Gold price
ಚಿನ್ನ ಭೂಮಿಯಲ್ಲಿ ಸೀಮಿತ ಮಟ್ಟದಲ್ಲಿ ಸಿಗುವ ಲೋಹ. ವಿಶ್ವದಲ್ಲಿ ಒಟ್ಟೂ ಚಿನ್ನದ ಉತ್ಪಾದನೆಯಲ್ಲಿ ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಪಾಲು ಹೆಚ್ಚು. ಚೀನಾ ಮತ್ತು ಭಾರತದಲ್ಲಿ ಚಿನ್ನಕ್ಕೆ ಅತಿಹೆಚ್ಚು ಬೇಡಿಕೆ ಇದೆ. ಸೀಮಿತ ಪ್ರಮಾಣದಲ್ಲಿ ಇರುವುದರಿಂದ ಇತಿಹಾಸದಲ್ಲಿ ಒಂದು ವರ್ಷದ ಅಂತರದಲ್ಲಿ ಚಿನ್ನದ ಬೆಲೆ ಕಡಿಮೆ ಆಗಿದ್ದೇ ಇಲ್ಲ. ಹೀಗಾಗಿ, ಚಿನ್ನವನ್ನು ಹೂಡಿಕೆಯಾಗಿಯೂ ಬಳಕೆ ಮಾಡಲಾಗುತ್ತದೆ. ಇದೆಲ್ಲ ಕಾರಣಕ್ಕೆ ಚಿನ್ನ ಇಂದು ಬಹೂಪಯೋಗಿ ವಸ್ತುವಾಗಿ ಬಳಕೆಯಲ್ಲಿದೆ. ಚಿನ್ನವನ್ನು ಆಭರಣವಾಗಿ ಪರಿವರ್ತಿಸಬಹುದು. ಹೂಡಿಕೆಯಾಗಿ ಬಳಸಬಹುದು. ಸಾಲಕ್ಕೆ ಅಡಮಾನವಾಗಿ ಬಳಸಬಹುದು. ಇದಲ್ಲದೇ ಸೋವರೀನ್ ಗೋಲ್ಡ್ ಬಾಂಡ್ ಇತ್ಯಾದಿ ಚಿನ್ನದ ಆಧಾರಿತವಾದ ಹೂಡಿಕೆ ಸ್ಕೀಮ್ಗಳು ಇವೆ.