ್ಲಾ ಪಂಚಾಯತ್‌ನಲ್ಲಿ 12 ಸ್ಥಾನಗಳಲ್ಲಿ ಆರಾಮವಾಗಿ ಗೆಲುವು ಸಾಧಿಸುವ ಮೂಲಕ ಯುಡಿಎಫ್ ಅಧಿಕಾರವನ್ನು ತನ್ನದಾಗಿಸಿಕೊಂಡಿತು.

Video: ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ

Video: ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ

ಶಾಲೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಸೆಕ್ಯುರಿಟಿಯ ಭುಜಕ್ಕೆ ಬೀದಿನಾಯಿಯೊಂದು ಕಚ್ಚಿರುವ ಘಟನೆ ಗೋರೆಗಾಂವ್​ನಲ್ಲಿ ನಡೆದಿದೆ. ಅಲ್ಲಿ ಕೆಲವು ಆಕ್ರಮಣಕಾರಿ ನಾಯಿಗಳು ಓಡಾಡುತ್ತಿವೆ. ಆ ನಾಯಿಗಳು ರೇಬಿಸ್ ಸೋಂಕಿಗೆ ಒಳಗಾಗಿದ್ದು, ಮೂರಕ್ಕೂ ಅಧಿಕ ಜನರಿಗೆ ಕಚ್ಚಿದೆ ಎಂದು ಹೇಳಲಾಗಿದೆ. ಈ ಘಟನೆ ಗೋರೆಗಾಂವ್ ಪಶ್ಚಿಮದ ಆದರ್ಶ ವಿದ್ಯಾಲಯದ ಬಳಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದೆ.

Video: ಬಿಹಾರದ ರೈಲಿನಲ್ಲಿ ಜನವೋ ಜನ, ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ

Video: ಬಿಹಾರದ ರೈಲಿನಲ್ಲಿ ಜನವೋ ಜನ, ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ

ಬಿಹಾರದಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸಂಕಷ್ಟಕ್ಕೆ ಸಿಲುಕಿದ ಘಟನೆ ವರದಿಯಾಗಿದೆ. ಅವರು ವಾಶ್​​ರೂಮ್​ಗೆ ಹೋಗಿರುವ ಸಂದರ್ಭದಲ್ಲಿ ಕತಿಹಾರ್ ಜಂಕ್ಷನ್​ನಲ್ಲಿ 30-40 ಪುರುಷರು ರೈಲನ್ನೇರಿದ್ದರು.ಆಕೆ ಟಾಯ್ಲೆಟ್​ನಿಂದ ಹೊರಬರಲಾರದೆ ಪರದಾಡುವಂತಾಗಿತ್ತು. ಆಕೆ ಕೊನೆಗೆ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ರೈಲ್ವೆ ರಕ್ಷಣಾ ಪಡೆ ಬರುವವರೆಗೂ ಅವಳು ಒಳಗೆ ಇದ್ದು ವೀಡಿಯೊ ರೆಕಾರ್ಡ್ ಮಾಡಿದ್ದರು. ಆರ್‌ಪಿಎಫ್ ತಕ್ಷಣವೇ ಪ್ರತಿಕ್ರಿಯಿಸಿ, ಕೋಚ್ ತಲುಪಿ, ಜನಸಮೂಹವನ್ನು ಚದುರಿಸಿ, ಆಕೆ ಸುರಕ್ಷಿತವಾಗಿ ತನ್ನ ಸೀಟಿಗೆ ಮರಳಲು ಸಹಾಯ ಮಾಡಿದ್ದಾರೆ.

ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮದುವೆಗೂ ಮುನ್ನ ವರ ಕಾರು ಮತ್ತು 20 ಲಕ್ಷ ರೂಪಾಯಿಯ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದ. ಇಬ್ಬರ ಜೀವನದಲ್ಲಿ ಸಂತೋಷದ ದಿನವಾಗಬೇಕಾಗಿದ್ದುದು ದುಃಸ್ವಪ್ನದಂತಾಯಿತು. ಬ್ರೀಝಾ ಕಾರು ಮತ್ತು ಹಣವನ್ನು ಕೊಡುವಂತೆ ಒತ್ತಾಯಿಸಿದ ವರ, ಎರಡನ್ನೂ ನೀಡುವವರೆಗೆ ತಾಳಿ ಕಟ್ಟುವುದಿಲ್ಲ ಎಂದು ಹೇಳಿದ್ದಾನೆ. ಕೊನೆಯ ಕ್ಷಣದ ಬೇಡಿಕೆ ಗೊಂದಲಕ್ಕೆ ಕಾರಣವಾಯಿತು ಮತ್ತು ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು.

