AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಹಾವ್! ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ

ವ್ಹಾವ್! ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ

ರಮೇಶ್ ಬಿ. ಜವಳಗೇರಾ
|

Updated on: Mar 10, 2026 | 3:46 PM

Share

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು (Bengaluru) ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ (international bus station)ತಲೆ ಎತ್ತಲಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು (ಮಾರ್ಚ್ 10) ವಿಧಾನಪರಿಷತ್​​ನಲ್ಲಿ ಉತ್ತರ ನೀಡಿದ ರಾಮಲಿಂಗಾರೆಡ್ಡಿ ಅವರು, ಈಗ ಮೆಜೆಸ್ಟಿಕ್​ ವ್ಯಾಪ್ತಿಯಲ್ಲಿ 32 ಎಕರೆ ಜಾಗ ಇದೆ. ಪ್ರತಿದಿನ ಇಲ್ಲಿ 11 ಸಾವಿರ ಬಸ್​​ಗಳ ಸಂಚಾರ ಇರುತ್ತೆ. ಮೆಜೆಸ್ಟಿಕ್​​ನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ. ಸಿಂಗಾಪುರಕ್ಕಿಂತಲೂ ಅತ್ಯುತ್ತಮ ಬಸ್​ ನಿಲ್ದಾಣ ಮಾಡುತ್ತೇವೆ. ಬಸ್​​​ ನಿಲ್ದಾಣ ಸಂಬಂಧ ವರದಿ ಪಡೆಯಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್​​​​ನಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಬೆಂಗಳೂರು, (ಮಾರ್ಚ್ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಂದು (Bengaluru) ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ (international bus station)ತಲೆ ಎತ್ತಲಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು (ಮಾರ್ಚ್ 10) ವಿಧಾನಪರಿಷತ್​​ನಲ್ಲಿ ಉತ್ತರ ನೀಡಿದ ರಾಮಲಿಂಗಾರೆಡ್ಡಿ ಅವರು, ಈಗ ಮೆಜೆಸ್ಟಿಕ್​ ವ್ಯಾಪ್ತಿಯಲ್ಲಿ 32 ಎಕರೆ ಜಾಗ ಇದೆ. ಪ್ರತಿದಿನ ಇಲ್ಲಿ 11 ಸಾವಿರ ಬಸ್​​ಗಳ ಸಂಚಾರ ಇರುತ್ತೆ. ಮೆಜೆಸ್ಟಿಕ್​​ನಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ. ಸಿಂಗಾಪುರಕ್ಕಿಂತಲೂ ಅತ್ಯುತ್ತಮ ಬಸ್​ ನಿಲ್ದಾಣ ಮಾಡುತ್ತೇವೆ. ಬಸ್​​​ ನಿಲ್ದಾಣ ಸಂಬಂಧ ವರದಿ ಪಡೆಯಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ಯಾಬಿನೆಟ್​​​​ನಲ್ಲಿ ಇಟ್ಟು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

‘ಪ್ರಾಜೆಕ್ಟ್ ಮೆಜೆಸ್ಟಿಕ್​​’ ಹೆಸರಿನಲ್ಲಿ ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಬಸ್​ ನಿಲ್ದಾಣ ಮಾಡಲಾಗುತ್ತೆ. ತಜ್ಞರ ಸಲಹೆ ಪಡೆದು ಬಸ್​​ ನಿಲ್ದಾಣ ನಿರ್ಮಿಸಲು ನಿರ್ಧರಿಸಿದ್ದೇವೆ. ಸಿಂಗಾಪುಕ್ಕಿಂತ ಉತ್ತಮ ಅಂತಾರಾಷ್ಟ್ರೀಯ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us