AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘನ್ ವಿರುದ್ದದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಅಂತಿಮ T20 ಪಂದ್ಯದಲ್ಲಿ ಭಾರತ 127 ರನ್‌ಗಳ ಭರ್ಜರಿ ಜಯ ಸಾಧಿಸಿತು. ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಮಾರಕ ಪ್ರದರ್ಶನದಿಂದ ಟೀಂ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಅಫ್ಘಾನಿಸ್ತಾನ ಕೇವಲ 93 ರನ್‌ಗಳಿಗೆ ಆಲೌಟ್ ಆಯಿತು.

ಅಫ್ಘನ್ ವಿರುದ್ದದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ
ಟೀಂ ಇಂಡಿಯಾImage Credit source: PTI
ಪೃಥ್ವಿಶಂಕರ
|

Updated on:Sep 17, 2026 | 11:02 PM

Share

ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಬ್ಯಾಟಿಂಗ್‌, ಆ ನಂತರ ಬೌಲರ್​ಗಳ ಮಾರಕ ಬೌಲಿಂಗ್‌ ನೆರವಿನಿಂದಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು 127 ಬೃಹತ್ ಅಂತರದಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಇತ್ತ ಭಾರತದಲ್ಲಿ ಈ ಸರಣಿಗೆ ಆತಿಥ್ಯವಹಿಸಿದ್ದ ಅಫ್ಘಾನಿಸ್ತಾನ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಖಾಲಿ ಕೈಯಲ್ಲಿ ತವರಿಗೆ ಮರಳಬೇಕಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 222 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಎರಡಂಕಿ ಮೊತ್ತವನ್ನು ದಾಟಲಾಗದೆ 93 ರನ್​ಗಳಿಗೆ ಆಲೌಟ್ ಆಯಿತು.

ವೇಗದ ಶತಕ ಬಾರಿಸಿದ ಅಭಿಷೇಕ್

ಅಫ್ಘಾನಿಸ್ತಾನ್ ವಿರುದ್ಧದ ಹಿಂದಿನ ಎರಡೂ ಪಂದ್ಯಗಳಲ್ಲಿ, ಟೀಂ ಇಂಡಿಯಾ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿ ಗುರಿಯನ್ನು ಬೆನ್ನಟ್ಟಿತ್ತು. ಅಭಿಷೇಕ್ ಶರ್ಮಾ ಆ ಎರಡು ಪಂದ್ಯಗಳಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ರನ್​ಗಳ ಮಳೆ ಹರಿಸಿ ತಮ್ಮ ಮೂರನೇ ಅಂತರರಾಷ್ಟ್ರೀಯ ಟಿ20 ಶತಕವನ್ನು ಪೂರೈಸಿದರು.

ಡಿವಿಲಿಯರ್ಸ್​ ದಾಖಲೆ ಉಡೀಸ್

ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, ತಂಡವನ್ನು ಪವರ್‌ಪ್ಲೇನಲ್ಲಿ 100 ರನ್​ಗಳ ಗಡಿ ದಾಟಿಸಿದರು. ಈ ಮೂಲಕ ಪವರ್‌ಪ್ಲೇನಲ್ಲಿ ಅತ್ಯಧಿಕ ರನ್ ದಾಖಲಿಸಿದ ಸಾಧನೆಯನ್ನು ಮಾಡಿತು. ನಂತರ, ಒಂಬತ್ತನೇ ಓವರ್‌ನಲ್ಲಿ, ಅಭಿಷೇಕ್ ಕೇವಲ 30 ಎಸೆತಗಳಲ್ಲಿ ದಾಖಲೆಯ ಶತಕದ ಗಡಿ ದಾಟಿದರು. ಇದು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದಿಂದ ಯಾವುದೇ ಸ್ವರೂಪದಲ್ಲಿ ಅತ್ಯಂತ ವೇಗದ ಶತಕದ ದಾಖಲೆಯಾಗಿದೆ. ಇದರೊಂದಿಗೆ ಅಭಿಷೇಕ್, ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು (31 ಎಸೆತಗಳು) ಮುರಿದರು.

10 ಸಿಕ್ಸ್, 8 ಬೌಂಡರಿ ..ಪವರ್​ಪ್ಲೇನಲ್ಲಿ ದಾಖಲೆಯ ರನ್ ಕಲೆಹಾಕಿದ ಟೀಂ ಇಂಡಿಯಾ..!