ಜಲಂಧರ್: ಹರಿತವಾದ ಆಯುಧದಿಂದ ಇರಿದು ಬಿಜೆಪಿಯ ಮಾಜಿ ಶಾಸಕನ ಸೋದರಳಿಯನ ಬರ್ಬರ ಹತ್ಯೆ

ಜಲಂಧರ್: ಹರಿತವಾದ ಆಯುಧದಿಂದ ಇರಿದು ಬಿಜೆಪಿಯ ಮಾಜಿ ಶಾಸಕನ ಸೋದರಳಿಯನ ಬರ್ಬರ ಹತ್ಯೆ

ಮಾಜಿ ಶಾಸಕ, ಬಿಜೆಪಿ ನಾಯಕ ಶೀತಲ್ ಅಂಗುರ್ ಅವರ ಸೋದರಳಿಯನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಲಂಧರ್​ನಲ್ಲಿ ನಡೆದಿದೆ. ಮೃತ ಬಾಲಕನಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಶುಕ್ರವಾರ ಈ ಘಟನೆ ನಡೆದಿದೆ. ಬಸ್ತಿ ದನಿಷ್ಮಂದನ್ ಪ್ರದೇಶದ ಶಿವಾಜಿ ನಗರದಲ್ಲಿ ನಡೆದ ವಾಗ್ವಾದದ ಬಳಿಕ ವಿಕಾಸ್ ಎಂಬುವವನ ಮೇಲೆ ಮೂವರು ಯುವಕರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ದಾಳಿಕೋರರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸುತ್ತಿದ್ದಂತೆ ಎದೆಗೆ ಹರಿತವಾದ ಆಯುಧದಿಂದ ಆರೋಪಿಗಳು ತಿವಿದಿದ್ದಾರೆ.

ಮಹಿಳೆ ವರನ ವೇಷ ಹಾಕ್ತಾಳೆ, ಪಾರ್ಟಿ, ಸಂಗೀತ, ನೃತ್ಯ ಎಲ್ಲವೂ ರಿಯಲ್, ಪಾಕಿಸ್ತಾನದಲ್ಲಿ ನಡೆಯುತ್ತೆ ಫೇಕ್ ಮದುವೆ

ಮಹಿಳೆ ವರನ ವೇಷ ಹಾಕ್ತಾಳೆ, ಪಾರ್ಟಿ, ಸಂಗೀತ, ನೃತ್ಯ ಎಲ್ಲವೂ ರಿಯಲ್, ಪಾಕಿಸ್ತಾನದಲ್ಲಿ ನಡೆಯುತ್ತೆ ಫೇಕ್ ಮದುವೆ

ಮದುವೆ(Marriage)ಯೆಂಬುದು ಗಂಡು-ಹೆಣ್ಣಿನ ನಡುವಿನ ಪವಿತ್ರವಾದ ಬಂಧನ. ಮದುವೆ ಎರಡು ಮನಸ್ಸುಗಳು, ಎರಡು ಆತ್ಮಗಳು, ಎರಡು ದೇಹಗಳನ್ನು ಬೆಸೆಯುತ್ತದೆ. ಆದರೆ ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ಮದುವೆಗಳು ಹೆಚ್ಚು ಸದ್ದು ಮಾಡುತ್ತಿವೆ. ಕುಟುಂಬದ ಒತ್ತಡಗಳಿಲ್ಲದೆ ಮದುವೆ ಹೇಗೆ ನಡೆಯುತ್ತದೆ ಎಂಬುದನ್ನು ಆನಂದಿಸಲು ಈ ನಕಲಿ ಮದುವೆಗಳನ್ನು ಮಾಡಲಾಗುತ್ತದೆ. ಅಲ್ಲಿ ಮಹಿಳೆಯೇ ವರನ ಪಾತ್ರವಹಿಸುತ್ತಾಳೆ, ಆತನ ರೀತಿಯಲ್ಲೇ ವಸ್ತ್ರಗಳನ್ನು ತೊಡುತ್ತಾಳೆ. ಪಾಕಿಸ್ತಾನಿ ರೀತಿಯಲ್ಲಿ ಮೆಹಂದಿ ಕಾರ್ಯಕ್ರಮಗಳು ನಡೆಯುತ್ತವೆ, ಸಂಗೀತ, ನೃತ್ಯಗಳು ಇರುತ್ತದೆ. ಆದರೆ ಇದು ಸಲಿಂಗ ಮದುವೆಯಲ್ಲ.

Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಜಿಮ್​ನಲ್ಲಿ, ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡುತ್ತಿದ್ದವರು ಹೀಗೆ ಹತ್ತು ಹಲವು ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಕೋನಸೀಮಾದಲ್ಲಿ ತರಗತಿಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ನಲ್ಲಮಿಲ್ಲಿ ಸಿರಿ ಎಂಬ ವಿದ್ಯಾರ್ಥಿನಿ ತರಗತಿಯಲ್ಲಿ ಹೃದಯಾಘಾತಕ್ಕೊಳಗಾಗಿದ್ದಾರೆ. ಆಘಾತಕಾರಿ ಘಟನೆ ತರಗತಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶನಿವಾರ ಬೆಳಗ್ಗೆ 9.45 ರ ಸುಮಾರಿಗೆ ಈ ಘಟನೆ ನಡೆದಿದೆ. ಮೊದಲ ಬೆಂಚಿನಲ್ಲಿ ಕುಳಿತಿದ್ದ ಹುಡುಗಿ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು.

Video: ಬೆಳಗಿನ ಜಾವ, ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್, ದುಬೈ ವಿಡಿಯೋ ವೈರಲ್

Video: ಬೆಳಗಿನ ಜಾವ, ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್, ದುಬೈ ವಿಡಿಯೋ ವೈರಲ್

ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮೊದಲು ಕಾಣುವುದೇ ಸ್ವಚ್ಛತೆ, ನಾಗರಿಕ ಪ್ರಜ್ಞೆ, ನಿಯಮಗಳ ಪಾಲನೆ. ದುಬೈನಲ್ಲಿರುವ ಭಾರತೀಯರೊಬ್ಬರು ಹಂಚಿಕೊಂಡಿರುವ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಅದು ಬೆಳಗಿನ ಜಾವ 4 ಗಂಟೆ, ಟ್ರಾಫಿಕ್ ಇಲ್ಲ, ಅಕ್ಕ ಪಕ್ಕ ಬೇರೆ ಯಾವ ಕಾರೂ ಕೂಡ ಇಲ್ಲ, ರೆಡ್ ಸಿಗ್ನಲ್​ ಬಿದ್ದಾಗ ಚಾಲಕ ನಿಲ್ಲಿಸಿ ಕಾದು ಬಳಿಕ ಹೋಗಿರುವ ವಿಡಿಯೋ ಇದು. ಇದರಲ್ಲಿ ಹೊಸದೇನಿದೆ ಎಂದು ನಿಮಗೆ ಅನಿಸಬಹುದು. ಆದರೆ ಬೆಳಗಿನ ಜಾವ ಸಿಗ್ನಲ್​ಗಳಿದ್ದರೆ ವಾಹನಗಳು ಇಲ್ಲದಿದ್ದರೆ ಸಿಗ್ನಲ್ ಜಂಪ್ ಮಾಡಿ ಹೋಗುವ ವಾಹನಗಳೇ ಹೆಚ್ಚು. ಆದರೆ ನೇಹಾ ಜೈಸ್ವಾಲ್ ಪೋಸ್ಟ್​ ಮಾಡಿದ ಕ್ಲಿಪ್​ನಲ್ಲಿ ಬೆಳಗಿನ ಜಾವವಾದರೂ ಚಾಲಕರೊಬ್ಬರು ರೆಡ್ ಸಿಗ್ನಲ್​ನಲ್ಲಿ ಶಾಂತಿಯಿಂದ ಕಾಯುತ್ತಾ ಕುಳಿತಿರುವುದನ್ನು ನೋಡಬಹುದು.