AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಮೇನಿ ಹತ್ಯೆ ಬಗ್ಗೆ ಸ್ಟೇಟಸ್​: ಅನ್ಯಕೋಮಿನವರಿಂದ ಹಿಂದೂ ಯುವಕನಿಗೆ ಹಲ್ಲೆ: ಮನೆಗೆ ನುಗ್ಗಿ ಹೊಡೆಯುವುದಾಗಿ ಬೆದರಿಕೆ

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದೇ ಹಲ್ಲೆಗೆ ಕಾರಣ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಕೂಡ ಹಾಕಲಾಗಿದೆ ಎನ್ನಲಾಗುತ್ತಿದೆ.

ಖಮೇನಿ ಹತ್ಯೆ ಬಗ್ಗೆ ಸ್ಟೇಟಸ್​: ಅನ್ಯಕೋಮಿನವರಿಂದ ಹಿಂದೂ ಯುವಕನಿಗೆ ಹಲ್ಲೆ: ಮನೆಗೆ ನುಗ್ಗಿ ಹೊಡೆಯುವುದಾಗಿ ಬೆದರಿಕೆ
ಹಿಂದೂ ಯುವಕನ ಮೇಲೆ ಹಲ್ಲೆImage Credit source: tv9 kannada
ಶಿವಕುಮಾರ್ ಪತ್ತಾರ್
| Edited By: |

Updated on:Mar 04, 2026 | 8:25 AM

Share

ಕೊಪ್ಪಳ, ಮಾರ್ಚ್​ 04: ಅಮೆರಿಕ ಮತ್ತು ಇಸ್ರೇಲ್​ ಕ್ಷಿಪಣಿ ದಾಳಿಗೆ ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ali Khamenei) ಹತ್ಯೆಗೀಡಾಗಿದ್ದಾರೆ. ಈ ಹತ್ಯೆ ಖಂಡಿಸಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಈ ಮಧ್ಯೆ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ಹಿನ್ನಲೆ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು? 

ಅಯತೊಲ್ಲಾ ಅಲಿ ಖಮೇನಿ ಹತ್ಯೆ ಕುರಿತು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ ಹಿನ್ನಲೆ ಮುಸ್ಲಿಂ ಯುವಕರಿಂದ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಚಂದ್ರಶೇಖರ ಎಂಬಾತನಿಗೆ ಐದಾರು ಮುಸ್ಲಿಂ ಯುವಕರಿಂದ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಇರಾನ್ ಸಹಾಯದಿಂದ ಚಿಕ್ಕಬಳ್ಳಾಪುರದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆಗೆ ಭೇಟಿ ನೀಡಿದ್ದ ಖಮೇನಿ

ಚಂದ್ರಶೇಖರ ಖರ್ಜೂರ ವ್ಯಾಪಾರಿಯಾಗಿದ್ದು, ವ್ಯಾಪಾರ ಮಾಡುತ್ತಿದ್ದ ವೇಳೆ ಏಕಾಏಕಿ‌ ಬಂದ ಮುಸ್ಲಿಂ ಯುವಕರು ಚಂದ್ರಶೇಖರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಸಮಾಜದ ಬಗ್ಗೆ ಏಕೆ ಸ್ಟೋರಿ ಹಾಕಿದೆ. ನಮಗೆ ನೋವಾಗಿದೆ ಎಂದು ಚಂದ್ರಶೇಖರಗೆ ಬೈದು ಹಲ್ಲೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಚಂದ್ರಶೇಖರಗೆ ಬೆದರಿಕೆ ಕೂಡ ಹಾಕಿದ್ದಾರೆ. ಹೀಗಾಗಿ ಭಯಭೀತನಾಗಿ ಚಂದ್ರಶೇಖರ, ಮುಸ್ಲಿಂ‌ ಯುವಕರಿಂದ ಜೀವ ಭಯವಿದೆ ಎಂದು ತಡರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಖಮೇನಿ ಹತ್ಯೆ ಖಂಡಿಸಿ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ

ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡುವ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕ ತನ್ನ ಹಗೆ ತೀರಿಸಿಕೊಂಡಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಪರ ವಿರೋಧ ಚರ್ಚೆಗಳು, ಪ್ರತಿಭಟನೆಗಳು ಶುರುವಾಗಿವೆ. ತಮ್ಮ ಪರಮೋಚ್ಛ ನಾಯಕನ ಹತ್ಯೆಯಿಂದ ಇರಾನ್ ದುಖಃದಲ್ಲಿ ಮುಳುಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

ಖಮನೈ ಹತ್ಯೆ ಸುದ್ದಿ ಹೊರ ಬೀಳುತ್ತಿದ್ದಂತೆ ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲೀಮರು ಪ್ರತಿಭಟನೆ ಮಾಡಿದರು. ಇತ್ತ ಕರ್ನಾಟಕದಲ್ಲೂ ಪ್ರತಿಭಟಿಸಿದರು. ಚಿಕ್ಕಬಳ್ಳಾಪುರದ ಅಲಿಪುರ ಗ್ರಾಮದಲ್ಲೂ ಶೋಕ ಮಡುಗಟ್ಟಿತ್ತು. ಅಂಗಡಿ ಮುಂಗಟ್ಟು ಬಂದ್ ಮಾಡಿದ್ದ ಮುಸ್ಲೀಮರು, ಕಪ್ಪು ಬಾವುಟ ಪ್ರದರ್ಶಿಸಿ ಸಾವಿರಾರು ಸಂಖ್ಯೆಯಲ್ಲಿ ಖಮೇನಿ ಹತ್ಯೆ ಖಂಡಿಸಿ ಮೆರವಣಿಗೆ ಮಾಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:20 am, Wed, 4 March 26

Follow Us
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಹರಿಹರ ಪಂಚಮಸಾಲಿ ಮಠದಲ್ಲಿ 'ಲೆಕ್ಕ ಕೊಡಿ' ಅಭಿಯಾನ
ಹರಿಹರ ಪಂಚಮಸಾಲಿ ಮಠದಲ್ಲಿ 'ಲೆಕ್ಕ ಕೊಡಿ' ಅಭಿಯಾನ
ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ರಿಶಿ ಸುನಾಕ್ ಹೆಂಡತಿ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾರೆ ಗೊತ್ತಾ?
ಚಿನ್ನದ ದರ ಇಳಿಕೆ ಬೆನ್ನಲ್ಲೇ ಜ್ಯುವೆಲ್ಲರಿಗಳಿಗೆ ಮುಗಿಬೀಳುತ್ತಿರುವ ಜನ!
ಚಿನ್ನದ ದರ ಇಳಿಕೆ ಬೆನ್ನಲ್ಲೇ ಜ್ಯುವೆಲ್ಲರಿಗಳಿಗೆ ಮುಗಿಬೀಳುತ್ತಿರುವ ಜನ!
ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!
ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!