AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲೀಸ್​​ಗೂ ಮೊದಲೇ ಸೇಫ್ ಆದ ‘ಟಾಕ್ಸಿಕ್’; ಇನ್ನು ಬರೋದೆಲ್ಲ ಲಾಭ

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ₹600 ಕೋಟಿ ಪ್ರೀ-ರಿಲೀಸ್ ಬಿಸ್ನೆಸ್ ಮೂಲಕ ನಿರ್ಮಾಪಕರಿಗೆ ಸುರಕ್ಷತೆ ಒದಗಿಸಿದೆ. ಯಶ್ ಅವರ ಉತ್ತಮ ಕಾರ್ಯತಂತ್ರ ಹಾಗೂ ನಯನತಾರಾ, ಟೊವಿನೋ, ರುಕ್ಮಿಣಿ ವಸಂತ್ ಅವರಂತಹ ಸ್ಟಾರ್‌ಗಳ ಜನಪ್ರಿಯತೆ ಈ ಯಶಸ್ಸಿಗೆ ಮುಖ್ಯ ಕಾರಣ. ಟೀಸರ್ ಮಾತ್ರ ರಿಲೀಸ್ ಆದರೂ OTT, ಟಿವಿ, ಥಿಯೇಟ್ರಿಕಲ್ ಹಕ್ಕುಗಳ ಮಾರಾಟದಿಂದ ಈ ಬೃಹತ್ ಆದಾಯ ಬಂದಿದೆ.

ರಿಲೀಸ್​​ಗೂ ಮೊದಲೇ ಸೇಫ್ ಆದ ‘ಟಾಕ್ಸಿಕ್’; ಇನ್ನು ಬರೋದೆಲ್ಲ ಲಾಭ
ಯಶ್-ವೆಂಕಟ್
ರಾಜೇಶ್ ದುಗ್ಗುಮನೆ
|

Updated on: Mar 03, 2026 | 11:26 AM

Share

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic Movie) ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದ ಟೀಸರ್​​ ಹಾಗೂ ಹಾಡುಗಳು ಗಮನ ಸೆಳೆಯುತ್ತಿವೆ. ಈ ಮಧ್ಯೆ ‘ಟಾಕ್ಸಿಕ್’ ಸಿನಿಮಾದ ಪ್ರೀ ರಿಲೀಸ್ ಬಿಸ್ನೆಸ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಿನಿಮಾ ರಿಲೀಸ್​​​ಗೂ ಮೊದಲೇ ಸೇಫ್ ಆಗಿದೆ ಎಂಬ ಮಾಹಿತಿಯನ್ನು ನಿರ್ಮಾಪಕರೊಬ್ಬರು ನೀಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇನ್ಮುಂದೆ ಬರೋದೆಲ್ಲ ಕೇವಲ ಲಾಭ ಎಂದು ಫ್ಯಾನ್ಸ್ ಹಿಗ್ಗುತ್ತಿದ್ದಾರೆ.

ದೊಡ್ಡ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದಾಗ ನಿರ್ಮಾಪಕರು ಸೇಫ್ ಆಗೋದು ತುಂಬಾನೇ ಮುಖ್ಯ ಆಗುತ್ತದೆ. ಎಲ್ಲಾ ಸಿನಿಮಾ ನಿರ್ಮಾಪಕರಿಗೂ ಈ ಅವಕಾಶ ಸಿಗೋದಿಲ್ಲ. ಅದರಲ್ಲೂ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎಂದರೆ ಲಾಭಕ್ಕಾಗಿ ಸಿನಿಮಾ ರಿಲೀಸ್​​ವರೆಗೆ ಕಾಯಲೇಬೇಕಾಗುತ್ತದೆ. ಆದರೆ, ಯಶ್ ಮಾಡಿದ ಪ್ಲ್ಯಾನ್​​ನಿಂದ ನಿರ್ಮಾಪಕರು ಮೊದಲೇ ಸೇಫ್ ಆಗಿದ್ದಾರೆ.

