AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹ್ರೇನ್ ರಾಜ, ಸೌದಿ ಅರೇಬಿಯಾದ ಪ್ರಿನ್ಸ್​ಗೆ ಕರೆ ಮಾಡಿದ ಪ್ರಧಾನಿ ಮೋದಿ; ಎರಡೂ ದೇಶಗಳ ಮೇಲಿನ ದಾಳಿಗೆ ಖಂಡನೆ

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುತ್ತಿದ್ದಂತೆ ಇರಾನ್ ಅದಕ್ಕೆ ಪ್ರತಿಯಾಗಿ ಸೇಡಿನ ದಾಳಿ ನಡೆಸಲಾರಂಭಿಸಿದೆ. ಇದರಿಂದ ಈ ಮೂರು ದೇಶಗಳಿಗೆ ಮಾತ್ರವಲ್ಲದೆ ಮಧ್ಯಪ್ರಾಚ್ಯದ ಇತರೆ ಅರಬ್ ದೇಶಗಳಲ್ಲೂ ಜೀವಭಯ ಉಂಟಾಗಿದೆ. ಇರಾನ್ ಕುವೈತ್, ಬಹ್ರೇನ್, ಸೌದಿ ಅರೇಬಿಯಾ ಸೇರಿದಂತೆ ತನ್ನ ಅಕ್ಕಪಕ್ಕದ ಎಲ್ಲ ದೇಶಗಳ ಮೇಲೂ ವೈಮಾನಿಕ ದಾಳಿ ನಡೆಸಲಾರಂಭಿಸಿದೆ. ಅದರಿಂದ ಸಾಕಷ್ಟು ಸಾವು-ನೋವುಗಳು ಉಂಟಾಗಿವೆ. ಈ ದಾಳಿಯನ್ನು ಭಾರತ ಬಲವಾಗಿ ಖಂಡಿಸಿದೆ.

ಬಹ್ರೇನ್ ರಾಜ, ಸೌದಿ ಅರೇಬಿಯಾದ ಪ್ರಿನ್ಸ್​ಗೆ ಕರೆ ಮಾಡಿದ ಪ್ರಧಾನಿ ಮೋದಿ; ಎರಡೂ ದೇಶಗಳ ಮೇಲಿನ ದಾಳಿಗೆ ಖಂಡನೆ
Modi With Saudi Crown Prince
ಸುಷ್ಮಾ ಚಕ್ರೆ
|

Updated on: Mar 02, 2026 | 8:03 PM

Share

ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಬಹ್ರೇನ್ ರಾಜ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಜೊತೆ ಫೋನ್​ನಲ್ಲಿ ಮಾತನಾಡಿದ್ದಾರೆ. ಈ ಎರಡೂ ದೇಶಗಳ ಮೇಲೆ ಇರಾನ್ (Iran Attack) ನಡೆಸಿದ ದಾಳಿಯನ್ನು ಮೋದಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಎರಡೂ ದೇಶಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ಮೋದಿ ಖಂಡಿಸಿದ್ದು, ಶಾಂತಿಯ ಪುನಃಸ್ಥಾಪನೆಗಾಗಿ ರಾಜತಾಂತ್ರಿಕ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ. ಭಾರತವು ಬಹ್ರೇನ್ ಮೇಲಿನ ದಾಳಿಯನ್ನು ಖಂಡಿಸುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ಅಲ್ಲಿನ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ತಿಳಿಸಿದೆ. ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮನವಿ

ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಕೂಡ ಮೋದಿ ಚರ್ಚಿಸಿದ್ದು, “ಸೌದಿ ಅರೇಬಿಯಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಇತ್ತೀಚಿನ ದಾಳಿಗಳನ್ನು ಭಾರತ ಖಂಡಿಸುತ್ತದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆ ಅತ್ಯಂತ ಮಹತ್ವದ್ದಾಗಿದೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಈ ಕಷ್ಟದ ಸಮಯದಲ್ಲಿ ಭಾರತೀಯ ಸಮುದಾಯದ ಸುರಕ್ಷತೆಯನ್ನು ನೋಡಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದ್ದೇನೆ” ಎಂದು ಮೋದಿ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್​ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಎಷ್ಟು ದಿನಗಳವರೆಗೆ ಮುಂದುವರೆಯಬಹುದು, ಟ್ರಂಪ್ ಹೇಳಿದ್ದೇನು?

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿಯಾಗಿ ದಾಳಿಗಳನ್ನು ನಡೆಸಿದವು. ಇದರಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಡಜನ್ಗಟ್ಟಲೆ ಹಿರಿಯ ವ್ಯಕ್ತಿಗಳು ಸಾವನ್ನಪ್ಪಿದರು. ಇದರಿಂದ ಹಲವಾರು ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?