ಶಿಪ್ರಾ ನದಿ ದಂಡೆಯಲ್ಲಿ ಲಕ್ಷಾಂತರ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃಹತ್ ಕಲಾಕೃತಿ!
ನರೇಂದ್ರ ಮೋದಿ ಅವರ 76ನೇ ಜನ್ಮದಿನ ಹಾಗೂ ಅವರ ಸಾರ್ವಜನಿಕ ಜೀವನದ 25ನೇ ವರ್ಷದ ನೆನಪಿಗಾಗಿ ಉಜ್ಜಯಿನಿಯ ಶಿಪ್ರಾ ನದಿಯ ರಾಮ್ ಘಾಟ್ ಪ್ರದೇಶದಲ್ಲಿ ಲಕ್ಷಾಂತರ ದೀಪಗಳನ್ನು ಬಳಸಿ ಪ್ರಧಾನಿ ಮೋದಿಯವರ ಬೃಹತ್ ಮುಖಚಿತ್ರ ಹಾಗೂ ವಿಶೇಷ ಕಲಾಕೃತಿಯನ್ನು ರಚಿಸಲಾಗಿದೆ. 'ಸೇವಾ ಸಂಕಲ್ಪ ಅಭಿಯಾನ'ದ ಭಾಗವಾಗಿ ಆಯೋಜಿಸಲಾಗಿದ್ದ ಈ ದೀಪೋತ್ಸವದಲ್ಲಿ, ಕಲಾ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಜಂಟಿಯಾಗಿ ಶಿಪ್ರಾ ನದಿಯ ಘಾಟ್‌ಗಳ ಮೇಲೆ ಸಾವಿರಾರು ಮಣ್ಣಿನ ದೀಪಗಳನ್ನು ನಿರ್ದಿಷ್ಟ ಶೈಲಿಯಲ್ಲಿ ಜೋಡಿಸಿ ಪ್ರಧಾನಿ ಮೋದಿಯವರ ಆಕರ್ಷಕ ಕಲಾಕೃತಿಯನ್ನು ಬಿಡಿಸಿದ್ದಾರೆ.
ಉಜ್ಜಯಿನಿ, ಸೆಪ್ಟೆಂಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನ ಹಾಗೂ ಅವರ ಸಾರ್ವಜನಿಕ ಜೀವನದ 25ನೇ ವರ್ಷದ ನೆನಪಿಗಾಗಿ ಉಜ್ಜಯಿನಿಯ ಶಿಪ್ರಾ ನದಿಯ ರಾಮ್ ಘಾಟ್ ಪ್ರದೇಶದಲ್ಲಿ ಲಕ್ಷಾಂತರ ದೀಪಗಳನ್ನು ಬಳಸಿ ಪ್ರಧಾನಿ ಮೋದಿಯವರ ಬೃಹತ್ ಮುಖಚಿತ್ರ ಹಾಗೂ ವಿಶೇಷ ಕಲಾಕೃತಿಯನ್ನು ರಚಿಸಲಾಗಿದೆ. ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ಆಯೋಜಿಸಲಾಗಿದ್ದ ಈ ದೀಪೋತ್ಸವದಲ್ಲಿ, ಕಲಾ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಜಂಟಿಯಾಗಿ ಶಿಪ್ರಾ ನದಿಯ ಘಾಟ್‌ಗಳ ಮೇಲೆ ಸಾವಿರಾರು ಮಣ್ಣಿನ ದೀಪಗಳನ್ನು ನಿರ್ದಿಷ್ಟ ಶೈಲಿಯಲ್ಲಿ ಜೋಡಿಸಿ ಪ್ರಧಾನಿ ಮೋದಿಯವರ ಆಕರ್ಷಕ ಕಲಾಕೃತಿಯನ್ನು ರಚಿಸಿದ್ದಾರೆ.
ಶಿಪ್ರಾ ನದಿಯ ದಂಡೆಯ ಮೇಲೆ ಸಾವಿರಾರು ದೀಪಗಳಿಂದ ‘ಆಶೀರ್ವಾದ ಕಾ ದಿಯಾ’ ಮತ್ತು ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಬಿಡಿಸಲಾಗಿದ್ದು, ಸಂಜೆ ದೀಪಗಳು ಪ್ರಜ್ವಲಿಸುತ್ತಿದ್ದಂತೆ ಈ ಕಲಾಕೃತಿ ಕಂಗೊಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

