AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ಬಯಸರು…

Horoscope Today August 02: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಭಾನುವಾರದಂದು ಪರಸ್ಪರ ವಾಗ್ವಾದ, ಖರ್ಚನ ಭಯ, ಸಂಕಟ ಹೇಳಲು ಮುಜುಗರ, ಅಶಾಂತಿಗೆ ಪರಿಹಾರ, ತುರ್ತು ಕಾರ್ಯ, ಓಡಾಟದಿಂದ ಆಯಾಸ, ನೀರಸ ಪ್ರತಿಕ್ರಿಯೆ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ಬಯಸರು...
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 02, 2026 | 12:44 AM

Share

ಮೇಷ ರಾಶಿ:

ಇಷ್ಟವಿಲ್ಲದ ಲೆಕ್ಕಾಚಾರವು ನಿಮ್ಮನ್ನೇ ಬಂಧು ಸುತ್ತಿಕೊಳ್ಳುವುದು. ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು. ಮಾನಸಿಕ ದ್ವಂದ್ವಗಳು ನಿಮ್ಮನ್ನು ಕಟ್ಟಿಹಾಕಬಹುದು. ಕಛೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಎಲ್ಲರಿಗೂ ತಿಳಿಯಲೂಬಹುದು. ಯಾರನ್ನೂ ಅವಲಂಬಿಸಿರುವುದು ಇಷ್ಟವಾಗದು. ಬೇಕಾದವರನ್ನು ಮಾತ್ರ ಹತ್ತಿರ ಕರೆಯುವಿರಿ. ಬಿಡಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು.

ವೃಷಭ ರಾಶಿ:

ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ನಿಮ್ಮ ಶ್ರಮಕ್ಕೆ ದೈವವು ಅನುಕೂಲವೂ ಲಭ್ಯವಾಗುವುದು. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಒತ್ತಡವನ್ನು ಕಳೆದುಕೊಳ್ಳುವ ಬಗ್ಗೆ ನಿಮಗೆ ಬೇಸರವಿರುವುದು. ಕಾನೂನಿಗೆ ವಿರುದ್ಧವಾದ ಕೆಲಸದಿಂದ ಹಣವನ್ನು ಪಡೆಯಲು ಹೋಗಬಹುದು. ಅದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮವನ್ನು ಉಂಟುಮಾಡಬಹುದು. ಕಳೆದುಕೊಂಡ ವಸ್ತುವನ್ನು ಮರಳಿಪಡೆಯಲು ಶ್ರಮವಹಿಸುವಿರಿ.

ಮಿಥುನ ರಾಶಿ:

ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ ಮುಗಿಸಿ.‌ ನಿಮ್ಮ ಅಶಕ್ತತೆಯು ಸಿಟ್ಟಾಗಿ ಬದಲಾಗುವುದು. ತಂದೆಯ ಜೊತೆ ವ್ಯವಹಾರದ ವಿಚಾರಕ್ಕೆ ಕಲಹವಾಗಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ಚರ್ವಿತಚರ್ವಣ ಎಂದು ಎನ್ನಿಸಿದರೂ ಹಿರಿಯರ ಮಾತುಗಳನ್ನು ಅವರ ಮೇಲಿನ‌ಗೌರವದಿಂದ ಕೇಳಬೇಕಾಗಬಹುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ.

ಕರ್ಕಾಟಕ ರಾಶಿ:

ನೀವು ದುಶ್ಚಟದಿಂದ ದೂರವಿರಲು ಮನಸ್ಸು ಮಾಡುವಿರಿ. ಉದ್ಯೋಗದಲ್ಲಿ ಭಡ್ತಿಯನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಸಂತೋಷ ನೀಡುವ ವಾರ್ತೆ ಇರುತ್ತದೆ. ಸ್ನೇಹಿತರಿಗೋಸ್ಕರ ಖರ್ಚುಮಾಡಬೇಕಾಗಿ ಬರಬಹುದು. ಯಾರದೋ ಮೂಲಕ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ನೀವು ಕೈಗೊಂಡ ಕಾರ್ಯಗಳು ಸಫಲವಾಗಲಿಲ್ಲ ಎಂಬ ಹತಾಶಭಾವವೂ ಸಿಟ್ಟೂ ಏಕಕಾಲಕ್ಕೆ ಬರಲಿದೆ. ಅಪರಿಚಿತರನ್ನು ಆಪ್ತರನ್ನಾಗಿ ಮಾಡಿಕೊಳ್ಳಲು ಹೋಗಿ ಅನಾಹುತವಾದೀತು.

ಸಿಂಹ ರಾಶಿ:

ದೊಡ್ಡ ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಹೊಸ ಕೆಲಸವನ್ನು ಮಾಡಲು ನಿಮಗೆ ಧೈರ್ಯ ಸಾಲದು. ಬುದ್ಧಿವಂತಿಕೆಯ ಕಾರ್ಯವು ನಿಮ್ಮನ್ನು ರಕ್ಷಿಸುವುದು. ಇಂದು ಸಾಲ ಕೊಡುವುದೇ ಹೆಚ್ಚಾದೀತು. ಪುರುಷರಿಂದ ಏನಾದರೂ ತೊಂದರೆಗಳು ಬರಬಹುದು. ಹಣ ಸಂಪಾದನೆಯನ್ನೇ ಮುಖ್ಯವಾಗಿಟ್ಟುಕೊಂಡು ಮನೆಯನ್ನು, ಮಕ್ಕಳನ್ನು ಮರೆಯಬಹುದು. ಉದರ ಬಾಧೆಯಿಂದ ಸಂಕಟಪಡಬೇಕಾಗುವುದು.

