ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್
ಅಲ್ಲು ಅರ್ಜುನ್ ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿರೋದು ಗೊತ್ತೇ ಇದೆ. ಈಗ ಅವರು ಹೈದರಾಬಾದ್ ಅಲ್ಲಿ ಹೊಸದಾದ ಥಿಯೇಟರ್ ಆರಂಭಿಸುತ್ತಿದ್ದಾರೆ. ಸಂಕ್ರಾಂತಿ ಸಮಯದಲ್ಲಿ ಇದು ಓಪನ್ ಆಗಲಿದೆ. ಇದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಅದರ ಝಲಕ್ನ ಇಲ್ಲಿ ಹಂಚಿಕೊಳ್ಳಲಾಗಿದೆ.
- Shreelaxmi H
- Updated on: Jan 8, 2026
- 10:04 am
ವಿಜಯ್ ಹಿಟ್ ಸಾಂಗ್ನ ಕೆಟ್ಟದಾಗಿ ಹಾಡಿ ಟ್ರೋಲ್ ಆದ ಮಮಿತಾ ಬೈಜು
ನಟಿ ಮಮಿತಾ ಬೈಜು 'ಜನ ನಾಯಗನ್' ಹಾಡು ಬಿಡುಗಡೆ ಸಮಾರಂಭದಲ್ಲಿ 'ಎಲ್ಲಾ ಪುಗಳುಮ್' ಗೀತೆ ಹಾಡಿದ್ದು ಭಾರಿ ಟ್ರೋಲ್ಗೆ ಒಳಗಾಗಿದೆ. ಅವರ ಗಾಯನ ಶೈಲಿ ಮತ್ತು ವಿಜಯ್ ಅವರ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ 'ಜನ ನಾಯಗನ್' ಸಿನಿಮಾ ರಿಲೀಸ್ ಕೂಡ ಸೆನ್ಸಾರ್ ಸಮಸ್ಯೆಯಿಂದ ಮುಂದಕ್ಕೆ ಹೋಗಿದೆ.
- Shreelaxmi H
- Updated on: Jan 8, 2026
- 8:03 am
ರಾಕಿಂಗ್ ಸ್ಟಾರ್ ಯಶ್ ಜನ್ಮದಿನ; ಇಂದು ಆಗುತ್ತಾ ಆ ವಿಶೇಷ ಘೋಷಣೆ?
Yash Birthday: ನಟ ಯಶ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. 'ಕೆಜಿಎಫ್ 2' ಬಿಡುಗಡೆಯಾಗಿ ಹಲವು ವರ್ಷಗಳಾಗಿದ್ದು, 'ಕೆಜಿಎಫ್ 3' ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡುವುದಾಗಿ ಹೇಳಿತ್ತು. ಯಶ್ ಜನ್ಮದಿನದಂದು 'ಕೆಜಿಎಫ್ 3' ಬಗ್ಗೆ ಮಹತ್ವದ ಅಪ್ಡೇಟ್ ಬರಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
- Shreelaxmi H
- Updated on: Jan 8, 2026
- 7:41 am
ಹೊಸ ರಿಯಾಲಿಟಿ ಶೋ ಮೂಲಕ ಬಂದ ಸೃಜನ್ ಲೋಕೇಶ್; ಬಿಗ್ ಬಾಸ್ ಬಳಿಕ ಪ್ರಸಾರ
ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹೊಸ ರಿಯಾಲಿಟಿ ಶೋ ಆರಂಭಿಸೋದು ವಾಡಿಕೆ. ಈ ಬಾರಿಯೂ ಅದು ಮುಂದುವರಿದಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಬಾರಿ ಯಾವ ರೀಯಾಲಿಟಿ ಶೋನ ಮಾಡಲಾಗುತ್ತಿದೆ? ಅದಕ್ಕೆ ಉತ್ತರ ಸಿಕ್ಕೇ ಬಿಟ್ಟಿದೆ. ಈ ಬಾರಿ ಸೃಜನ್ ಹೊಸ ರಿಯಾಲಿಟಿ ಶೋ ಮೂಲಕ ಬರ್ತಿದ್ದಾರೆ.
