AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಾಂಗಕ್ಕೆ ಅಗೌರವ ತೋರುವ ಉದ್ದೇಶವಿಲ್ಲ; NCERT ಪಠ್ಯಪುಸ್ತಕ ವಿವಾದದ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿವಾದಾತ್ಮಕ ಪಠ್ಯವನ್ನು ಶಾಲಾ ಪುಸ್ತಕದಲ್ಲಿ ಸೇರಿಸಿರುವುದರಿಂದ ಉಂಟಾಗಿರುವ ಹಾನಿಯನ್ನು ತಡೆಯಲು NCERT ಪ್ರಯತ್ನಿಸುತ್ತಿದೆ. ಈಗಾಗಲೇ ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿದೆ. ಇದರ ನಡುವೆ ಇಂದು ಪ್ರತಿಕ್ರಿಯೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ನ್ಯಾಯಾಂಗವನ್ನು ಅಗೌರವಿಸುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಹೇಳಿದ್ದಾರೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪ್ರಕಟಿಸಿದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಂಬ ಪಠ್ಯವನ್ನು ಸೇರಿಸಿದ್ದರಿಂದ ವಿವಾದ ಭುಗಿಲೆದ್ದಿತು.

ನ್ಯಾಯಾಂಗಕ್ಕೆ ಅಗೌರವ ತೋರುವ ಉದ್ದೇಶವಿಲ್ಲ; NCERT ಪಠ್ಯಪುಸ್ತಕ ವಿವಾದದ ತನಿಖೆಗೆ ಕೇಂದ್ರ ಸರ್ಕಾರ ಆದೇಶ
Dharmendra Pradhan
ಸುಷ್ಮಾ ಚಕ್ರೆ
|

Updated on: Feb 26, 2026 | 9:47 PM

Share

ನವದೆಹಲಿ, ಫೆಬ್ರವರಿ 26: ಸುಪ್ರೀಂ ಕೋರ್ಟ್ “ನ್ಯಾಯಾಂಗದಲ್ಲಿ ಭ್ರಷ್ಟಾಚಾರ” ಎಂಬ ವಿವಾದಾತ್ಮಕ ಅಧ್ಯಾಯವನ್ನು NCERT 8​​ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಗ್ಗೆ ನ್ಯಾಯಾಂಗ ನಿಂದನೆ ನೋಟಿಸ್‌ಗಳನ್ನು ನೀಡಿದ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸರ್ಕಾರವು ನ್ಯಾಯಾಲಯದ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸುತ್ತದೆ, ನಮ್ಮ ಸರ್ಕಾರಕ್ಕೆ ನ್ಯಾಯಾಂಗವನ್ನು ಅಗೌರವಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

ನ್ಯಾಯಾಂಗದ ಬಗ್ಗೆ ಬಹಳ ಗೌರವವಿದೆ. ಆಗಿರುವ ಅಚಾತುರ್ಯವನ್ನು ತಕ್ಷಣ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಈಗಾಗಲೇ ಆದೇಶಿಸಲಾಗಿದೆ. 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಪಠ್ಯ ಸೇರಿಸಿದ್ದರಿಂದ ಸುಪ್ರೀಂ ಕೋರ್ಟ್ ಆ ಪುಸ್ತಕದ ಮೇಲೆ ಸಂಪೂರ್ಣ ನಿಷೇಧ ಹೇರಿತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದ ಟ್ರಂಪ್; ಅಮೆರಿಕದ ಸುಂಕ ಮತ್ತೆ ಶೇ. 15ಕ್ಕೆ ಹೆಚ್ಚಳ

ಈ ವಿಷಯವನ್ನು ತಮ್ಮ ಗಮನಕ್ಕೆ ತಂದ ತಕ್ಷಣ ತ್ವರಿತ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು. ಪುಸ್ತಕದ ಎಲ್ಲಾ ಪ್ರತಿಗಳನ್ನು ಹಿಂಪಡೆಯಲು ಮತ್ತು ಅವು ಶಾಲೆಗಳಿಗೆ ತಲುಪದಂತೆ ನೋಡಿಕೊಳ್ಳಲು NCERTಗೆ ಸೂಚಿಸಲಾಗಿದೆ ಎಂದು ಅವರು ದೃಢಪಡಿಸಿದ್ದಾರೆ.

ಅಧ್ಯಾಯವನ್ನು ಹೇಗೆ ತಯಾರಿಸಲಾಗಿದೆ ಮತ್ತು ಅನುಮೋದಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಅವರು ಘೋಷಿಸಿದರು. ಇಂತಹ ದೋಷ ಮರುಕಳಿಸುವುದಿಲ್ಲ ಎಂದು ನ್ಯಾಯಾಂಗಕ್ಕೆ ಭರವಸೆ ನೀಡಿದ ಅವರು ಹೊಣೆಗಾರರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!