ಕನ್ಯಾ ರಾಶಿ:

ನಿಮ್ಮದಲ್ಲದ‌ ವಸ್ತುವನ್ನು ಪಡೆದಾಗ ಜೋಪಾನ‌ ಮಾಡುವುದು ಅವಶ್ಯಕ. ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ವ್ಯಾಪಾರದಲ್ಲಿ ಇಷ್ಟವಿಲ್ಲದಿದ್ದರೂ ಲಾಭವನ್ನು ನಿರೀಕ್ಷಿಸುವುದು ಬೇಡ. ಹೂಡಿಕೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಮಾಡಿ. ನಿಮಗೆ ಕೂಡಿಟ್ಟ ಹಣವು ಬರಲಿದ್ದು, ಅದನ್ನು ಸದುಪಯೋಗ ಮಾಡುವಿರಿ. ಕುಟುಂಬದಲ್ಲಿ ಹಿರಿಯರ ಮಾತನ್ನು ಅಲ್ಲಗಳೆಯಬಹುದು. ಕೃತಜ್ಞತೆಯು ನಿಮ್ಮ ಉನ್ನತ ಸ್ಥಾನಕ್ಕೆ ಕಾರಣವಾಗುವುದು.

ತುಲಾ ರಾಶಿ:

ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ನೀವಾಡಿದ ಮಾತುಗಳು ಸತ್ಯಕ್ಕೆ ದೂರಾದುದಾಗಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ನಿಮ್ಮ ಮಾತನ್ನು ಇಂದು ಪೂರ್ಣ ನಂಬಲಾರರು. ಪಾಪಕೃತ್ಯದ ಬಗ್ಗೆ ನಿಮಗೆ ಭಯವು ಬರಬಹುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ. ನಿಮ್ಮನ್ನು ನೀವು ವಿಶೇಷವೆಂದು ಭಾವಿಸುವಿರಿ.

ವೃಶ್ಚಿಕ ರಾಶಿ:

ನಿಮ್ಮ ಬಳಿ ಇರುವ ಸಂಪತ್ತನ್ನು ಸಹಾಯಕ್ಕಾಗಿ ಕೊಟ್ಟು ಕಳೆದುಕೊಳ್ಳುವಿರಿ. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ಯಾರನ್ನೂ ನೀವು ನೇರವಾಗಿ ಹೊಣೆಗಾರಿಕೆ ಮಾಡಲಾರಿರಿ. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು.

ಧನು ರಾಶಿ:

ಸ್ವಂತ ಬಲವಿಲ್ಲದೇ ನೀವು ಯಾರನ್ನೂ ಎದುರಿಸಲಾಗದು. ನೀವು ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿ ಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯ ರಿಪೇರಿ ಮಾಡಿಸಲಿದ್ದೀರಿ. ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಅಹಂಕಾರ ಬೇಡ. ವೇಗದ ಕಾರ್ಯವನ್ನು ಮಾಡಿ ಎಲ್ಲವನ್ನೂ ಹಾಳುಮಾಡಿಕೊಳ್ಳುವಿರಿ. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು.

ಮಕರ ರಾಶಿ:

ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಯಾರನ್ನೂ ಸಾಧರಣ‌ ಮನುಷ್ಯ ತಿಳಿದುಕೊಳ್ಳಬೇಡಿ. ವಿವಾಹದ ಮಾತುಕತೆಯಲ್ಲಿ ನಿಮ್ಮ ಅನರ್ಥದ ಮಾತು ವಿಘ್ನವನ್ನು ತಂದೀತು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು. ಸಾಲ ಹೊರೆಯ ಸ್ವಲ್ಪ ಕಡಿಮೆ ಆಗುವುದು. ಉನ್ನತ ಅಭ್ಯಾಸವನ್ನು ಸಮಸ್ಯೆಯ ಕಾರಣದಿಂದ ಮುಂದೂಡುವಿರಿ.

ಕುಂಭ ರಾಶಿ:

ಸರ್ಕಾರದ ಉದ್ಯೋಗಕ್ಕೆ ನಿಮ್ಮ ಸಣ್ಣ ಪ್ರಯತ್ನ ಇರಲಿದೆ. ನಿಮ್ಮ ಏಳ್ಗೆಯನ್ನು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದೂರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ಚರಾಸ್ತಿಯನ್ನು ಸ್ಥಿರಾಸ್ತಿ ಮಾಡುವ ಯೋಚನೆ ಮಾಡುವಿರಿ. ನಿಮ್ಮನ್ನು ಛೇಡಿಸುತ್ತ ಹಾಸ್ಯ ಮಾಡುವರು. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು. ವಾತಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸಿಕೊಳ್ಳುವುದು. ವ್ಯಾಪರದಲ್ಲಿ ಸ್ವಲ್ಪ ನಷ್ಟವನ್ನು ಕಾಣುವಿರಿ.

ಮೀನ ರಾಶಿ:

ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವವನ್ನು ತೋರಿಸಿದಂತೆ ಕಾಣಿಸುಬಹುದು.‌ ಸಜ್ಜನರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕು ಎಂಬ ದೃಢನಿರ್ಧಾರದಿಂದ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಅಪರಿಚಿತಸ್ಥಳವು ಆಪ್ತವೂ ಆಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುಷ್ಯಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಧೃತಿ, ಕರಣ : ಕೌಲವ, ಸೂರ್ಯೋದಯ – 06 – 06 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:10 – 18:45, ಯಮಗಂಡ ಕಾಲ 12:26 – 14:01, ಗುಳಿಕ ಕಾಲ 15:36 – 17:10

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us