Prime Minister Of India
ಭಾರತ ಪ್ರಜಾತಂತ್ರ ವ್ಯವಸ್ಥೆಯ ನಾಯಕನೆಂದರೆ ಪ್ರಧಾನಿ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಒಂದಕ್ಕೆ ನಾಯಕರಾಗಿರುವ ಪ್ರಧಾನಿಗೆ ಐದು ವರ್ಷ ಶಾಸನಬದ್ಧ ಅಧಿಕಾರವಿರುತ್ತದೆ. ಲೋಕಸಭೆಯಲ್ಲಿ ಬಹುಮತ ಹೊಂದಿರುವ ಪಕ್ಷ ಅಥವಾ ಒಕ್ಕೂಟದ ಸದಸ್ಯರ ನಾಯಕನೇ ಪ್ರಧಾನಿ ಆಗಲಿದ್ದು, ಭಾರತವು ಸಧ್ಯಕ್ಕೆ 14ನೇ ಪ್ರಧಾನಿಯನ್ನು ಹೊಂದಿದೆ.
ಭಾರತದಲ್ಲಿ ಒಬ್ಬ ವ್ಯಕ್ತಿ ಎಷ್ಟು ವರ್ಷ ಅಥವಾ ಎಷ್ಟು ಅವಧಿಗೆ ಪ್ರಧಾನಿ ಆಗಬಹುದು ಎನ್ನುವ ಯಾವುದೇ ಮಿತಿಯಿಲ್ಲ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಪ್ರಧಾನಿ ಆಗುವ ಪಕ್ಷ ಅಥವಾ ಒಕ್ಕೂಟ ಗೆಲುವು ಸಾಧಿಸಿದರೆ ಸಾಕಾಗುತ್ತದೆ. ಜವಾಹರ್‌ಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಿ ಆಗಿದ್ದರು. ಬಳಿಕ ಲಾಲ್‌ಬಹದ್ದೂರ್ ಶಾಸ್ತ್ರೀ, ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು.
ಮೊರಾರ್ಜಿ ದೇಸಾಯಿ ಅವರು ದೇಶದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರೇ, ಇಂದಿರಾ ಅವರು ಮೊದಲ ಮಹಿಳಾ ಪ್ರಧಾನಿ ಎನಿಸಿಕೊಂಡರು. ಬಳಿಕ ರಾಜೀವ್ ಗಾಂಧಿ, ವಿ.ಪಿ ಸಿಂಗ್, ಚಂದ್ರಶೇಖರ್, ಪಿ.ವಿ ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ ದೇವೇಗೌಡ, ಐ.ಕೆ ಗುಜ್ರಾಲ್, ಮನಮೋಹನ್ ಸಿಂಗ್ ಈ ಹುದ್ದೆಯನ್ನು ಏರಿದರು.
2014ರಿಂದ ನರೇಂದ್ರ ಮೋದಿಯು ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಸಂವಿಧಾನಬದ್ಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಷ್ಟ್ರಪತಿಯು ಮೊದಲ ಪ್ರಜೆಯಾಗಿದ್ದರೂ, ಆಡಳಿತಾತ್ಮಕವಾಗಿ ಪ್ರಧಾನಿಯೇ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿ.