AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಕಥೆ ಕೇಳಿ ಮೊದಲು ‘ನೋ’ ಎಂದಿದ್ದ ನಯನತಾರಾ; ಬಳಿಕ ಒಪ್ಪಿದ್ದು ಯಾಕೆ?

‘ಟಾಕ್ಸಿಕ್’ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ನಯನತಾರಾ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಆದರೆ, ಆರಂಭದಲ್ಲಿ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲು ಮನಸ್ಸು ಮಾಡಿರಲಿಲ್ಲ. ಅದಕ್ಕೆ ಕಾರಣ ಕೂಡ ಇದೆ.

‘ಟಾಕ್ಸಿಕ್’ ಕಥೆ ಕೇಳಿ ಮೊದಲು ‘ನೋ’ ಎಂದಿದ್ದ ನಯನತಾರಾ; ಬಳಿಕ ಒಪ್ಪಿದ್ದು ಯಾಕೆ?
Nayanthara
ಮದನ್​ ಕುಮಾರ್​
|

Updated on: Aug 24, 2026 | 10:56 PM

Share

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ (Toxic: A FairyTale for GrownUps) ಚಿತ್ರದಲ್ಲಿ ನಟಿಯರ ದೊಡ್ಡ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಆರಂಭದಲ್ಲಿ ದಕ್ಷಿಣ ಭಾರತದ ‘ಲೇಡಿ ಸೂಪರ್‌ಸ್ಟಾರ್’ ನಯನತಾರಾ (Nayanthara) ಈ ಸಿನಿಮಾಗೆ ‘ನೋ’ ಎಂದಿದ್ದರು ಎನ್ನುವ ಕುತೂಹಲಕಾರಿ ವಿಷಯ ಹೊರಬಿದ್ದಿದೆ.

ಈ ಚಿತ್ರದಲ್ಲಿ ನಯನತಾರಾ ಗಂಗಾ ಎಂಬ ಗ್ಯಾಂಗ್‌ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರವು ಯಶ್ ಅವರ ರಾಯಾ ಪಾತ್ರದೊಂದಿಗೆ ನೇರ ಸಂಪರ್ಕ ಹೊಂದಿದೆ. ಇತ್ತೀಚೆಗೆ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಯನತಾರಾ, ತಾವು ಮೊದಲಿಗೆ ಈ ಸಿನಿಮಾವನ್ನು ಏಕೆ ಬೇಡ ಎಂದಿದ್ದರು ಮತ್ತು ನಂತರ ಒಪ್ಪಿಕೊಂಡಿದ್ದು ಹೇಗೆ ಎಂಬುದನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕಿ ಗೀತು ಮೋಹನ್‌ದಾಸ್ ಮೊದಲು ಕಥೆ ಹೇಳಲು ಬಂದಾಗ, ಬಹುತಾರಾಗಣ ಇರುವ ಸಿನಿಮಾ ಎಂಬ ಕಾರಣಕ್ಕೆ ನಯನತಾರಾ ನಟಿಸಲು ನಿರಾಕರಿಸಿದ್ದರು. ಆದರೆ ಗೀತು ಅವರು ತಮ್ಮ ಸ್ಪಷ್ಟ ಕಲ್ಪನೆಯೊಂದಿಗೆ ನಯನತಾರಾ ಅವರನ್ನು ಮತ್ತೆ ಸಂಪರ್ಕಿಸಿ ಕಥೆ ವಿವರಿಸಿದರು. ಕಥೆ ಕೇಳಿದ ತಕ್ಷಣ ನಯನತಾರಾ ಅವರ ಆಲೋಚನೆಯೇ ಬದಲಾಯಿತು.

ಗೀತು ಮೋಹನ್‌ದಾಸ್ ಅವರ ಅದ್ಭುತ ಮೇಕಿಂಗ್ ಹಾಗೂ ವಿಶನ್‌ಗೆ ಮನಸೋತ ನಯನತಾರಾ, ತಕ್ಷಣವೇ ಸಿನಿಮಾಗೆ ಒಪ್ಪಿಗೆ ನೀಡಿದರು. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಗೀತು ಅವರ ಹೊಸ ಆಯಾಮ ಪರಿಚಯವಾಗಲಿದೆ ಎಂದು ಅವರು ಹೊಗಳಿದ್ದಾರೆ. ನಯನತಾರಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಟಾಕ್ಸಿಕ್’ ಸಿನಿಮಾದಲ್ಲಿನ ಅವರ ಪಾತ್ರವನ್ನು ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ತಿರುಪತಿಗೆ ತೆರಳಿ ಮುಡಿಕೊಟ್ರಾ ನಯನತಾರಾ? ಫೋಟೋ ಅಸಲಿಯತ್ತೇನು?

ನಟ ಹಾಗೂ ನಿರ್ಮಾಪಕರಾಗಿ ಯಶ್ ಅವರ ಬದ್ಧತೆ ಬಗ್ಗೆಯೂ ನಯನತಾರಾ ಕೊಂಡಾಡಿದ್ದಾರೆ. ‘ಯಶ್ ಅವರಷ್ಟು ಶ್ರಮಪಡುವ ನಟನನ್ನು ನಾನು ನೋಡಿಲ್ಲ. ಸಿನಿಮಾಗಾಗಿ ಅವರು ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯುವ ಸಮಯವನ್ನೂ ತ್ಯಾಗ ಮಾಡಿದ್ದಾರೆ. ತಮ್ಮ ಸುತ್ತಲಿರುವ ಕಲಾವಿದರು ಹಾಗೂ ತಾಂತ್ರಿಕ ವರ್ಗ ಅತ್ಯುತ್ತಮವಾಗಿ ಕೆಲಸ ಮಾಡುವಂತೆ ಅವರು ನಿರಂತರವಾಗಿ ಪ್ರೋತ್ಸಾಹಿಸುತ್ತಾರೆ’ ಎಂದು ನಯನತಾರಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us