AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 11ರ ದಿನಭವಿಷ್ಯ

ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ನೀರನ್ನು ಇಡುವುದರಿಂದ ಕೆಲಸದ ಅಡೆತಡೆಗಳು ದೂರವಾಗಿ ಹೊಸ ಅವಕಾಶಗಳು ಹರಿದುಬರುತ್ತವೆ. ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 11ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 11ರ ದಿನಭವಿಷ್ಯ
Numerology Image Credit source: thedailyjagran
ಸ್ವಾತಿ ಎನ್​ಕೆ
| Edited By: |

Updated on: Mar 11, 2026 | 12:20 AM

Share

ಹಣದ ಪರ್ಸ್‌ನಲ್ಲಿ ಒಂದು ಸಣ್ಣ ದಾಲ್ಚಿನ್ನಿ ಚಕ್ಕೆಯನ್ನು ಇಟ್ಟುಕೊಳ್ಳಿ. ಇದರಿಂದ ನಿಮ್ಮ ಮೇಲಿರುವ ಆರ್ಥಿಕ ಒತ್ತಡ ಕಡಿಮೆ ಆಗುತ್ತದೆ. ಹಣಕಾಸಿನ ಹರಿವು ಸರಾಗ ಆಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಇನ್ನೇನು ಇಂಥ ದಿನ ಹಣವನ್ನು ನೀಡುತ್ತೇನೆ ಎಂಬ ಮಾತು ನೀಡಿದ್ದವರು ಸಹ ಈ ತೀರ್ಮಾನದ ಬಗ್ಗೆ ಇನ್ನಷ್ಟು ಆಲೋಚನೆ ಮಾಡಬೇಕಿದೆ ಎಂದು ಹಣ ನೀಡುವುದನ್ನೇ ಮುಂದಕ್ಕೆ ಹಾಕಲಿದ್ದೀರಿ. ಸಂಗಾತಿಯ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅವರು ನಿಮಗೆ ಅಚ್ಚರಿ ಮೂಡಿಸುವಂತೆ ಕೆಲವು ಉಡುಗೊರೆಗಳನ್ನು ನೀಡಬಹುದು ಅಥವಾ ಪ್ರವಾಸಕ್ಕೆ ಕರೆದೊಯ್ಯುವುದಕ್ಕೆ ಪ್ಲಾನ್ ಮಾಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮುಕ್ತ ಮನಸ್ಸಿನಿಂದ ವರ್ತಿಸಲಿದ್ದೀರಿ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಆಗಲಿವೆ. ತುಂಬ ಆಪ್ತರು ಹಾಗೂ ಬಂಧುಗಳು ನೀಡುವ ಕೆಲವು ಸಲಹೆ- ಸೂಚನೆಗಳಿಂದಾಗಿ ಬಹಳ ಬದಲಾವಣೆಗಳನ್ನು ನೀವು ಮಾಡಿಕೊಳ್ಳಲಿದ್ದೀರಿ. ನೀವು ಈಗಾಗಲೇ ತೆಗೆದುಕೊಂಡಿದ್ದ ತೀರ್ಮಾನಗಳನ್ನು ತಕ್ಷಣಕ್ಕೆ ತಿಳಿಸದೆ ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ಬಹಳ ಸಮಯದಿಂದ ಮಾಡಬೇಕು ಎಂದಿದ್ದ ಕೆಲವು ಕೆಲಸ ಈ ದಿನ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಪ್ರೀತಿ- ಪ್ರೇಮದ ವಿಚಾರದಲ್ಲಿ ಗಟ್ಟಿ ತೀರ್ಮಾನವನ್ನು ಕೈಗೊಳ್ಳಲೇ ಬೇಕಾದ ಸ್ಥಿತಿ ಉದ್ಭವ ಆಗಲಿದೆ. ಇನ್ನು ಪ್ರಮುಖವಾದ ವ್ಯಕ್ತಿಯೊಬ್ಬರನ್ನು ಈ ದಿನ ಭೇಟಿ ಆಗುವ ಯೋಗ ನಿಮಗೆ ಇದೆ. ಅವರ ಜತೆಗಿನ ಒಡನಾಟದಿಂದ ನಿಮ್ಮ ಆಲೋಚನಾ ಕ್ರಮದಲ್ಲಿ ಬದಲಾವಣೆ ಆಗಲಿದೆ. ಅಷ್ಟೇ ಅಲ್ಲ, ದೀರ್ಘಾವಧಿಯಲ್ಲಿ ಆದಾಯ ತರುವಂಥ ಸಾಧ್ಯತೆಗಳು ಸಹ ಇವೆ.

ಲೇಖನ- ಸ್ವಾತಿ ಎನ್.ಕೆ.

Follow Us