ಶಿವಕುಮಾರ್ ಎಸ್ ಪತ್ತಾರ..
ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ದೃಶ್ಯ ನೋಡಿದ್ರೆ ಹೃದಯ ಹಿಂಡಿ ಬರುತ್ತೆ
ನೀರು ಕುಡಿಯಲು ಹೋಗಿ ಬಿಂದಿಗೆಯಲ್ಲಿ ಸಿಲುಕಿದ ಕೋತಿ ಮರಿ ಸಾವನ್ನಪ್ಪಿರುವ ಘಟನ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ನಡೆದಿದೆ. ನೀರಿದ ದಾಹ ತೀರಿಸಿಕೊಳ್ಳಲು ಕೋತಿ ಮರಿಯೊಂದು ಬಿಂದಿಗೆಯಲ್ಲಿನ ನೀರು ಕುಡಿಯಲು ಮುಂದಾಗಿದೆ. ಆ ವೇಳೆ ಬಿಂದಿಗೆಯಲ್ಲಿ ಕೋತಿ ಮುಖ ಸಿಕ್ಕಿಕೊಂಡಿದೆ. ಆಗ ಉಸಿರಾಟವಾಡಲು ಸಾಧ್ಯವಾಗದೇ ಕೊನೆಯುಸಿರೆಳೆದಿದೆ.
- Shivakumar Pattar
- Updated on: Apr 17, 2025
- 9:51 pm
ಹುಬ್ಬಳ್ಳಿ: ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೃದ್ಧೆಯರು ಸಾವು, ಓರ್ವರಿಗೆ ಗಾಯ
ಹುಬ್ಬಳ್ಳಿ ಹೊರವಲಯದ ನೂಲ್ವಿ ಕ್ರಾಸ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವರೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಲಿಂಗರಾಜ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
- Shivakumar Pattar
- Updated on: Apr 6, 2025
- 6:52 pm
ರಾಜಿನಾಮೆ ಕೊಟ್ಟ ಚುನಾವಣೆಗೆ ಬಾ, ನಾನು ಸಿದ್ದ: ವಿಜಯೇಂದ್ರಗೆ ಯತ್ನಾಳ್ ಸವಾಲು
ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸವಾಲು ಹಾಕಿದ್ದಾರೆ. ಹಿಂದೂತ್ವದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುವುದಾಗಿ ಹೇಳಿದ್ದಾರೆ. ಬಿಎಸ್ ಯಡಿಯೂರಪ್ಪ ಕುಟುಂಬದ ಪ್ರಭಾವದಿಂದ ಮುಕ್ತವಾದ ಬಳಿಕ ಬಿಜೆಪಿಗೆ ಮರಳುವುದಾಗಿ ತಿಳಿಸಿದ್ದಾರೆ.
- Shivakumar Pattar
- Updated on: Apr 6, 2025
- 3:52 pm
ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಸಿರಾಜ್ ಕಾಟಕ್ಕೆ ವಿದ್ಯಾ ಆತ್ಮಹತ್ಯೆಗೆ ಯತ್ನ
ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಮುಸ್ಲಿಂ ಯುವಕನೋರ್ವ ಹತ್ಯೆ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇದರ ಬೆನಲ್ಲೇ ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಯುವತಿಯ ಫೋಟೋ ಇಟ್ಟುಕೊಂಡು ಸಿರಾಜ್ ಮದುವೆಯಾಗುವಂತೆ ಟಾರ್ಚರ್ ನೀಡಿದ್ದಾನೆ. ಇದರಿಂದ ಬೇಸತ್ತು ಯುವತಿ ಆತ್ಮಹತ್ಯಗೆ ಯತ್ನಿಸಿದ್ದಾಳೆ.
- Shivakumar Pattar
- Updated on: Apr 2, 2025
- 3:06 pm
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು, ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಕಿಮ್ಸ್
ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನ ಲಾರಿಗೆ ಡಿಕ್ಕಿ ಹೊಡೆದು ನಾಲ್ವರು ಸಿಲುಕಿಕೊಂಡಿದ್ದರು. ಈ ವೇಳೆ, ಮೊಹಮದ್ ಸಮಿ, ಅತಿಕ್ ಮತ್ತು ಕಪೀಲ್ ಎಂಬ ಮೂವರು ಯುವಕರು ತಮ್ಮ ಧೈರ್ಯದಿಂದ ನಾಲ್ವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರ ಮಾನವೀಯತೆಗೆ ಗಾಯಾಳುಗಳ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.
- Shivakumar Pattar
- Updated on: Mar 28, 2025
- 8:13 pm
ಯತ್ನಾಳ್ ಬೆನ್ನಲ್ಲೇ ಇನ್ನಿಬ್ಬರಿಗೆ ಉಚ್ಛಾಟನೆ ಭೀತಿ: ಶಿಸ್ತು ಸಮಿತಿ ಸ್ಪೋಟಕ ಸುಳಿವು
ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಐವರು ನಾಯಕರಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿದ್ದ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಿಸ್ತು ಸಮಿತಿ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಈ ಬೆನ್ನಲ್ಲೇ ಬಿಜೆಪಿಯ ಇನ್ನಿಬ್ಬರು ನಾಯಕರು ಉಚ್ಛಾಟನೆಯಾಗುವ ಸುಳಿವನ್ನು ಶಿಸ್ತು ಸಮಿತಿ ನೀಡಿದೆ.
- Shivakumar Pattar
- Updated on: Mar 26, 2025
- 8:10 pm
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಚೇರಿ ವಿವಾದ: ಸಿದ್ದರಾಮಯ್ಯ ಸಂಪುಟ ತೀರ್ಮಾನಕ್ಕೆ ಕೋರ್ಟ್ ತಡೆ
ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ತಡೆ ನೀಡಿದೆ. ಈ ಜಾಗವನ್ನು ಮೂಲತಃ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಮೀಸಲಿಡಲಾಗಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಪರಿಗಣಿಸಿ ಈ ತೀರ್ಪು ನೀಡಿದೆ.
- Shivakumar Pattar
- Updated on: Mar 26, 2025
- 4:57 pm
ಹುಬ್ಬಳ್ಳಿ: ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 500 ಕ್ಷಿಂಟಾಲ್ ಅನ್ನಭಾಗ್ಯ ಅಕ್ಕಿ ಜಪ್ತಿ, ಇಬ್ಬರ ಕಾರ್ಡ್ ರದ್ದು
ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ದಾಳಿ ನಡೆಸಿದೆ. ಸುಮಾರು 500 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಮಹಿಳೆಯರು ಅಕ್ರಮವಾಗಿ ಅಕ್ಕಿ ಮಾರಾಟ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದವರ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
- Shivakumar Pattar
- Updated on: Mar 26, 2025
- 4:42 pm
ಆ ಒಂದು ಮಾತಿಗೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಬಸವರಾಜ್ ಹೊರಟ್ಟಿ
ಸದ್ಯದ ರಾಜಕಾರಣ ಹಾಗೂ ಸದನದಲ್ಲಿ ಸದಸ್ಯರು ನಡೆದುಕೊಳ್ಳುವ ರೀತಿಯಿಂದ ಬೇಸರಗೊಂಡಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಈ ಬಗ್ಗೆ ಸ್ವತಃ ಹೊರಟ್ಟಿ ಅವರೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದ್ರೆ, ಇದೀಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಾಗಾದ್ರೆ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವೇನು ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ.
- Shivakumar Pattar
- Updated on: Mar 25, 2025
- 3:51 pm
ಅತ್ತಿಗೆಯನ್ನೇ ಮಂಚಕ್ಕೆ ಕರೆದ ಮೈದುನ: ಒಪ್ಪದಿದ್ದಕ್ಕೆ ಎಲ್ಲೆಂದರಲ್ಲಿ ಕಚ್ಚಿದ ಕಾಮುಕ
ಆತನಿಗೆ ಮದುವೆಯಗಿತ್ತು. ಮದುವೆಯಾದರೂ ಅಣ್ಣನ ಹೆಂಡತಿ ಮೇಲೆ ಕಣ್ಣು ಹಾಕಿದ್ದ. ಅಣ್ಣನ ಹೆಂಡತಿ ಇದು ಸರಿ ಅಲ್ಲ ಅಂದರೂ ಕೇಳಿರಲಿಲ್ಲ.ನೀನೇ ಬೇಕೇ ಬೇಕು ಎಂದು ಪಟ್ಟು ಹಿಡದಿದ್ದ. ಅತ್ತಿಗೆಯನ್ನ ಮಂಚಕ್ಕೆ ಕರೆದವ ಕಾಮುಕನಂತೆ ವರ್ತಿಸಿದ್ದಾನೆ. ಹೌದು.. ಅತ್ತಿಗೆ ನಿರಾಕರಣೆ ಮಾಡಿದ್ದಕ್ಕೆ ಮೈದುನ ಅತ್ತಿಗೆಗೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಎಲ್ಲೆಂದರಲ್ಲಿ ಕಚ್ಚಿ ಮೃಗೀಯ ವರ್ತನೆ ತೋರಿದ್ದಾನೆ. ಅಷ್ಟಕ್ಕೂ ಏನಿದು ಮೈದುನನ ಮೃಗೀಯ ವರ್ತನೆ ಅಂತೀರಾ ಈ ಸ್ಟೋರಿ ನೋಡಿ..
- Shivakumar Pattar
- Updated on: Mar 24, 2025
- 5:03 pm
ಖಾತೆ ಬದಲಾವಣೆಗೆ ಲಂಚ ಜತೆಗೆ ಮನೆ ಕೆಲಸ ಮಾಡಿಸಿಕೊಂಡ ಕ್ಲರ್ಕ್: ಕಾರ್ಮಿಕ ಫುಲ್ ಕ್ಲಾಸ್
ಹುಬ್ಬಳ್ಳಿಯಲ್ಲಿ ಖಾತೆ ಬದಲಾವಣೆಗೆ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪಾಲಿಕೆ ಅಧಿಕಾರಿಯನ್ನು ಕಟ್ಟಡ ಕಾರ್ಮಿಕ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಪಾಲಿಕೆಯ ಕ್ಲರ್ಕ್ 8,000 ರೂ. ಪಡೆದು ಮನೆ ಕೆಲಸವನ್ನೂ ಮಾಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ಎರಡು ವರ್ಷಗಳ ಬಳಿಕ ಖಾತೆ ಬದಲಾವಣೆ ಮಾಡಿಕೊಟ್ಟು ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿದೆ.
- Shivakumar Pattar
- Updated on: Mar 20, 2025
- 3:29 pm
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್ಎ ಕಚೇರಿಗೆ ನುಗ್ಗಿ ಕಳ್ಳತನ
ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ ಅವರ ಕಚೇರಿಯಲ್ಲಿ ಮಾರ್ಚ್ 16 ರಂದು ಕಳ್ಳತನ ನಡೆದಿದೆ. ಜೆ.ಸಿ. ನಗರದ ಟೌನ್ ಹಾಲ್ ಕಟ್ಟಡದಲ್ಲಿರುವ ಕಚೇರಿಯ ಹಿಂಬಾಗಿಲ ಮೂಲಕ ಖದೀಮರು ನುಗ್ಗಿ ಟಿವಿ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Shivakumar Pattar
- Updated on: Mar 19, 2025
- 7:00 pm