AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆವಿಎನ್ vs ಕೆವಿಎನ್; ಒಂದೇ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್?

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಇದೇ ತಿಂಗಳು ಕೆವಿಎನ್ ನಿರ್ಮಾಣದ ‘ಜನ ನಾಯಕನ್’ ಸಹ ರಿಲೀಸ್ ಆಗುವ ಸಾಧ್ಯತೆ ಇದೆ. ಒಂದೇ ನಿರ್ಮಾಣ ಸಂಸ್ಥೆಯ ಎರಡು ದೊಡ್ಡ ಬಜೆಟ್ ಸಿನಿಮಾಗಳು ಒಂದೇ ತಿಂಗಳಲ್ಲಿ ಬಿಡುಗಡೆಯಾದರೆ ಬಾಕ್ಸ್ ಆಫೀಸ್‌ನಲ್ಲಿ ‘ಕೆವಿಎನ್ vs ಕೆವಿಎನ್’ ಸಂಘರ್ಷ ಉಂಟಾಗಬಹುದು.

ಕೆವಿಎನ್ vs ಕೆವಿಎನ್; ಒಂದೇ ತಿಂಗಳಲ್ಲಿ ಎರಡು ಬಿಗ್ ಬಜೆಟ್ ಸಿನಿಮಾ ರಿಲೀಸ್?
ಯಶ್-ವೆಂಕಟ್
ರಾಜೇಶ್ ದುಗ್ಗುಮನೆ
|

Updated on: Mar 04, 2026 | 3:16 PM

Share

ಮಾರ್ಚ್ 4ರ ಬೆಳಿಗ್ಗೆ ಕೆವಿಎನ್ ಸಂಸ್ಥೆ ಯಶ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ನೀಡಿತು. ‘ಟಾಕ್ಸಿಕ್’ (Toxic) ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರೋದು ಪಕ್ಕಾ ಎಂಬ ರೀತಿ ಬಿಂಬಿಸಲಾಗಿತ್ತು. ಆದರೆ, ಏಕಾಏಕಿ ಸಿನಿಮಾ ರಿಲೀಸ್ ದಿನಾಂಕವನ್ನು ತಂಡ ಮುಂದಕ್ಕೆ ಹಾಕಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಹಾಗಾದರೆ ಬಾಕ್ಸ್ ಆಫೀಸ್​​ನಲ್ಲಿ ಕೆವಿಎನ್ vs ಕೆವಿಎನ್ ಎಂಬ ಪರಿಸ್ಥಿತಿ ನಿರ್ಮಾಣ ಆಗಲಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ. ಇದಕ್ಕೆ ಕಾರಣವೂ ಇದೆ.

ಕೆವಿಎನ್ ಸಂಸ್ಥೆ ಒಮ್ಮೆಲೇ ಮೂರು ದೊಡ್ಡ ಬಜೆಟ್ ಚಿತ್ರಗಳನ್ನು ಕೈಗೆತ್ತಿಕೊಂಡಿತು. ‘ಜನ ನಾಯಗನ್’ ಜನವರಿ 9ಕ್ಕೆ, ‘ಟಾಕ್ಸಿಕ್’ ಮಾರ್ಚ್ 19ಕ್ಕೆ ಹಾಗೂ ‘ಕೆಡಿ’ ಚಿತ್ರವನ್ನು ಏಪ್ರಿಲ್ 30ಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ತಂಡಕ್ಕೆ ಇತ್ತು. ಎಲ್ಲಾ ರಿಲೀಸ್ ಮಧ್ಯೆ 50+ ದಿನಗಳ ಅಂತರ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ‘ಜನ ನಾಯಗನ್’ ಹಾಗೂ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೊಗಿದೆ. ‘ಜನ ನಾಯಗನ್’ ಸೆನ್ಸಾರ್ ಪ್ರಕ್ರಿಯೆ ಆಗಿಲ್ಲ. ಈ ಕಾರಣದಿಂದ ಈ ಸಿನಿಮಾ ರಿಲೀಸ್ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ‘ಟಾಕ್ಸಿಕ್’ ಜೂನ್ 4ಕ್ಕೆ ಬರೋದಾಗಿ ಘೋಷಣೆ ಆಗಿದೆ.

ಈ ಮೊದಲು ಹರಿದಾಡಿದ ಮಾಹಿತಿ ಪ್ರಕಾರ, ‘ಜನ ನಾಯಗನ್’ ಸಿನಿಮಾ ಜೂನ್ ಅಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಜೂನ್ 22 ವಿಜಯ್ ಜನ್ಮದಿನ. ಈ ವಿಶೇಷ ದಿನದ ಸಮಯದಲ್ಲಿ ‘ಜನ ನಾಯಗನ್’ ತರುವ ಆಲೋಚನೆ ತಂಡಕ್ಕೆ ಇದೆ. ಈಗ ‘ಟಾಕ್ಸಿಕ್’ ಕೂಡ ಜೂನ್ ಅಲ್ಲೇ ಬರುತ್ತಿದೆ. ಹೀಗಾಗಿ, ಒಂದೇ ನಿರ್ಮಾಣ ಸಂಸ್ಥೆಯ ಎರಡು ಚಿತ್ರಗಳು ಒಂದೇ ತಿಂಗಳಲ್ಲಿ ಬಿಡುಗಡೆ ಆಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳದ್ದು. ಹಾಗಾದಲ್ಲಿ, ಕೆವಿಎನ್ vs ಕೆವಿಎನ್ ಎಂಬತಹ ಸ್ಥಿತಿ ನಿರ್ಮಾಣ ಆಗುತ್ತದೆ.

ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ ಯಾವುದೇ ಪಳಗಿದ ನಿರ್ಮಾಪಕರು ತಮ್ಮದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳನ್ನು ಒಂದೇ ತಿಂಗಳಲ್ಲಿ ರಿಲೀಸ್ ಮಾಡುವ ಸಾಹಸಕ್ಕೆ ಹೊಗೋದಿಲ್ಲ. ಅದರಲ್ಲೂ ಬಿಗ್ ಬಜೆಟ್ ಸಿನಿಮಾ ಎಂದಾಗ ಆ ರೀತಿಯ ಸಾಹಸವನ್ನು ಮಾಡೋದಿಲ್ಲ. ಹೀಗಾಗಿ, ಕೆವಿಎನ್ ಕೂಡ ಈ ಬಗ್ಗೆ ಬೇರೆಯದೇ ರೀತಿಯ ಸ್ಟ್ರೆಟಜಿ ಮಾಡಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು