AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash

Yash

1986ರ ಜನವರಿ 8ರಂದು ನವೀನ್ ಕುಮಾರ್ ಗೌಡ ಆಗಿ ಜನಿಸಿದ ಯಶ್, ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹತ್ವದ ಪ್ರಭಾವ ಬೀರಿದ ಪ್ರಮುಖ ಭಾರತೀಯ ನಟ. ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ಹೀರೋ ಆಗಿ ಮಿಂಚಿದರು. ಅವರು ಅಭಿನಯನದ ಮೂಲಕ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ‘ಕೆಜಿಎಫ್: ಅಧ್ಯಾಯ 1’ (2018) ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದರು. ಚಿತ್ರದಲ್ಲಿ ಯಶ್‌ನ ಒರಟಾದ ಮತ್ತು ಮಹತ್ವಾಕಾಂಕ್ಷೆಯ ರಾಕಿಯ ಪಾತ್ರವು ಅಪಾರ ಪ್ರಶಂಸೆಯನ್ನು ಗಳಿಸಿತು. ಇದು ಅವರನ್ನು ಪ್ಯಾನ್-ಇಂಡಿಯ ಸ್ಟಾರ್ ಆಗಿ ಮಾಡಿತು. ಭಾರತೀಯ ಸಿನಿಮಾ ಜಗತ್ತಿನಲ್ಲಿ ಅವರ ಭವಿಷ್ಯದ ಯೋಜನೆಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರು ರಾಧಿಕಾ ಪಂಡಿತ್ನ ವರಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.

ಇನ್ನೂ ಹೆಚ್ಚು ಓದಿ

‘ಟಾಕ್ಸಿಕ್’ ಟ್ರೇಲರ್ ಬರೋದು ಯಾವಾಗ? ಕಾಯಬೇಕು ಇನ್ನಷ್ಟು ದಿನ

Toxic Trailer Release Date: ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಟೀಸರ್ ಬಳಿಕ ಈಗ ಟ್ರೇಲರ್ ಬಗ್ಗೆ ಕುತೂಹಲ ಹೆಚ್ಚಿದೆ. ಮಾರ್ಚ್ 19ರಂದು ಸಿನಿಮಾ ತೆರೆಕಾಣಲಿದೆ. ಬಾಲಿವುಡ್ ಚಿತ್ರದ ಸ್ಪರ್ಧೆಯ ನಡುವೆಯೂ ಯಶ್ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಟ್ರೇಲರ್‌ನಲ್ಲಿ ಪ್ರಮುಖ ತಾರೆಯರಾದ ನಯನತಾರಾ, ರುಕ್ಮಿಣಿ, ಕಿಯಾರಾ ಅವರ ಪಾತ್ರಗಳ ಪರಿಚಯ ಆಗುವ ನಿರೀಕ್ಷೆ ಇದೆ.

ನನ್ನ ಸಿನಿಮಾ ನೋಡಿ ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್; ಅಪರೂಪದ ಫೋಟೋ ವೈರಲ್

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ಆರಂಭಿಕ ಹೋರಾಟದ ಅಪರೂಪದ ಫೋಟೋ ವೈರಲ್ ಆಗಿದೆ. 'ನನ್ನ ಸಿನಿಮಾ ನೋಡಿ ಪ್ಲೀಸ್' ಎಂದು 'ಮೊದಲಸಲ' ಚಿತ್ರದ ಪಾಂಪ್ಲೆಂಟ್‌ಗಳನ್ನು ಹಂಚಿದ್ದರು. ಈ ಚಿತ್ರ ಪ್ರಚಾರದ ಸಂದರ್ಭದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮ್ಮ ಪರಿಶ್ರಮದಿಂದಲೇ ಈ ಮಟ್ಟಕ್ಕೆ ಬೆಳೆದ ರಾಕಿಂಗ್ ಸ್ಟಾರ್ ಯಶ್ ಈಗ 'ಟಾಕ್ಸಿಕ್' ಮೂಲಕ ಜಾಗತಿಕ ಸ್ಟಾರ್ ಆಗುವ ಸಿದ್ಧತೆಯಲ್ಲಿದ್ದಾರೆ.

