ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.
ಕೈಮೀರುತ್ತಿರುವ ಹಣದುಬ್ಬರ; ಆರ್ಬಿಐ ತುರ್ತಾಗಿ ಬಡ್ಡಿದರ ಏರಿಸಬಹುದು: ಯೂನಿಯನ್ ಬ್ಯಾಂಕ್ ವರದಿ
ಆರ್ಬಿಐ ತನ್ನ ನಿಯಮಿತ ಸಭೆವರೆಗೂ ಕಾಯದೆ ತುರ್ತಾಗಿ ಬಡ್ಡಿದರ ಏರಿಸಬಹುದು ಎಂದು ಯೂನಿಯನ್ ಬ್ಯಾಂಕ್ ರಿಸರ್ಚ್ ರಿಪೋರ್ಟ್ ಅಂದಾಜಿಸಿದೆ. ಅಕ್ಟೋಬರ್ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಡಿಸೆಂಬರ್ನಲ್ಲಿ ಮುಂದಿನ ಸಭೆ ಇದೆ. ಅದಕ್ಕೂ ಮುನ್ನವೇ ಹೆಚ್ಚುವರಿ ಸಭೆ ನಡೆಸಬಹುದು ಎನ್ನಲಾಗಿದೆ. ಸಗಟು ಮಾರಾಟ ದರ ಆಧಾರಿತ ಹಣದುಬ್ಬರ ಶೇ. 11ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹೋಗಿದ್ದು ಆರ್ಬಿಐನಿಂದ ತುರ್ತು ಕ್ರಮ ಮಾಡಿಸಬಹುದು.
- Vijaya Sarathy SN
- Updated on: Oct 16, 2026
- 6:45 pm
ಪೆಟ್ರೋಲ್ ಮೇಲೆ ರಫ್ತು ಸುಂಕ ಹೆಚ್ಚಳ; ಡೀಸಲ್ ಮೇಲಿನ ರಫ್ತು ಸುಂಕ ಇಳಿಕೆ
ಪೆಟ್ರೋಲ್ ರಫ್ತು ಮೇಲಿನ ವಿಂಡ್ಫಾಲ್ ಟ್ಯಾಕ್ಸ್ ಅನ್ನು ಲೀಟರ್ಗೆ 50 ಪೈಸೆಯಿಂದ 2.50 ರುಪಾಯಿಗೆ ಸರ್ಕಾರ ಹೆಚ್ಚಿಸಿದೆ. ಅದೇ ವೇಳೆ, ಡೀಸಲ್ ಮೇಲಿನ ರಫ್ತು ಸುಂಕವನ್ನು 16 ರೂನಿಂದ 8.5 ರೂಗೆ ಇಳಿಸಿದೆ. ಎಟಿಎಫ್ ಇಂಧನದ ಮೇಲಿನ ರಫ್ತು ಸುಂಕವನ್ನು 10.50 ರೂನಲ್ಲೇ ಮುಂದುವರಿಸಲಾಗಿದೆ. ದೇಶೀಯವಾಗಿ ಪೂರೈಕೆಯಾಗುವ ಇಂಧನಗಳಿಗೆ ಬೇರೆಯೇ ಸುಂಕ ವ್ಯವಸ್ಥೆ ಇರುತ್ತದೆ.
