ಒಂದೇ ಪಂದ್ಯದಲ್ಲಿ ಮಾರ್ಕೊ ಯಾನ್ಸೆನ್ ‘ಡಬಲ್’ ಅರ್ಧಶತಕ
South Africa vs New Zealand, 1st Semi-Final,: ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಸೌತ್ ಆಫ್ರಿಕಾ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ಕೊ ಯಾನ್ಸೆನ್ 30 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 55 ರನ್ ಬಾರಿಸಿದ್ದರು. ಯಾನ್ಸೆನ್ ಬಾರಿಸಿದ ಈ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 20 ಓವರ್ಗಳಲ್ಲಿ 169 ರನ್ ಕಲೆಹಾಕಿತು.
ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಅರ್ಧಶತಕ ಬಾರಿಸಿದ್ದು ಮಾರ್ಕೊ ಯಾನ್ಸೆನ್ ಮಾತ್ರ.
ಆರಂಭಿಕ ಆಘಾತಕ್ಕೆ ಒಳಗಾಗಿದ್ದ ಸೌತ್ ಆಫ್ರಿಕಾ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ಕೊ ಯಾನ್ಸೆನ್ 30 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 55 ರನ್ ಬಾರಿಸಿದ್ದರು. ಯಾನ್ಸೆನ್ ಬಾರಿಸಿದ ಈ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 20 ಓವರ್ಗಳಲ್ಲಿ 169 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಮಾರ್ಕೊ ಯಾನ್ಸೆನ್ನನ್ನು ಟಾರ್ಗೆಟ್ ಮಾಡಿದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 2.5 ಓವರ್ಗಳಲ್ಲಿ ಮಾರ್ಕೊ ಯಾನ್ಸೆನ್ ನೀಡಿದ್ದು ಬರೋಬ್ಬರಿ 53 ರನ್ಗಳು.
ಅಂದರೆ 30 ಎಸೆತಗಳಲ್ಲಿ 55 ರನ್ ಬಾರಿಸಿದ್ದ ಮಾರ್ಕೊ ಯಾನ್ಸೆನ್ ಕೇವಲ 17 ಎಸೆತಗಳಲ್ಲಿ 53 ರನ್ ಚಚ್ಚಿಸಿಕೊಂಡಿದ್ದರು. ಪರಿಣಾಮ ಸೌತ್ ಆಫ್ರಿಕಾ ತಂಡ ನೀಡಿದ 170 ರನ್ಗಳ ಗುರಿಯನ್ನು ನ್ಯೂಝಿಲೆಂಡ್ ಕೇವಲ 12.5 ಓವರ್ಗಳಲ್ಲಿ ಚೇಸ್ ಮಾಡಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

