National News

National News

ರಾಷ್ಟ್ರೀಯ ಸುದ್ದಿಗಳನ್ನು ಸಮಗ್ರ ಚಿತ್ರಣ  ಇಲ್ಲಿ ಸಿಗುತ್ತೇ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸುದ್ದಿಗಳನ್ನು ಇಲ್ಲಿ ತಿಳಿಸಲಾಗುತ್ತದೆ.  ರಾಜಕೀಯವಾಗಿ, ಸಾಮಾಜಿಕ, ಹಾಗೂ ದೇಶದ ಬೇರೆ ಬೇರೆ ಊರಿನಲ್ಲಿ ನಡೆದ ಘಟನೆಗಳನ್ನು, ಸುದ್ದಿಗಳನ್ನು ಇಲ್ಲಿ ತಿಳಿಸಲಾಗುವುದು. ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಸಂಗತಿಗಳನ್ನು ಹಾಗೂ ಸುದ್ದಿಗಳನ್ನು ತಕ್ಷಣದಲ್ಲಿ ನೀಡಲಾಗುವುದು. 

ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ಮಾಂಸದಂಗಡಿ ಎದುರು ಕೊಳೆತ ಶವ ಎಸೆದ ವ್ಯಕ್ತಿ

ಮಾಂಸದಂಗಡಿಯವರು ಮಾಂಸ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಕೊಳೆತ ಶವವನ್ನು ಆತನ ಅಂಗಡಿ ಎದುರು ಎಸೆದು ಹೋಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕುಮಾರ್ ಎಂಬಾತ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ, ಮಣಿಯರಸನ್ ನಡೆಸುತ್ತಿದ್ದ ಅಂಗಡಿಯಲ್ಲಿ ಕಾಯಂ ಗ್ರಾಹಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಕುಮಾರ್ ಅಂಗಡಿಗೆ ಹೋಗಿ ಮಾಂಸ ಕೇಳಿದ್ದ, ಆದರೆ ಮಣಿಯರಸನ್ ಆತನಿಗೆ ಮಾಂಸ ಕೊಡುವುದಿಲ್ಲ ಎಂದು ಹೇಳಿದ್ದರು.

Shraddha Walker: ಲಿವ್-ಇನ್ ಸಂಗಾತಿಯಿಂದ ಕೊಲೆಯಾಗಿದ್ದ ಶ್ರದ್ಧಾ ವಾಕರ್​ ತಂದೆ ಹೃದಯಾಘಾತದಿಂದ ಸಾವು

ಲಿವ್ -ಇನ್ ಸಂಗಾತಿಯ ಕೈಯಿಂದ ಬರ್ಬರವಾಗಿ ಕೊಲೆಯಾಗಿದ್ದ ಶ್ರದ್ಧಾ ವಾಕರ್​ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮುಂಬೈನ ವಸಾಯಿಯಲ್ಲಿ ನಿಧನರಾದರು. ಮಗಳ ಮರಣದ ನಂತರ ಆಕೆಯ ತಂದೆ ಜರ್ಜರಿತರಾಗಿದ್ದರು. ಮಗಳ ಅಂತಿಮ ವಿಧಿವಿಧಾನವನ್ನು ನೆರವೇರಿಸಲು, ದೇಹದ ಉಳಿದ ಭಾಗಗಳನ್ನು ಪಡೆಯಲು ಕಾಯುತ್ತಿದ್ದರು ಎಂದು ಹೇಳಲಾಗುತ್ತಿದೆ.