10 ಓವರ್​ಗಳಲ್ಲಿ 79 ರನ್

ಆದರೆ 10 ನೇ ಓವರ್‌ನಲ್ಲಿ ಅಭಿಷೇಕ್ ಔಟಾದ ನಂತರ ಸ್ಕೋರ್ ಬೋರ್ಡ್​ ವೇಗ ಕುಸಿತ ಕಂಡಿತು. 10 ಓವರ್‌ಗಳ ನಂತರ, ಭಾರತ 1 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಅಂತಿಮವಾಗಿ 7 ವಿಕೆಟ್‌ಗಳನ್ನು ಕಳೆದುಕೊಂಡು 221 ರನ್ ಕಲೆಹಾಕಿತು. ಇದರರ್ಥ ಮುಂದಿನ 10 ಓವರ್‌ಗಳಲ್ಲಿ ಕೇವಲ 79 ರನ್‌ಗಳು ಮಾತ್ರ ದಾಖಲಾದವು. ಇದಕ್ಕಾಗಿ 6 ವಿಕೆಟ್‌ಗಳು ಪತನಗೊಂಡವು. ಅಭಿಷೇಕ್ ಜೊತೆಗೆ, ಸಂಜು ಸ್ಯಾಮ್ಸನ್ ಕೂಡ ತಮ್ಮ ಸತತ ಎರಡನೇ ಅರ್ಧಶತಕವನ್ನು ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 29 ರನ್​ಗಳ ಕಾಣಿಕೆ ನೀಡಿದರು.

ಅಫ್ಘನ್ ತಂಡದ ಕಳಪೆ ಬ್ಯಾಟಿಂಗ್

ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ್ ತಂಡದ ಬ್ಯಾಟಿಂಗ್‌ ಹಿಂದಿನ ಎರಡು ಪಂದ್ಯಗಳಿಗೆ ಹೋಲಿಸಿದರೆ ಈ ಪಂದ್ಯದಲ್ಲಿ ಮತ್ತಷ್ಟು ಕಳಪೆಯಾಗಿತ್ತು. ಆದಾಗ್ಯೂ ಈ ಪಂದ್ಯದಲ್ಲಿ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಕೇವಲ ಮೂರು ಓವರ್‌ಗಳಲ್ಲಿ 31 ರನ್‌ಗಳ ತ್ವರಿತ ಆರಂಭವು ಹೋರಾಟದ ಪ್ರದರ್ಶನದ ಭರವಸೆಯನ್ನು ಹುಟ್ಟುಹಾಕಿತು. ಆದರೆ ಅಕ್ಷರ್ ಪಟೇಲ್ ಮೊದಲ ವಿಕೆಟ್ ಪಡೆದ ತಕ್ಷಣ, ಅಫ್ಘಾನಿಸ್ತಾನದ ಇನ್ನಿಂಗ್ಸ್ ಹಳಿತಪ್ಪಿತು. ಅದರ ನಂತರ ಅಫ್ಘಾನಿಸ್ತಾನದ ಪೆವಿಲಿಯನ್ ಪರೇಡ್ ಶುರುವಾಯಿತು. ಆ ನಂತರ ದಾಳಿಗಿಳಿದ ನಿತೀಶ್ ಕುಮಾರ್ ರೆಡ್ಡಿ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಅಫ್ಘಾನಿಸ್ತಾನದ ಸೋಲನ್ನು ಖಚಿತಪಡಿಸಿದರು. ಕೊನೆಯಲ್ಲಿ, ರವಿ ಬಿಷ್ಣೋಯ್ ಕೂಡ ಮೂರು ವಿಕೆಟ್‌ಗಳನ್ನು ಪಡೆದರು. ಹೀಗಾಗಿ ಅಫ್ಘಾನಿಸ್ತಾನದ ಇನ್ನಿಂಗ್ಸ್ 14.1 ಓವರ್‌ಗಳಲ್ಲಿ ಕೇವಲ 94 ರನ್‌ಗಳಿಗೆ ಅಂತ್ಯವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Thu, 17 September 26

Follow Us
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
'ವಿದೇಶಿ ಕಂಪನಿಗೆ ಹೆದರಿ ಯುಪಿಐ ತೆರಿಗೆ ಜಾರಿ ಮಾಡಿದ್ದಲ್ಲ'; ಜೋಶಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಇಟಲಿ ಪ್ರಧಾನಿ ಮೆಲೋನಿ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
ರಾಜ್ಯ SC ST ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
‘ಅಮೆರಿಕ ಅಮೆರಿಕ 2’ ಸಿನಿಮಾ ನೋಡಿ ಮೆಚ್ಚಿಕೊಂಡ ಸುಧಾ ಮೂರ್ತಿ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು