
Toxic Movie
‘ಕೆಜಿಎಫ್ 2’ ಬಳಿಕ ಯಶ್ ಒಪ್ಪಿಕೊಂಡ ಮೊದಲ ಸಿನಿಮಾ ಇದು. ಯಶ್ ನಟಿಸುತ್ತಿರುವ 19ನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಕೆ.ವೆಂಕಟ್ ನಾರಾಯಣ್ ಅವರು ಇದನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ಮಲಯಾಳಂ, ತಮಿಳು ಮೊದಲಾದ ಭಾಷೆಗಳಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಆಗಸ್ಟ್ 8ರಂದು ಸಿನಿಮಾದ ಮುಹೂರ್ತ ನೆರವೇರಿದೆ. 2025ರ ಏಪ್ರಿಲ್ನಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ಈ ಚಿತ್ರವನ್ನು ಹಾಲಿವುಡ್ ಮಟ್ಟದಲ್ಲಿ ಸಿದ್ಧಪಡಿಸಲಾಗುತ್ತಿದೆ. ಯಶ್ ಅವರು ಈ ಚಿತ್ರಕ್ಕಾಗಿ ಬೇರೆ ಅವತಾರ ತಾಳಿದ್ದಾರೆ. ಈ ಸಿನಿಮಾದ ಬಗ್ಗೆ ಕೇವಲ ಕನ್ನಡದವರು ಮಾತ್ರವಲ್ಲದೆ ಪರಭಾಷೆಯವರಿಗೂ ನಿರೀಕ್ಷೆ ಸೃಷ್ಟಿ ಆಗಿದೆ ಅನ್ನೋದು ವಿಶೇಷ.
ಯಶ್ ಜೊತೆ ಇಲ್ಲ ಕ್ಲ್ಯಾಶ್; ‘ಟಾಕ್ಸಿಕ್’ಗೆ ಭಯಬಿದ್ದು ಹಿಂದೆ ಸರಿದ ಬನ್ಸಾಲಿ
ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ತೋರಿಸುವ ಒಂದು ಪ್ರಮುಖ ಘಟನೆ ಇತ್ತೀಚೆಗೆ ನಡೆದಿದೆ. ಬಾಲಿವುಡ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಚಿತ್ರದ ರಿಲೀಸ್ ದಿನಾಂಕವನ್ನು ಬದಲಾಯಿಸಿದ್ದಾರೆ. ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಜೊತೆ ಕ್ಲಾಶ್ ಆಗುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
- Rajesh Duggumane
- Updated on: Apr 23, 2025
- 8:57 am
‘ಟಾಕ್ಸಿಕ್’ ಚಿತ್ರಕ್ಕೆ ಠಕ್ಕರ್ ಕೊಡಲು ಬರ್ತಿದೆ ಮತ್ತೆರಡು ಬಿಗ್ ಬಜೆಟ್ ಸಿನಿಮಾ
ಯಶ್ ಅಭಿನಯದ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಚಿತ್ರ ಎನಿಸಿಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಿ ಅಭಿಮಾನಿಗಳು ಸಹ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಠಕ್ಕರ್ ಕೊಡಲು ಎರಡು ಬಿಗ್ ಬಜೆಟ್ ಚಿತ್ರಗಳು ರೆಡಿ ಆಗಿವೆ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Mar 24, 2025
- 12:55 pm
ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?
ಬಹುಬೇಡಿಕೆಯ ನಟಿಯಾಗಿ ಕಿಯಾರಾ ಅಡ್ವಾಣಿ ಅವರು ಗುರುತಿಸಿಕೊಂಡಿದ್ದಾರೆ. ‘ಟಾಕ್ಸಿಕ್’, ‘ವಾರ್ 2’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿ ಇವೆ. ಆದರೆ ಅವರು ಪ್ರೆಗ್ನೆಂಟ್ ಆದ್ದರಿಂದ ಕೆಲವು ಸಿನಿಮಾಗಳಿಂದ ಹೊರಗೆ ಬರುವುದು ಅನಿವಾರ್ಯ ಆಗಿದೆ ಎಂಬ ಮಾತು ಕೇಳಿಬಂದಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
- Madan Kumar
- Updated on: Mar 5, 2025
- 7:28 pm
Toxic Movie: ರಿಲೀಸ್ಗೂ ಮೊದಲೇ ಹೊಸ ದಾಖಲೆ ಬರೆದ ‘ಟಾಕ್ಸಿಕ್’ ಸಿನಿಮಾ
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಈ ಹಿಂದೆ ಎಂದಿಗೂ ಕನ್ನಡ ಚಿತ್ರರಂಗದಲ್ಲಿ ಇಂತಹ ಪ್ರಯತ್ನ ಆಗಿರಲಿಲ್ಲ. ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಡಿಸೆಂಬರ್ ಗೆ ಮುಂದೂಡಲಾಗಿದೆ.
- Web contact
- Updated on: Feb 25, 2025
- 6:59 am
ಬೆಂಗಳೂರಲ್ಲಿ ಯಶ್ ಜೊತೆ ‘ಟಾಕ್ಸಿಕ್’ ಶೂಟಿಂಗ್ ಆರಂಭಿಸಿದ ಸ್ಟಾರ್ ನಟಿ ನಯನತಾರಾ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಯಶ್ ಜೊತೆ ನಯನತಾರಾ, ಹುಮಾ ಖುರೇಶಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮುಂತಾದವರು ನಟಿಸುತ್ತಿದ್ದಾರೆ. ಶೂಟಿಂಗ್ ಸಲುವಾಗಿ ಇವರೆಲ್ಲರೂ ಬೆಂಗಳೂರಿಗೆ ಬಂದಿದ್ದಾರೆ. ಭಾರಿ ಬಜೆಟ್ನಲ್ಲಿ ‘ಟಾಕ್ಸಿಕ್’ ಸಿನಿಮಾ ಸಿದ್ಧವಾಗುತ್ತಿದೆ.
- Madan Kumar
- Updated on: Feb 5, 2025
- 7:02 am
ಯಶ್ ಕೈ ಸೇರಿತು ಧನಂಜಯ ಮದುವೆ ಆಮಂತ್ರಣ; ಟಾಕ್ಸಿಕ್ ಸೆಟ್ನಲ್ಲಿ ಡಾಲಿ ಭೇಟಿ
ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲ ತೊಡಗಿಕೊಂಡಿದ್ದಾರೆ. ಶೂಟಿಂಗ್ ಸೆಟ್ಗೆ ಭೇಟಿ ನೀಡಿದ ಡಾಲಿ ಧನಂಜಯ ಅವರು ಮದುವೆ ಆಹ್ವಾನ ಪತ್ರಿಕೆಯನ್ನು ನೀಡಿದ್ದಾರೆ. ಆ ಸಂದರ್ಭದ ಫೋಟೋಗಳು ಇಲ್ಲಿವೆ. ಮದುವೆ ಸಲುವಾಗಿ ಧನಂಜಯ ಅವರು ಸಿನಿಮಾ ಕೆಲಸಗಳಿಗೆ ಸದ್ಯಕ್ಕೆ ಬ್ರೇಕ್ ನೀಡಿದ್ದಾರೆ.
- Madan Kumar
- Updated on: Feb 3, 2025
- 8:29 pm
ಬೆಂಗಳೂರಲ್ಲಿ ನಡೆಯಲಿದೆ ‘ಟಾಕ್ಸಿಕ್’ ಚಿತ್ರದ ಪ್ರಮುಖ ದೃಶ್ಯದ ಶೂಟ್; ಯಾರೆಲ್ಲ ಬರ್ತಾರೆ?
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಬೆಂಗಳೂರು ಶೆಡ್ಯೂಲ್ ಶೀಘ್ರವೇ ಆರಂಭ ಆಗಲಿದೆ. ಕಿಯಾರಾ ಅಡ್ವಾಣಿ ಕೂಡ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಮೊದಲು ಬೆಂಗಳೂರು, ಗೋವಾ, ಮುಂಬೈಗಳಲ್ಲಿ ಚಿತ್ರೀಕರಣ ನಡೆದಿದ್ದು, ಪ್ರಮುಖ ದೃಶ್ಯಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ಗೆ ಮುಂದೂಡಲ್ಪಟ್ಟಿದೆ.
- Rajesh Duggumane
- Updated on: Jan 30, 2025
- 7:54 am
‘ಟಾಕ್ಸಿಕ್’ ಗ್ಲಿಂಪ್ಸ್ಗೆ ಮಲಯಾಳಂ ಚಿತ್ರರಂಗದ ವಿರೋಧ; ಗೀತು ಮೋಹನ್ದಾಸ್ಗೆ ನೇರ ಪ್ರಶ್ನೆ
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾದ ಬಳಿಕ ಮಹಿಳಾ ವಿರೋಧಿ ದೃಶ್ಯಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಲಯಾಳಂ ನಿರ್ದೇಶಕ ನಿತಿನ್ ಅವರು ಗೀತು ಮೋಹನ್ದಾಸ್ ಅವರ ಹಿಂದಿನ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಚಿತ್ರದಲ್ಲಿ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.
- Rajesh Duggumane
- Updated on: Jan 9, 2025
- 11:03 am
‘ಟಾಕ್ಸಿಕ್’ ಗ್ಲಿಂಪ್ಸ್ನಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿವೆ ವಿವಿಧ ಪೋಸ್
ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ‘ಟಾಕ್ಸಿಕ್’ ತಂಡ ಈ ಮೊದಲೇ ಘೋಷಣೆ ಮಾಡಿತ್ತು. ಅಂತೆಯೇ ಇಂದು (ಜನವರಿ 8) ಬೆಳಿಗ್ಗೆ 10 ಗಂಟೆ 25 ನಿಮಿಷಕ್ಕೆ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರ ಚಿತ್ರದ ಮೇಲಿರುವ ನಿರೀಕ್ಷೆ ಈಗ ದ್ವಿಗುಣವಾಗಿದೆ.
- Rajesh Duggumane
- Updated on: Jan 8, 2025
- 11:42 am
Toxic Movie: ಟಾಕ್ಸಿಕ್ ಗ್ಲಿಂಪ್ಸ್ ರಿಲೀಸ್; ಮಸ್ತ್ ಆಗಿ ಕ್ಲಬ್ಗೆ ಎಂಟ್ರಿ ಕೊಟ್ಟ ಯಶ್
Toxic Birthday Peek: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇಂದು (ಜನವರಿ 8) ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ದಿನದಂದು ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಅಪ್ಡೇಟ್ ಸಿಗಲಿದೆ ಎಂದು ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಅಪ್ಡೇಟ್ ಕೊಟ್ಟಿತ್ತು. ಆ ಸಮಯ ಈಗ ಸಮೀಪಿಸಿದೆ. ಈ ಚಿತ್ರದ ಗ್ಲಿಂಪ್ಸ್ನ ರಿಲೀಸ್ ಮಾಡಲಾಗಿದೆ.
- Rajesh Duggumane
- Updated on: Jan 8, 2025
- 11:23 am