ಮಹಾಕುಂಭ ಮೇಳದಲ್ಲಿ 3 ದಿನಗಳ ಕಾಲ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಫೆಬ್ರವರಿ 16ರಿಂದ18ರವರೆಗೆ ಅಂತಾರಾಷ್ಟ್ರೀಯ ಪಕ್ಷಿ ಉತ್ಸವವನ್ನು ಆಯೋಜಿಸಲಾಗಿದೆ. ಈ ಬಾರಿಯ ಮಹಾಕುಂಭವು ಆಧ್ಯಾತ್ಮಿಕ ನಂಬಿಕೆಯ ಸಂಕೇತವಾಗುವುದಲ್ಲದೆ, ಪ್ರಕೃತಿ ಮತ್ತು ಪರಿಸರದ ಸಂರಕ್ಷಣೆಯತ್ತ ಗಮನ ಹರಿಸಿದೆ. ಇಲ್ಲಿ 200 ಜಾತಿಯ ಪಕ್ಷಿಗಳಿರಲಿವೆ. ಪಕ್ಷಿಗಳ ಚಿತ್ರ ಬಿಡಿಸುವವರಿಗೆ 21 ಲಕ್ಷ ರೂ.ಗಳವರೆಗೆ ಬಹುಮಾನ ನೀಡಲಾಗುವುದು.

ಛತ್ತೀಸ್​ಗಢ: ಭಾರತದಿಂದ ನಕ್ಸಲಿಸಂ ತೊಡೆದು ಹಾಕುವಲ್ಲಿ ಮಹತ್ವದ ಹೆಜ್ಜೆ, 31 ನಕ್ಸಲರ ಹತ್ಯೆ

ಭಾರತದಿಂದ 2026ರೊಳಗೆ ನಕ್ಸಲಿಸಂ ತೊಡೆದು ಹಾಕುತ್ತೇವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಭರವಸೆ ನೀಡಿದಂತೆ ಇಂದು ಭಾರತೀಯ ಭದ್ರತಾ ಪಡೆ 31 ನಕ್ಸಲರನ್ನು ಹತ್ಯೆ ಮಾಡಿದೆ. ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹನ್ನೆರಡು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಆರಂಭಿಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಎಂಟು ಮಾವೋವಾದಿಗಳು ಸಾವನ್ನಪ್ಪಿದ ಒಂದು ವಾರದ ನಂತರ ಈ ಎನ್‌ಕೌಂಟರ್ ನಡೆದಿದೆ.

ಭಗವಂತ್ ಮಾನ್ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರದಲ್ಲೂ ಎಎಪಿ ಸೋಲು, ಕೇಜ್ರಿವಾಲ್ ಪಂಜಾಬ್ ಸಿಎಂ ಆಗ್ತಾರಾ?

ದೆಹಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಚಾರ ನಡೆಸಿದ್ದ 12ಕ್ಷೇತ್ರಗಳಲ್ಲಿ ಎಎಪಿ ಸೋಲನ್ನು ಕಂಡಿದೆ. ಇದರಲ್ಲಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸ್ಥಾನಗಳು ಸೇರಿದ್ದವು, ಅಲ್ಲಿ ಈ ದೊಡ್ಡ ನಾಯಕರು ಸ್ವತಃ ಸೋಲು ಕಂಡಿದ್ದಾರೆ.ದೆಹಲಿ ಚುನಾವಣೆಯಲ್ಲಿ ಎಎಪಿ ಸೋಲಿನ ನಂತರ, ಎಲ್ಲರ ಚಿತ್ತ ಈಗ ಪಂಜಾಬ್ ಮೇಲೆ ನೆಟ್ಟಿವೆ.

ಗುಜರಾತ್ ಹೆದ್ದಾರಿಯಲ್ಲಿ ಮರಳು ತುಂಬಿದ ಲಾರಿ ಪಲ್ಟಿ, ಮಗು ಸೇರಿ, ನಾಲ್ವರು ಸಾವು

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಥರಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ರಸ್ತೆಬದಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮರಳು ತುಂಬಿದ ಟ್ರಕ್ ಪಲ್ಟಿಯಾಗಿ ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಟ್ರಕ್ ಚಾಲಕ ಕಿರಿದಾದ ತಿರುವು ಮೂಲಕ ಚಲಿಸಲು ಪ್ರಯತ್ನಿಸಿದ್ದರಿಂದ ವಾಹನ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ಗೆದ್ದಾಯ್ತು, ಈಗ ಬಿಹಾರದತ್ತ ಬಿಜೆಪಿಯ ಚಿತ್ತ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ರುಚಿ ಕಂಡಿರುವ ಬಿಜೆಪಿಯು ಬಿಹಾರ ಚುನಾವಣೆಯತ್ತ ಗಮನಹರಿಸಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 225 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗಳು ಈಗಾಗಲೇ ಅತ್ಯಂತ ಕಠಿಣ ಹೋರಾಟವಾಗಿ ರೂಪುಗೊಳ್ಳುತ್ತಿದೆ.

