ಒಂದೇ ಸೆಕೆಂಡ್ನಲ್ಲಿ ಜೀವ ಹೋಗುತ್ತಿತ್ತು; ಹಾಳಾದ ಲಿಫ್ಟ್ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಗುಜರಾತ್‌ನ ವ್ಯಕ್ತಿಯೊಬ್ಬರು ಲಿಫ್ಟ್ ಇದ್ದಕ್ಕಿದ್ದಂತೆ ಹಾಳಾಗುವ ಮೊದಲು ಕೆಲವೇ ಸೆಕೆಂಡುಗಳಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ವಲ್ಸಾದ್‌ನ ತಿಥಾಲ್ ರಸ್ತೆಯಲ್ಲಿರುವ ಸರ್ದಾರ್ ಹೈಟ್ಸ್‌ನ ಸಬರಮತಿ ಕಟ್ಟಡದಲ್ಲಿ ಲಿಫ್ಟ್ ಇದ್ದಕ್ಕಿದ್ದಂತೆ ಹಾಳಾಗಿ ಬಿದ್ದ ನಂತರ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವನ್ನು ಸ್ವಲ್ಪದರಲ್ಲೇ ತಪ್ಪಿದೆ. ಲಿಫ್ಟ್ ಬೀಳುವ ಮೊದಲು ಅದರೊಳಗೆ ಪ್ರವೇಶಿಸಿದ್ದ ವ್ಯಕ್ತಿಯೊಬ್ಬರು ಪವಾಡದ ರೀತಿ ಪಾರಾಗಿದ್ದಾರೆ.
ಅಹಮದಾಬಾದ್, ಮಾರ್ಚ್ 4: ಗುಜರಾತ್‌ನ ವಲ್ಸಾದ್ ಅಪಾರ್ಟ್ಮೆಂಟ್ನಲ್ಲಿ ಲಿಫ್ಟ್ (Lift) ಇದ್ದಕ್ಕಿದ್ದಂತೆ ಹಾಳಾಗಿ ಅನಿರೀಕ್ಷಿತವಾಗಿ ಕೆಳಗೆ ಕುಸಿದಿದೆ. ಈ ವೇಳೆ ಆ ಲಿಫ್ಟ್ನಲ್ಲಿದ್ದ ವ್ಯಕ್ತಿ ಪವಾಡವೆಂಬಂತೆ ಪಾರಾಗಿದ್ದಾರೆ. ಆ ಲಿಫ್ಟ್ನೊಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಈ ಶಾಕಿಂಗ್ ವಿಡಿಯೋ ನೋಡಿದರೆ ಲಿಫ್ಟ್ ಹತ್ತಲು ಗಾಬರಿಯಾಗುವುದು ಗ್ಯಾರಂಟಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us

