AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೆರಡು ದಿನ ಕಳೆದ್ರೆ ನಂದಿನಿ ಉತ್ಪನ್ನಗಳೂ ಸಿಗೋದು ಡೌಟ್! ಕೆಎಂಎಫ್​ಗೂ ಎದುರಾಯ್ತು ಸಂಕಷ್ಟ

ಯುಗಾದಿ ಹಬ್ಬದ ಹೊತ್ತಲ್ಲೇ ನಂದಿನಿ ಉತ್ಪನ್ನಗಳಿಗೂ ಗ್ಯಾಸ್ ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್‌ನಿಂದ ಕೆಎಂಎಫ್‌ಗೆ ಕಮರ್ಷಿಯಲ್ ಸಿಲಿಂಡರ್ ಕೊರತೆ ಎದುರಾಗಿದ್ದು, ಇನ್ನೆರಡು ದಿನಗಳಲ್ಲಿ ಹಾಲಿನ ಉತ್ಪನ್ನಗಳ ತಯಾರಿಕೆ ಸ್ಥಗಿತಗೊಳ್ಳುವ ಭೀತಿ ಆವರಿಸಿದೆ. ಹಬ್ಬದ ಸಂಭ್ರಮಕ್ಕೆ ಈ ಬಿಸಿ ತಟ್ಟಲಿದೆಯೇ? ಪೂರ್ತಿ ವಿವರ ಇಲ್ಲಿದೆ.

ಇನ್ನೆರಡು ದಿನ ಕಳೆದ್ರೆ ನಂದಿನಿ ಉತ್ಪನ್ನಗಳೂ ಸಿಗೋದು ಡೌಟ್! ಕೆಎಂಎಫ್​ಗೂ ಎದುರಾಯ್ತು ಸಂಕಷ್ಟ
ಕೆಎಂಎಫ್ ನಂದಿನಿ ಉತ್ಪನ್ನಗಳ ಸಾಂದರ್ಭಿಕ ಚಿತ್ರImage Credit source: tv9
Vinay Kashappanavar
| Edited By: |

Updated on:Mar 19, 2026 | 9:38 AM

Share

ಬೆಂಗಳೂರು, ಮಾರ್ಚ್ 19: ಯುಗಾದಿ (Ugadi) ಹಬ್ಬದ ಸಮಯದಲ್ಲೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತಕ್ಕೂ (KMF) ಸಂಕಷ್ಟ ಎದುರಾಗಿದೆ. ಇರಾನ್-ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮವಾಗಿ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ಪರಿಣಾಮ ಇದೀಗ ನಂದಿನಿ ಉತ್ಪನ್ನಗಳ (Nandini Products) ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ ಕೆಎಂಎಫ್​ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ.

ಉತ್ಪನ್ನಗಳ ತಯಾರಿಗೆ ಕೆಎಂಎಫ್ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತದೆ. ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳು ಲಭ್ಯವಾಗುತ್ತಿಲ್ಲ.

ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 20ರ ಒಳಗೆ ಕಮರ್ಷಿಯಲ್ ಎಲ್‌ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಸಿಹಿ, ಖಾರದ ತಿಂಡಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತುರ್ತು ಕ್ರಮ ಕೈಗೊಳ್ಳುವಂತೆ ಕೆಎಂಎಫ್ ಮನವಿ ಮಾಡಿದೆ. ಅಗತ್ಯ ಗ್ಯಾಸ್ ಪೂರೈಕೆ ಆಗದಿದ್ದರೆ, ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳನ್ನು ಸೀಮಿತ ಪ್ರಮಾಣದಲ್ಲೇ ಉತ್ಪಾದಿಸುವ ಅನಿವಾರ್ಯತೆ ಎದುರಾಗಬಹುದು ಎಂದು ತಿಳಿಸಲಾಗಿದೆ.

ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟ ಕೆಎಂಎಫ್

ಕೆಎಂಎಫ್​ ದೇಶದ ಎರಡನೇ ಅತಿದೊಡ್ಡ ಹಾಲು ಸಹಕಾರ ಒಕ್ಕೂಟವಾಗಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಕೆಎಂಎಫ್‌ನ ವಾರ್ಷಿಕ ವಹಿವಾಟು ಸುಮಾರು 25,000 ಕೋಟಿ ರೂಪಾಯಿಗಳಿಂದ 30,000 ಕೋಟಿ ರೂಪಾಯಿಗಳವರೆಗಿದೆ. ದಿನವೊಂದಕ್ಕೆ ಸರಾಸರಿ 85 ಲಕ್ಷದಿಂದ 90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಸುಮಾರು 40 ಲಕ್ಷ ಲೀಟರ್‌ಗಿಂತಲೂ ಅಧಿಕ ಹಾಲು ಪ್ರತಿದಿನ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್‌ಗಳಂತಹ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ. ಕರ್ನಾಟಕವಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಗೋವಾ ರಾಜ್ಯಗಳಲ್ಲೂ ಕೆಎಂಎಫ್ ಬಲವಾದ ಮಾರುಕಟ್ಟೆ ಹೊಂದಿದೆ.

ಇದನ್ನೂ ಓದಿ: ಈರುಳ್ಳಿ ಬೆಲೆ ಕುಸಿತ: ರೈತರು ಈರುಳ್ಳಿಯ ಜತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ

ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಕೇವಲ ಹಾಲು ಮಾತ್ರವಲ್ಲದೆ ಸುಮಾರು 140ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ ಲಕ್ಷಾಂತರ ಗ್ರಾಹಕರು ನಂದಿನಿ ಹಾಲಿನ ಕೇಂದ್ರಗಳ ಮೂಲಕ ವಹಿವಾಟು ನಡೆಸುತ್ತಾರೆ. ಕೇವಲ ದೇಶೀಯ ಮಾರುಕಟ್ಟೆಯಲ್ಲದೆ, ನಂದಿನಿ ಉತ್ಪನ್ನಗಳು ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತಿವೆ. ಯುಗಾದಿ, ದೀಪಾವಳಿಯಂತಹ ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟವು ಗಣನೀಯವಾಗಿ ಏರಿಕೆಯಾಗಿ, ದಿನದ ವಹಿವಾಟು ಕೋಟ್ಯಂತರ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಪ್ರಸ್ತುತ ಎದುರಾಗಿರುವ ಗ್ಯಾಸ್ ಅಭಾವವು ಇಂತಹ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Thu, 19 March 26

Follow Us
ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತ
ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತ
ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್
ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ
ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ
ಬೇವು ಬೆಲ್ಲ ಆಯುಷ್ಯ ವೃದ್ಧಿಸುತ್ತದೆ! ಅದು ಹೇಗೆ?
ಬೇವು ಬೆಲ್ಲ ಆಯುಷ್ಯ ವೃದ್ಧಿಸುತ್ತದೆ! ಅದು ಹೇಗೆ?
ಯುಗಾದಿಯಿಂದ ಈ ರಾಶಿಯವರ ಜೀವನ ಬೆಲ್ಲದಂತೆ ಸಿಹಿಯಾಗಿರುತ್ತದೆ
ಯುಗಾದಿಯಿಂದ ಈ ರಾಶಿಯವರ ಜೀವನ ಬೆಲ್ಲದಂತೆ ಸಿಹಿಯಾಗಿರುತ್ತದೆ
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಯುವಕ ಬದುಕುಳಿದಿದ್ದು ಹೇಗೆ?
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
‘ಆಕಾಶ್’ ಚಿತ್ರೀಕರಣದ ನೆನಪುಗಳು: ವಿಡಿಯೋ ಹಂಚಿಕೊಂಡ ರಮ್ಯಾ
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಭಾರೀ ಮಳೆ ಗಾಳಿಗೆ ಧರೆಗುರುಳಿದ ಬೃಹತ್ ನೇಮ್ ಬೋರ್ಡ್ ಪಿಲ್ಲರ್
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ
ಭಾವೈಕ್ಯತೆ ಸಾರಿದ ವಿನೋದ್ ರಾಜ್: ಮಸೀದಿಗಳಲ್ಲಿ ಹಣ್ಣು ವಿತರಣೆ: ವಿಡಿಯೋ