- Shreelaxmi H
- Updated on: Jan 7, 2026
- 1:25 pm
‘ಜನ ನಾಯಗನ್’ ರಿಲೀಸ್ಗೂ ಮೊದಲು ಒಟಿಟಿಯಲ್ಲಿ ಟ್ರೆಂಡ್ ಆಯ್ತು ‘ಭಗವಂತ ಕೇಸರಿ’
ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರವು ಜನವರಿ 9 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದು ಬಾಲಯ್ಯನ 'ಭಗವಂತ ಕೇಸರಿ'ಯ ರಿಮೇಕ್ . ಮೂಲ ತೆಲುಗು ಚಿತ್ರವು IMDB ಯಲ್ಲಿ 5.8 ರೇಟಿಂಗ್ ಪಡೆದರೂ, ರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ. ವಿಜಯ್ ರಾಜಕೀಯ ಪ್ರವೇಶಿಸುವ ಮುನ್ನ ನಟಿಸಿದ ಕೊನೆಯ ಚಿತ್ರ ಇದಾಗಿದೆ ಎನ್ನಲಾಗಿದೆ. ಕಥೆಯಲ್ಲಿ ಕೆಲ ಬದಲಾವಣೆಗಳೊಂದಿಗೆ 'ಜನ ನಾಯಗನ್' ಸಿದ್ಧವಾಗಿದೆ.
- Shreelaxmi H
- Updated on: Jan 7, 2026
- 10:07 am
‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಕೊನೆಗೂ ಒಂದಾಗಿದ್ದು, ಮಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಮಿಂಚು ಗೌತಮ್ ಮಗಳೆಂದು ಬಹಿರಂಗವಾಗಿದೆ. ಮಲ್ಲಿಗೆ ಹೊಸ ಪ್ರೇಮಪ್ರಕರಣ ಮತ್ತು ಶಕುಂತಲಾ ತಂತ್ರಗಳು ಕಥೆಗೆ ಮತ್ತಷ್ಟು ರೋಚಕ ತಿರುವುಗಳನ್ನು ನೀಡಲಿವೆ. ಈ ಸೀರಿಯಲ್ ಬಗ್ಗೆ ಇಲ್ಲಿದೆ ಅಪ್ಡೇಟ್.
- Shreelaxmi H
- Updated on: Jan 7, 2026
- 8:08 am
ಅರುಣ್-ಪುಷ್ಪಾ ಯಶ್ನ ಬೆಳೆಸಿದ್ದು ಹೇಗೆ? ವಿವರಿಸಿದ್ದ ರಾಕಿಂಗ್ ಸ್ಟಾರ್
ನಟ ಯಶ್ ಅವರ ಬಾಲ್ಯ, ಪೋಷಕರು ನೀಡಿದ ಬೆಂಬಲ ಮತ್ತು ನಟನೆಗೆ ಬಂದ ನಂತರದ ಪಯಣದ ಬಗ್ಗೆ ಇಲ್ಲಿದೆ ವಿವರ. ಸಣ್ಣ ವಯಸ್ಸಿನಲ್ಲಿ ನಾಟಕದತ್ತ ಆಸಕ್ತಿ, ಶಿಕ್ಷಣಕ್ಕೆ ಆದ್ಯತೆ ಮತ್ತು ಕುಟುಂಬದಿಂದ ಸಿಕ್ಕ ಆತ್ಮವಿಶ್ವಾಸ ಅವರ ಯಶಸ್ಸಿಗೆ ಮೆಟ್ಟಿಲಾಗಿದೆ. ಯಶ್ ಹುಟ್ಟುಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ವೈರಲ್ ವಿಡಿಯೋ ಹಾಗೂ 'ಟಾಕ್ಸಿಕ್' ಸಿನಿಮಾ ಬಿಡುಗಡೆಯ ಬಗ್ಗೆ ಮಾಹಿತಿ ಇದೆ.
