AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್

Video: ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್

ನಯನಾ ರಾಜೀವ್
|

Updated on: Mar 19, 2026 | 7:48 AM

Share

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಂಧ್ಯಾಚಲ ಪ್ರದೇಶದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್ ಇರುವುದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ವಿಂಧ್ಯವಾಸಿನಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗವಾದ ದೂಧ್‌ನಾಥ್ ತಿರಹಾದಿಂದ ವಿಂಧ್ಯಚಲದವರೆಗೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ರಸ್ತೆಬದಿಯಲ್ಲಿರುವ ಹ್ಯಾಂಡ್ ಪಂಪ್ ಅನ್ನು ತೆಗೆದುಹಾಕುವ ಬದಲು, ಅಧಿಕಾರಿಗಳು ಅದರ ಸುತ್ತ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.ವಿಸ್ತರಣೆಯ ನಂತರ ಅದನ್ನು ಮಧ್ಯದಲ್ಲಿಯೇ ಬಿಟ್ಟಿದ್ದರು.

ಮಿರ್ಜಾಪುರ, ಮಾರ್ಚ್​ 19: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಂಧ್ಯಾಚಲ ಪ್ರದೇಶದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್ ಇರುವುದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ವಿಂಧ್ಯವಾಸಿನಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗವಾದ ದೂಧ್‌ನಾಥ್ ತಿರಹಾದಿಂದ ವಿಂಧ್ಯಚಲದವರೆಗೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ರಸ್ತೆಬದಿಯಲ್ಲಿರುವ ಹ್ಯಾಂಡ್ ಪಂಪ್ ಅನ್ನು ತೆಗೆದುಹಾಕುವ ಬದಲು, ಅಧಿಕಾರಿಗಳು ಅದರ ಸುತ್ತ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.ವಿಸ್ತರಣೆಯ ನಂತರ ಅದನ್ನು ಮಧ್ಯದಲ್ಲಿಯೇ ಬಿಟ್ಟಿದ್ದರು.

ಕೈ ಪಂಪ್ ಮೊದಲು ಬದಿಯಲ್ಲಿತ್ತು, ಆದರೆ ಅಗಲಗೊಳಿಸಿದ ನಂತರ ಅದು ಮಧ್ಯದಲ್ಲಿ ಬಂದಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಆದರೆ ಈಗ ವಾಹನ ಓಡಾಡುವಾಗ ಮಧ್ಯದಲ್ಲಿ ಹ್ಯಾಂಡ್​ ಪಂಪ್​ ಇದ್ದರೆ ಅಲ್ಲಿ ಹೋಗಿ ನೀರು ತೆಗೆದುಕೊಳ್ಳಲು ಕೂಡ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬುದು ಜನರ ವಾದ. ಕೊನೆಗೂ ಈಗ ಆ ಹ್ಯಾಂಡ್​ಪಂಪನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow Us