WAVES 2025: ಮೇ 1ರಂದು ಮುಂಬೈನಲ್ಲಿ ಮೊದಲ ವೇವ್ಸ್​ ಶೃಂಗಸಭೆ; ಏನಿದರ ವಿಶೇಷತೆ?

WAVE Summit: ಶುಕ್ರವಾರ ರಾತ್ರಿ ಚಿತ್ರರಂಗ, ಉದ್ಯಮ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳ ಗಣ್ಯರು ಹಾಗೂ ಸೆಲೆಬ್ರಿಟಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮೊದಲ ವಿಶ್ವ ಆಡಿಯೋ ವಿಜುವಲ್ ಮನರಂಜನಾ ಶೃಂಗಸಭೆ (ವೇವ್ಸ್​ ಸಮ್ಮಿಟ್​) ಕುರಿತು ಚರ್ಚಿಸಿದ್ದರು. ಈ ಶೃಂಗಸಭೆ ಭವಿಷ್ಯದ ಯೋಜನೆಗಳು, ಹೊಸ ಆವಿಷ್ಕಾರ, ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವನ್ನು ಹೊಂದಿದೆ.

Delhi Results: ದೆಹಲಿಯಲ್ಲಿ 48 ಸ್ಥಾನಗಳ ಭರ್ಜರಿ ಜಯ ಗಳಿಸಿದ ಬಿಜೆಪಿ; ಆಪ್​ಗೆ 22 ಸ್ಥಾನ, ಈ ಬಾರಿಯೂ ಶೂನ್ಯಕ್ಕೆ ಶರಣಾದ ಕಾಂಗ್ರೆಸ್

27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಆಮ್ ಆದ್ಮಿ ಪಕ್ಷವನ್ನು ಸೋಲಿಸಿ ದೇಶದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಕೇಸರಿ ಪಕ್ಷ ಮುಂದಾಗಿದೆ. ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾಗರಿಕರು ತಮ್ಮ ಮತಗಳನ್ನು ಚಲಾಯಿಸಿದರು. ಇಂದು (ಫೆಬ್ರವರಿ 8) ಮತ ಎಣಿಕೆ ನಡೆಯಿತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಶೀಘ್ರದಲ್ಲೇ ಹೊಸ ಸರ್ಕಾರ ರಚನೆಯಾಗಲಿದೆ.

ಪರಾವಲಂಬಿಯಾದ ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನು ಒಂದೊಂದಾಗಿ ಮುಗಿಸುತ್ತಿದೆ; ಪ್ರಧಾನಿ ಮೋದಿ ಲೇವಡಿ

ಕಾಂಗ್ರೆಸ್​ ಒಂದು ಪರಾವಲಂಬಿ ಪಕ್ಷ. ಆ ಪಕ್ಷ ಮುಳುಗುತ್ತಿರುವಾಗಲೆಲ್ಲಾ ಇತರ ಪಕ್ಷಗಳನ್ನು ತಮ್ಮೊಂದಿಗೆ ಕರೆದೊಯ್ಯುತ್ತದೆ. ಕಾಂಗ್ರೆಸ್ ಒಂದೊಂದಾಗಿ ತನ್ನ ಮಿತ್ರಪಕ್ಷಗಳನ್ನು ಮುಳುಗಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮತದಾರರನ್ನು ಕಾಂಗ್ರೆಸ್ ಗುರಿಯಾಗಿಸಿಕೊಂಡಿದೆ. ತಮಿಳುನಾಡಿನ ಡಿಎಂಕೆ ಪಕ್ಷ, ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಅದೇ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಕೈ ಹಿಡಿದವರು ಯಾರೇ ಆಗಿರಲಿ, ಅವರ ಅಂತ್ಯ ನಿಶ್ಚಿತ ಎಂದು ಮೋದಿ ಲೇವಡಿ ಮಾಡಿದ್ದಾರೆ.