- Shreelaxmi H
- Updated on: Jan 7, 2026
- 7:42 am
ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ಆಗಿದೆ; ಹೇಮಾ ಮಾಲಿನಿ ಆರೋಪ
ನಟ ಧರ್ಮೇಂದ್ರ ನಿಧನದ ಹಿನ್ನೆಲೆಯಲ್ಲಿ, ಹೇಮಾ ಮಾಲಿನಿ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತು ಮನೆಗೆ ಕರೆತಂದಾಗಲೂ ಮಾಧ್ಯಮಗಳು ಕುಟುಂಬವನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದವು. ಸನ್ನಿ ಡಿಯೋಲ್ ಕೂಡ ಇದರಿಂದ ಆಕ್ರೋಶಗೊಂಡಿದ್ದರು. ಇದು ಕುಟುಂಬಕ್ಕೆ ಅಪಾರ ದುಃಖ ಮತ್ತು ಭಾವನಾತ್ಮಕ ನೋವು ತಂದಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
- Shreelaxmi H
- Updated on: Jan 6, 2026
- 10:21 am
ರಕ್ಷಿತಾನ ಹೇಗೆ ಲಾಕ್ ಮಾಡಿದ್ರು ನೋಡಿ ಗಿಲ್ಲಿ; ಮಾತೇ ಇಲ್ಲ
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ರಕ್ಷಿತಾ ಶೆಟ್ಟಿ ಕೂಡ ಅವರಿಗೆ ಸ್ಪರ್ಧಿಯಾಗಿದ್ದಾರೆ. ರಕ್ಷಿತಾನ ಅವರು ಮಾತಿನಲ್ಲಿ ಸಿಕ್ಕಿಸಿದ್ದಾರೆ. ಅವರಿಗೆ ನಂತರ ಮಾತು ಬಂದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Jan 6, 2026
- 8:02 am
ಯಶ್ ಬಾಲ್ಯದಲ್ಲಿ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ಕ್ಯೂಟ್ ಫೋಟೋ
ಯಶ್ ಅವರು ಮೈಸೂರಿನವರು. ಅವರ ತಂದೆ ಅರುಣ್ ಕುಮಾರ್ ಕೆಎಸ್ಆರ್ಟಿಸಿ ಡ್ರೈವರ್ ಆಗಿದ್ದರು. ಅವರ ತಾಯಿ ಪುಷ್ಪಾ ಮನೆ ನೋಡಿಕೊಂಡು ಇದ್ದವರು. ಈಗ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಮನೆಯಲ್ಲಿ ಕಷ್ಟ ಇದ್ದರೂ ಯಶ್ ಅವರ ವರೆಗೆ ಬರದಂತೆ ಕುಟುಂಬ ನೋಡಿಕೊಂಡಿತ್ತು. ಈ ಬಗ್ಗೆ ಯಶ್ಗೆ ಖುಷಿ ಇದೆ.
- Shreelaxmi H
- Updated on: Jan 6, 2026
- 7:45 am
‘ಚಾನೆಲ್ ಮನೆ ಮಗಳಾದರೆ ಉಳಿಯಲು ಸಾಧ್ಯವಿಲ್ಲ, ಅದು ಸುಳ್ಳು’; ಸ್ಪಂದನಾ ಸೋಮಣ್ಣ
ಸ್ಪಂದನಾ ಸೋಮಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 99 ದಿನ ಇದ್ದರು. ಅವರು ಅಷ್ಟು ದಿನ ಇದ್ದಿದ್ದು ಹೇಗೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದ್ದು ಇದೆ. ಈ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ. ಅವರು ಇಷ್ಟು ದಿನ ಹೇಗೆ ಇದ್ದರು ಎಂದು ಹೇಳಿದ್ದಾರೆ.
- Shreelaxmi H
- Updated on: Jan 5, 2026
- 1:16 pm
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಭವ್ಯಾ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಆಗಿ ಗಮನ ಸೆಳೆದವರು. ಅವರು ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಯಾಗಿದ್ದಾರೆ. ಮದನ ಮನಮೋಹಿನಿ ಹಾಡಿಗೆ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿಯವರು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Jan 5, 2026
- 8:53 am