AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ನಟಿಯರ ಗುಣ ಸಾಯಿ ಪಲ್ಲವಿಯಲ್ಲಿದೆ ಎಂದು ಮೊದಲೇ ಊಹಿಸಿದ್ದ ರಂಭಾ

ಸಾಯಿ ಪಲ್ಲವಿ ಇಂದು ಬೇಡಿಕೆಯ ನಟಿ. ರಾಮಾಯಣದಲ್ಲಿ ಸೀತೆಯ ಪಾತ್ರಕ್ಕೆ ಆಯ್ಕೆಯಾಗಿರುವ ಅವರು ಮೇಕಪ್ ಇಲ್ಲದೆ, ಹಾಟ್ ಡ್ರೆಸ್ ಇಲ್ಲದೆ ತಮ್ಮದೇ ಛಾಪು ಮೂಡಿಸಿದ್ದಾರೆ. ರಂಭಾ ಅವರು ಹಲವು ವರ್ಷಗಳ ಹಿಂದೆಯೇ ಸಾಯಿ ಪಲ್ಲವಿ ಅವರ ಪ್ರತಿಭೆಯನ್ನು ಗುರುತಿಸಿ ಹೊಗಳಿದ್ದರು. ಆ ವಿಡಿಯೋ ಈಗ ವೈರಲ್ ಆಗಿದ್ದು, ರಂಭಾ ಮಾತು ಇಂದು ನಿಜವಾಗಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಮೂರು ನಟಿಯರ ಗುಣ ಸಾಯಿ ಪಲ್ಲವಿಯಲ್ಲಿದೆ ಎಂದು ಮೊದಲೇ ಊಹಿಸಿದ್ದ ರಂಭಾ
ಸಾಯಿ ಪಲ್ಲವಿ-ರಂಭಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 10, 2026 | 8:02 AM

Share

ಸಾಯಿ ಪಲ್ಲವಿಯವರು (Sai Pallavi)  ಇಂದು ಬೇಡಿಕೆಯ ನಟಿ ಎನಿಸಿಕೊಂರುವುದ ಗೊತ್ತೇ ಇದೆ. ‘ರಾಮಾಯಣ’ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಹಾಕಿ ಮಾಡುತ್ತಿರುವ ಸಿನಿಮಾ ಇದು ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿರುತ್ತದೆ. ಅಂತಹ ಸಿನಿಮಾದಲ್ಲಿ ಇವರಿಗೆ ಅವಕಾಶ ಸಿಕ್ಕಿದೆ ಎಂದರೆ ಇವರ ಟ್ಯಾಲೆಂಟ್ ಏನು ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ ಮತ್ತು ರಂಭಾ ಅವರು ಸಾಯಿ ಪಲ್ಲವಿ ಬಗ್ಗೆ ಅವರು ಅಂದೇ ಹೊಗಳಿದ್ದರು. ಅದು ಈಗ ನಿಜವಾಗಿದೆ.

ಸಾಯಿ ಪಲ್ಲವಿ ಅವರು ಎಲ್ಲಾ ಹೀರೋಯಿನ್ಗಳಂತೆ ಅಂತೆ ಅಲ್ಲ. ಅವರು ಎಲ್ಲರಿಗಿಂತ ಭಿನ್ನ ಎಂದೇ ಹೇಳಬಹುದು. ಏಕೆಂದರೆ ಅವರು ಎಂದಿಗೂ ಮೇಕಪ್ ಹಾಕಲ್ಲ. ಬಿಕಿನಿ ಅಥವಾ ಹಾಟ್ ಡ್ರೆಸ್ ಹಾಕಲ್ಲ. ಈ ಕಾರಣಕ್ಕೆ ಇರಬಹುದು ಅವರಿಗೆ ಸೀತೆಯ ಪಾತ್ರ ಸಿಕ್ಕಿದೆ. ಈ ಮೊದಲು ಅವರು ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗಿ ಆಗಿದ್ದರು. ಆ ಸಂದರ್ಭದ ವಿಡಿಯೋ ಇದಾಗಿದೆ.

View this post on Instagram

A post shared by @sxperb45

ಸಾಯಿ ಪಲ್ಲವಿ ಅವರು ನಟಿ ಮಾತ್ರ ಅಲ್ಲ ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ಅವರು ಈ ಮೊದಲು ಇಟಿವಿಯ ರಿಯಾಲಿಟಿ ಶೋಗೆ ಬಂದಿದ್ದರು. ಆ ಶೋನಲ್ಲಿ ರಂಭಾ ಅವರು ಜಡ್ಜ್ ಆಗಿದ್ದರು. ಅವರು ಸಾಯಿ ಪಲ್ಲವಿ ಅವರ ಕಲೆಯನ್ನು ಆಗಲೇ ಗುರುತಿಸಿದ್ದರು ಮತ್ತು ಅವರು ಅಂದು ಸಾಯಿ ಪಲ್ಲವಿ ಅವರ ಬಗ್ಗೆ ಮೆಚ್ಚುಗೆ ಹೊರಹಾಕಿದ್ದರು. ಅವರ ಕಲೆಯನ್ನು ಅಂದೇ ಗುರುತಿಸಿದ್ದರು ಎಂದೇ ಹೇಳಬಹುದು. ಆ ಸಂದರ್ಭದ ವಿಡಿಯೋ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

‘ಸಾಯಿ ಪಲ್ಲವಿ, ಕೊಂಚ ತಿರುಗಿ, ಐಶ್ವರ್ಯಾ ರೈ ರೀತಿ ಇದೀರಾ. ಎರಡಕ್ಕೆ ತಿರುಗಿ, ಮಾಧುರಿ ರೀತಿ ಇದೀರಾ. ಡ್ಯಾನ್ಸ್ ಸರೋಜ್ ಖಾನ್ ರೀತಿ ಇದೀರಾ. ಸೂಪರ್ ಆಗಿದೀರಾ’ ಎಂದು ರಂಭಾ ಅವರು ಹೇಳಿದ್ದರು. ಅದು ನಿಜವಾಗಿದೆ ಎಂದು ಅನೇಕರು ಹೇಳಿದ್ದರು. ಸಾಯಿ ಪಲ್ಲವಿ ಅವರು ವಿವಿಧ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಅವರ ಪಾತ್ರವು ನೈಸರ್ಗಿಕವಾಗಿ ಇರುತ್ತದೆ. ಈ ಕಾರಣದಿಂದಲೇ ಅವರು ಎಲ್ಲರಿಗೂ ಇಷ್ಟ ಆಗುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us