AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಹಳಿ ತಡೆಗೋಡೆಯಲ್ಲಿ ಸಿಲುಕಿ ಒದ್ದಾಡಿದ ಒಂಟಿ ಸಲಗ; ಸಿನಿಮೀಯ ರೀತಿಯಲ್ಲಿ ಆನೆ ರಕ್ಷಣೆ!

ರೈಲ್ವೆ ಹಳಿ ತಡೆಗೋಡೆಯಲ್ಲಿ ಸಿಲುಕಿ ಒದ್ದಾಡಿದ ಒಂಟಿ ಸಲಗ; ಸಿನಿಮೀಯ ರೀತಿಯಲ್ಲಿ ಆನೆ ರಕ್ಷಣೆ!

ರಾಮ್​, ಮೈಸೂರು
| Edited By: |

Updated on: Mar 19, 2026 | 8:13 AM

Share

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಹಾರ ಅರಸಿ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮಕ್ಕೆ ಬಂದಿದ್ದ ಆನೆಯೊಂದು ರೈಲ್ವೆ ಹಳಿಗಳ ತಡೆಗೋಡೆಯಲ್ಲಿ ಸಿಲುಕಿಹಾಕಿಕೊಂಡಿತ್ತು. ಜನರ ಚೀರಾಟಕ್ಕೆ ಬೆದರಿ ಕಾಡಿಗೆ ಓಡುವಾಗ ಈ ಘಟನೆ ಸಂಭವಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಯಾವುದೇ ಗಾಯವಾಗದಂತೆ ಆನೆಯನ್ನು ಯಶಸ್ವಿಯಾಗಿ ರಕ್ಷಿಸಿದರು. ಇದು ಮಾನವ-ವನ್ಯಜೀವಿ ಸಂಘರ್ಷದ ಮತ್ತೊಂದು ಉದಾಹರಣೆಯಾಗಿದೆ.

ಹುಣಸೂರು, ಮಾ.19: ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದಿದ್ದ ಒಂಟಿ ಸಲಗವೊಂದು ವಾಪಸ್ ಕಾಡಿಗೆ ಹೋಗುವ ಸಂಭ್ರಮದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ನಡುವೆ ಸಿಲುಕಿ ಹಾಕಿಕೊಂಡು ಅಕ್ಷರಶಃ ಮರಣಯಾತನೆ ಅನುಭವಿಸಿದ ಘಟನೆ ಉಡುವೆಪುರ ಗ್ರಾಮದ ಬಳಿ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಈ ಒಂಟಿ ಸಲಗ, ಹಸಿವಿನಿಂದಾಗಿ ಹುಣಸೂರು ತಾಲೂಕಿನ ಉಡುವೆಪುರ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿತ್ತು. ಬೆಳ್ಳಂಬೆಳಿಗ್ಗೆ ಜಮೀನಿನಲ್ಲಿ ಆನೆಯನ್ನು ಕಂಡ ರೈತರು ಭಯದಿಂದ ಜೋರಾಗಿ ಕೂಗಾಡಿದ್ದಾರೆ. ಜನರ ಚೀರಾಟ ಮತ್ತು ವಾಹನಗಳ ಹಾರ್ನ್ ಸದ್ದಿನಿಂದ ಬೆದರಿದ ಆನೆ, ಗಾಬರಿಯಿಂದ ಕಾಡಿನತ್ತ ಓಡಲಾರಂಭಿಸಿದೆ. ಕಾಡಿನೊಳಗೆ ಪ್ರವೇಶಿಸುವ ಬರದಲ್ಲಿ ಆನೆಯು ರೈಲ್ವೆ ಹಳಿಗಳಿಂದ ನಿರ್ಮಿಸಲಾಗಿದ್ದ ತಡೆಗೋಡೆಯ (Railway Track Fence) ಅಡಿಯಿಂದ ನುಸುಳಲು ಪ್ರಯತ್ನಿಸಿದೆ. ಈ ವೇಳೆ ಆನೆಯ ದೇಹವು ಕಂಬಗಳ ನಡುವೆ ಸಿಲುಕಿಕೊಂಡಿದೆ. ಸುಮಾರು ಹೊತ್ತು ಆನೆಯು ಹೊರಬರಲಾರದೆ ಒದ್ದಾಡಿದ್ದು, ಅದರ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆನೆಗೆ ಯಾವುದೇ ಗಾಯವಾಗದಂತೆ ಜಾಣ್ಮೆಯಿಂದ ಅದನ್ನು ಬಿಡಿಸುವಲ್ಲಿ ಯಶಸ್ವಿಯಾದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us