ಟೀಕೆ ತಾಳಲಾರದೆ ಇನ್​​ಸ್ಟಾ ಡಿಲೀಟ್ ಮಾಡಿದ ‘ಟಾಕ್ಸಿಕ್’ ಟೀಸರ್ ನಟಿ?

ಟಾಕ್ಸಿಕ್ ಸಿನಿಮಾದ ಟೀಸರ್ ವಿವಾದದ ಹಿನ್ನೆಲೆಯಲ್ಲಿ ನಟಿ ಬಿಯಾತ್ರೀಜ್ ಟಾಫೆಬಾಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ . ಟೀಸರ್‌ನಲ್ಲಿನ ಬೋಲ್ಡ್ ದೃಶ್ಯಕ್ಕೆ ಸಂಬಂಧಿಸಿದಂತೆ ದ್ವೇಷದ ಸಂದೇಶಗಳು ಬಂದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

ಯಶ್ ನಟನೆಯ 'ಟಾಕ್ಸಿಕ್' ಟೀಸರ್‌ನ ಬೋಲ್ಡ್ ದೃಶ್ಯಗಳಿಗೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿಗೆ ದೂರುಗಳು ಬಂದಿದ್ದವು. ಆದರೆ, ಸೆನ್ಸಾರ್ ಮಂಡಳಿ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ಕಂಟೆಂಟ್‌ಗಳ ಮೇಲೆ ತಮಗೆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಟ್ರೇಲರ್‌ಗಳು ಮತ್ತು ಚಲನಚಿತ್ರಗಳಿಗೆ ಮಾತ್ರ ಪ್ರಮಾಣಪತ್ರ ನೀಡುತ್ತೇವೆ ಎಂದು ಮಂಡಳಿ ತಿಳಿಸಿದೆ.

ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು

ಯಶ್ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಲ್ಫ್​​ ಕ್ಲಬ್​ ರಸ್ತೆ ಬಳಿಯಿರುವ ನಿವಾಸದ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ದೂರು ನೀಡಲಾಗಿತ್ತು. ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿ ಕೇಸ್​ ಹಾಕಲಾಗಿದೆ. ಯಶ್​ ಹೆಸರು ಉಲ್ಲೇಖಿಸಿ ಜಿಎಸ್​ ಕ್ರಿಯೇಷನ್ಸ್​ ಮತ್ತು ವೇಣು ಗ್ರೂಪ್ಸ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಕ್ಸಿಕ್: ದಕ್ಷಿಣದ ಹೀರೋಗಳ ಆರಾಧನೆ ಅಂತ್ಯ ಆಗಬಹುದು; ಆರ್​ಜಿವಿ ಭವಿಷ್ಯ

ಈ ವರ್ಷ ಮಾರ್ಚ್ 19ರಂದು ‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಸಿನಿಮಾಗಳು ತೆರೆಕಾಣಲಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಹೇಗೆ ಇರಬಹುದು ಎಂಬುದನ್ನು ಆರ್​ಜಿವಿ ಊಹಿಸಿದ್ದಾರೆ.

ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿ ಐದೇ ದಿನಕ್ಕೆ 8.5 ಕೋಟಿ ವೀಕ್ಷಣೆ ಪಡೆದು ದಾಖಲೆ ನಿರ್ಮಿಸಿದೆ. ಬೋಲ್ಡ್ ದೃಶ್ಯಗಳ ಕಾರಣದಿಂದ ಚರ್ಚೆಗೆ ಗ್ರಾಸವಾಗಿದ್ದರೂ, ಯಶ್ ಜನಪ್ರಿಯತೆ ಮತ್ತು ಟೀಸರ್‌ನ ಆಕರ್ಷಣೆ ಭಾರಿ ಯಶಸ್ಸು ತಂದುಕೊಟ್ಟಿದೆ. ಇದು ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಧನ್ಯವಾದಗಳು ಸರ್, ನೀವು ನನ್ನ ಹಿರಿಯರು’; ಸುದೀಪ್ ಪ್ರಶಂಸೆಗೆ ಉತ್ತರಿಸಿದ ಯಶ್

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಟೀಸರ್ ಕುರಿತು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ಯಶ್, 'ಧನ್ಯವಾದಗಳು ಸರ್, ನೀವು ನನ್ನ ಹಿರಿಯರು' ಎಂದು ವಿನಮ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳಿಗೆ ತೆರೆ ಬಿದ್ದಿದ್ದು, ಅವರ ಬಾಂಧವ್ಯ ಗಟ್ಟಿಗೊಂಡಿದೆ.

‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ

ಕಳೆದ ವರ್ಷದ ಬ್ಲಾಕ್‌ಬಸ್ಟರ್ 'ಧುರಂಧರ್' 1000 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಇನ್ನೂ ಪ್ರಬಲ್ಯ ಸಾಧಿಸುತ್ತಿದೆ. ಇದರ ಸೀಕ್ವೆಲ್ 'ಧುರಂಧರ್ 2' ಮಾರ್ಚ್ 19ರಂದು ಬಿಡುಗಡೆಯಾಗಲಿದ್ದು, ಅದೇ ದಿನ ಯಶ್ ಅಭಿನಯದ 'ಟಾಕ್ಸಿಕ್' ಸಹ ತೆರೆಕಾಣಲಿದೆ. ಇದು ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಿದ್ದು, ಇತರ ಚಿತ್ರಗಳು ಬಿಡುಗಡೆಯನ್ನು ಮುಂದೂಡುತ್ತಿವೆ. 'ಆವಾರಾಪನ್ 2' ಚಿತ್ರದ ವಿಳಂಬಕ್ಕೆ ಬೇರೆ ಕಾರಣವಿದೆ.

ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್

ಆಸ್ತಿ ವಿಚಾರವಾಗಿ ಹಾಸನದ ದೇವರಾಜ್ ಹಾಗೂ ಯಶ್ ತಾಯಿ ಪುಷ್ಪ ಅರುಣ್​​ಕುಮಾರ್ ನಡುವೆ ವಿವಾದ ಏರ್ಪಟ್ಟಿದೆ. ಅವರು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದೆ. ಆ ಬಗ್ಗೆ ದೇವರಾಜ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

ಪಾರ್ಟಿಯಲ್ಲಿ ಶಂಕರ್​​ ನಾಗ್ ಹಾಡು ಹಾಡಿದ ಯಶ್; ಇಲ್ಲಿದೆ ವಿಡಿಯೋ

ನಟ ಯಶ್ ಅವರು ಶಂಕರ್ ನಾಗ್ ಅವರ ದೊಡ್ಡ ಅಭಿಮಾನಿ. ಇತ್ತೀಚೆಗೆ ಯಶ್ ಶಂಕರ್ ನಾಗ್ ಅವರ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಅವರ ಕನ್ನಡ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ತಮ್ಮ ಎತ್ತರಕ್ಕೆ ಬೆಳೆದರೂ, ಯಶ್ ಯಾವಾಗಲೂ ಕನ್ನಡದ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದಾರೆ.

‘ಒಂದಲ್ಲ, ಎರಡಲ್ಲ 200 ಮಿಲಿಯನ್’; ‘ಟಾಕ್ಸಿಕ್’ ಟೀಸರ್ ಅಬ್ಬರಕ್ಕೆ ‘ಕೆಜಿಎಫ್ 2’ ದಾಖಲೆ ಉಡೀಸ್

'ಟಾಕ್ಸಿಕ್' ಸಿನಿಮಾದ ಟೀಸರ್ 24 ಗಂಟೆಗಳಲ್ಲಿ ಬರೋಬ್ಬರಿ 200 ಮಿಲಿಯನ್ (20 ಕೋಟಿ) ಡಿಜಿಟಲ್ ವೀಕ್ಷಣೆಗಳನ್ನು ಪಡೆದು ಹೊಸ ದಾಖಲೆ ಸೃಷ್ಟಿಸಿದೆ. ಈ ಮೂಲಕ 'ಕೆಜಿಎಫ್ 2', 'ಕಾಂತಾರ' ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಹಿಂದಿನ ದಾಖಲೆಗಳನ್ನು ಯಶ್ ಅವರ ಈ ಸಿನಿಮಾ ಟೀಸರ್ ಮುರಿದಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಡಿಜಿಟಲ್ ವೇದಿಕೆಗಳಲ್ಲಿ ಭಾರಿ ಸ್ಪಂದನೆ ಸಿಕ್ಕಿದೆ.