ಈ ಬಗ್ಗೆ ತಮಿಳು ಸಿನಿಮಾ ನಿರ್ಮಾಪಕ ಹಾಗೂ ಹಂಚಿಕೆದಾರ ಧನಂಜಯನ್ ಮಾತನಾಡಿದ್ದಾರೆ. ‘ಸಿನಿಮಾ ರಿಲೀಸ್​​​ಗೂ ಮೊದಲೇ 600 ಕೋಟಿ ರೂಪಾಯಿ ಪ್ರೀ-ರಿಲೀಸ್ ಬಿಸ್ನೆಸ್ ಮಾಡಲಾಗಿದೆ. ಇದು ಹೈಪ್​​ನಿಂದ ಅಲ್ಲ. ಸರಿಯಾದ ಗ್ರೌಂಡ್​ವರ್ಕ್ ಮಾಡಿದ ಕಾರಣಕ್ಕೆ’ ಎಂದು ಅವರು ಹೇಳಿದ್ದಾರೆ.

‘ನಯನತಾರಾ ಇದ್ದಾರೆ, ಟುವಿನೋ ಥಾಮಸ್ ಇದ್ದಾರೆ. ಮಾರ್ಕೆಟ್ ಮಾಡಲು ದೊಡ್ಡ ದೊಡ್ಡ ಹೆಸರು ಇದೆ. ಎಲ್ಲಾ ಹೆಸರಿನಿಂದಲೂ ಲಾಭ ಇದೆ. ನಯನತಾರಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದವರು. ಅವರ ನಟನೆಯ ಜವಾನ್ ಹಿಟ್ ಆಗಿದೆ. ಕಾಂತಾರ ಬಳಿಕ ರುಕ್ಮಿಣಿ ವಸಂತ್ ದೇಶಾದ್ಯಂತ ಜನಪ್ರಿಯತೆ ಪಡೆದರು’ ಎಂದು ಅವರು ಹೇಳಿದ್ದಾರೆ. ಈ ಹೆಸರುಗಳೇ ಮಾರುಕಟ್ಟೆ ವಿಸ್ತರಿಸಲು ಸಹಕಾರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲೇ ನಡೆಯಲಿದೆ ‘ಟಾಕ್ಸಿಕ್’ ಟ್ರೇಲರ್ ಲಾಂಚ್; ಆದರೆ, ಅಭಿಮಾನಿಗಳಿಗೆ ನಿರಾಸೆ

‘ಟಾಕ್ಸಿಕ್’ ಟೀಸರ್ ಮಾತ್ರ ರಿಲೀಸ್ ಆಗಿದೆ. ಆದಾಗ್ಯೂ ಚಿತ್ರದ ಒಟಿಟಿ ಹಕ್ಕು, ಟಿವಿ ಹಕ್ಕು, ಥಿಯೇಟ್ರಿಕಲ್ ಹಕ್ಕುಗಳು ಮಾರಾಟ ಆಗಿವೆ. ಇವುಗಳಿಂದಲೇ ಚಿತ್ರಕ್ಕೆ 600 ಕೋಟಿ ರೂಪಾಯಿ ಹರಿದು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
‘ಕ್ಯಾಲೆಂಡರ್’ ಸಿನಿಮಾ ಬಗ್ಗೆ ಸುಷ್ಮಿತಾ ಮತ್ತು ನಿವಿಷ್ಕಾ ಮಾತು
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಜಮೀರ್‌ ಅಹಮ್ಮದ್ ತಲೆದಂಡ: ಕಾಂಗ್ರೆಸ್ ಒಳ ಗುಟ್ಟು ಬಿಚ್ಚಿಟ್ಟ ರೇಣುಕಾಚಾರ್ಯ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಡೆಹ್ರಾಡೂನ್‌ನ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ರೀಲ್ಸ್ ಕ್ರೇಜ್; ಅತಿವೇಗಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್,ಯುವತಿ ಸಾವು
ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ
ಎರಡೂ ಪಂಚಮಸಾಲಿ ಟ್ರಸ್ಟ್‌ಗಳ ವಿರುದ್ಧ ಯತ್ನಾಳ್ ಗಂಭೀರ ಆರೋಪ