AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ: ಕೊನೆಗೂ ಮೌನ ಮುರಿದ ಸಚಿವ ನಾಗೇಂದ್ರ ಹೇಳಿದ್ದೇನು?

ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ: ಕೊನೆಗೂ ಮೌನ ಮುರಿದ ಸಚಿವ ನಾಗೇಂದ್ರ ಹೇಳಿದ್ದೇನು?

ಶಿವಕುಮಾರ್ ಪತ್ತಾರ್
| Edited By: |

Updated on: Aug 11, 2026 | 6:04 PM

Share

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ಕರ್ನಾಟಕ ಬಿಟ್ಟು ದೆಹಲಿಗೆ ಹೋಗಿದ್ದಾರೆ ಎಂದು ವಿಪಕ್ಷಗಳ ಆರೋಪಕ್ಕೆ ಸಚಿವ ಬಿ ನಾಗೇಂದ್ರ ಕೊನೆಗೂ ಮೌನ ಮುರಿದಿದ್ದು, ರಾಜ್ಯದಿಂದ ಹೊರ ಹೋದಾಗೆಲ್ಲ ಅನುಮತಿ ಪಡೆದು ಹೋಗಿದ್ದೇನೆ. ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಈ ಕೇಸ್​ನಲ್ಲಿ ನ್ಯಾಯಾಲಯ ಕೂಡ ತಡೆಯಾಜ್ಞೆ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳ, (ಆಗಸ್ಟ್ 11): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ಕರ್ನಾಟಕ ಬಿಟ್ಟು ದೆಹಲಿಗೆ ಹೋಗಿದ್ದಾರೆ ಎಂದು ವಿಪಕ್ಷಗಳ ಆರೋಪಕ್ಕೆ ಸಚಿವ ಬಿ ನಾಗೇಂದ್ರ ಕೊನೆಗೂ ಮೌನ ಮುರಿದಿದ್ದು, ರಾಜ್ಯದಿಂದ ಹೊರ ಹೋದಾಗೆಲ್ಲ ಅನುಮತಿ ಪಡೆದು ಹೋಗಿದ್ದೇನೆ. ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಈ ಕೇಸ್​ನಲ್ಲಿ ನ್ಯಾಯಾಲಯ ಕೂಡ ತಡೆಯಾಜ್ಞೆ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ಇಂದು (ಆಗಸ್ಟ್ 11) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ನಾನು ಏಟು ತಿಂದ ಹುಲಿ. ರಾಜ್ಯದ ಜನರು ಮೆಚ್ಚುವಂತಹ ಕೆಲಸ ಮಾಡ್ತೀನಿ ನೋಡ್ತಿರಿ. ಹಿಂದುಳಿದವರು, ದಲಿತ ಬೆಳೆಯುವುದನ್ನು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ. ಸದನದಲ್ಲಿ ಬಿಜೆಪಿಯವರಿಗೆ ಉತ್ತರ ಕೊಡಲು ನಾವು ತಯಾರಾಗಿದ್ದೇವೆ. ನಮ್ಮ ಮುಖ್ಯಮಂತ್ರಿಯವರು ಇದಕ್ಕೆಲ್ಲ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸೋದು ವಿರೋಧ ಪಕ್ಷದವರ ಕೆಲಸ. ಸಚಿವ ಸಂಪುಟದ ಎಲ್ಲರೂ ಉತ್ತರ ಕೊಡುತ್ತೇವೆ. ವಾಲ್ಮೀಕಿ ನಿಗಮದಿಂದ ಹೋಗಿದ್ದ ಹಣ ವಾಪಸ್ ತರುತ್ತಿದ್ದಾರೆ. ನಾನು ಆ ಕೇಸ್​ನಲ್ಲಿ ಆರೋಪಿ, ಅಪರಾಧಿ ಅಲ್ಲ, ತಪ್ಪಿತಸ್ಥ ಅಲ್ಲ. ಪ್ರಕರಣದಿಂದ ಮುಕ್ತವಾಗಿ ಹೊರಗೆ ಬರ್ತೀನಿ ಅಂತಾ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಕೋರ್ಟ್ ಬಿಗ್ ರಿಲೀಫ್

Follow Us