ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್ ದಾಳಿ: 16 ಪಾರ್ಲರ್ಗಳಿಗೆ ನೋಟಿಸ್
ಮುಖ್ಯಾಂಶಗಳು
- ಬೆಂಗಳೂರಿನಲ್ಲಿ 191 ಸ್ಪಾಗಳ ಮೇಲೆ ಪೊಲೀಸ್ ದಾಳಿ
- ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ
- 16 ಪಾರ್ಲರ್ಗಳಿಗೆ ನೋಟಿಸ್ ಜಾರಿ
ಬೆಂಗಳೂರು ಪೊಲೀಸರು ಪೂರ್ವ ಕಮಿಷನರೇಟ್ ವ್ಯಾಪ್ತಿಯಲ್ಲಿ 191 ಸ್ಪಾ ಮತ್ತು ಮಸಾಜ್ ಪಾರ್ಲರ್ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಮತ್ತು ಪರವಾನಗಿ ಇಲ್ಲದ 16 ಪಾರ್ಲರ್ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೂರ್ವ ಕಮಿಷನರ್ ಪಿ.ಎಸ್. ಹರ್ಷ ಅವರ ಸೂಚನೆಯ ಮೇರೆಗೆ ಈ ಪರಿಶೀಲನೆ ನಡೆದಿದ್ದು, ಮುಂದಿನ ತನಿಖೆ ಮುಂದುವರಿಯಲಿದೆ.
ಬೆಂಗಳೂರು, ನವೆಂಬರ್ 29: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಾಜ್ ಮತ್ತು ಸ್ಪಾ ಪಾರ್ಲರ್ಗಳ ಮೇಲೆ ಬೆಂಗಳೂರು ಪೊಲೀಸರು ದಾಳಿ ಮಾಡಿದ್ದಾರೆ. ಪೂರ್ವ ಕಮಿಷನರೇಟ್ನ 11 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 191 ಸ್ಪಾ ಮತ್ತು ಮಸಾಜ್ ಪಾರ್ಲರ್ಗಳನ್ನು ಪರಿಶೀಲಿಸಲಾಗಿದ್ದು, ನಿಯಮ ಉಲ್ಲಂಘಿಸಿದ 16 ಪಾರ್ಲರ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಪೂರ್ವ ಕಮಿಷನರ್ ಪಿ.ಎಸ್. ಹರ್ಷ ಸೂಚನೆ ಮೇರೆಗೆ ದಿಢೀರ್ ಪರಿಶೀಲನೆ ಮಾಡಲಾಗಿದೆ. ಪಾರ್ಲರ್ಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆ, ಸಿಬ್ಬಂದಿಯ ಗುರುತಿನ ಚೀಟಿ ಮತ್ತು ವಿಳಾಸದ ಪರಿಶೀಲನೆ, ಹಾಗೂ ಗ್ರಾಹಕರ ಲೆಡ್ಜರ್ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