- Vijaya Sarathy SN
- Updated on: Oct 16, 2026
- 5:06 pm
ವಿಮಾನವಲ್ಲ, ಡ್ರೋನ್ ಅಲ್ಲ, ಇದು ಜಿಗಿಯುವ ಕಾರು… ಫ್ಲೈಯಿಂಗ್ ಕಾರಿನತ್ತ ಟೆಸ್ಲಾ ಬಿಗ್ ಜಂಪ್
ಟೆಸ್ಲಾ ಸಂಸ್ಥೆಯು ಮೇಲೆ ಜಿಗಿಯುವ, ಪಲ್ಟಿ ಹೊಡೆಯುವ ಪ್ರೋಟೋಟೈಪ್ ಕಾರೊಂದನ್ನು ಅಭಿವೃದ್ಧಿಪಡಿಸಿದೆ. ಟೆಕ್ಸಾಸ್ನಲ್ಲಿರುವ ಟೆಸ್ಲಾ ಆವರಣದಲ್ಲಿ ಏರ್ಪಡಿಸಲಾದ ವಿಶೇಷ ಪ್ರದರ್ಶನದಲ್ಲಿ ಈ ಕಾರು ಯಶಸ್ವಿಯಾಗಿ ಜಿಗಿದು ಕೆಳಗಿಳಿಯಿತು. ಮೇಲೆ ಜಿಗಿಯಲು ಮತ್ತು ಕೆಳಗೆ ಇಳಿಯಲು ಕೋಲ್ಡ್ ಗ್ಯಾಸ್ ಥ್ರಸ್ಟರ್ ತಂತ್ರಜ್ಞಾನವನ್ನು ಬಳಸಲಾಗಿರಬಹುದು.
- Vijaya Sarathy SN
- Updated on: Oct 16, 2026
- 2:33 pm
Gold Rates 16 October: ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ; ಸ್ಪಾಟ್ ಗೋಲ್ಡ್ ದರದಲ್ಲೂ ಹೆಚ್ಚಳ
Gold Price 16 October 2026: ಚಿನ್ನದ ಬೆಲೆಯಲ್ಲಿ ಇವತ್ತು ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆಯೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಆಭರಣ ಚಿನ್ನದ ಬೆಲೆ 13,515 ರೂ ಇದೆ. ಅಪರಂಜಿ ಚಿನ್ನದ ಬೆಲೆ 14,744 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 230 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 240 ರೂ ಇದೆ.
- Vijaya Sarathy SN
- Updated on: Oct 16, 2026
- 1:27 pm
ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಭಾರತಕ್ಕೆ ಬರಲಿ, ಸ್ಪರ್ಧಿಸಲು ನಾವ್ ರೆಡಿ; ತೊಡೆ ತಟ್ಟಿದ ಜಿಯೋ ಮತ್ತು ಏರ್ಟೆಲ್
ಸೆಟಿಲೈಟ್ ಕಮ್ಯೂನಿಕೇಶನ್ ಸರ್ವಿಸ್ ನೀಡಲು ಭಾರತಕ್ಕೆ ಸ್ಟಾರ್ಲಿಂಕ್ ಬರಲಿ ಎಂದು ರಿಲಯನ್ಸ್ ಮತ್ತು ಏರ್ಟೆಲ್ ಸಂಸ್ಥೆಗಳು ಸ್ವಾಗತಿಸಿವೆ. ಪೈಪೋಟಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ರಿಲಯನ್ಸ್ ತಿಳಿಸಿದೆ. ಸ್ಯಾಟ್ಕಾಮ್ ಸೇವೆ ಒದಗಿಸುವ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿ ಐದು ವರ್ಷ ಆಯಿತು, ಅನುಮತಿಗೆ ಕಾಯುತ್ತಿದ್ದೇವೆ ಎಂದು ಏರ್ಟೆಲ್ ಹೇಳಿದೆ.
- Vijaya Sarathy SN
- Updated on: Oct 16, 2026
- 1:01 pm
ಭಾರತದ ಹೊಸ ಜಿಡಿಪಿ ದರ ಲೆಕ್ಕಾಚಾರ ಸರಿಯಾಗಿದೆ: ಐಎಂಎಫ್ ಸ್ಪಷ್ಟನೆ
ಭಾರತವು ತನ್ನ ಒಟ್ಟು ದೇಶೀಯ ಉತ್ಪನ್ನ (GDP) ಲೆಕ್ಕಾಚಾರದ ಪದ್ಧತಿಯಲ್ಲಿ ಮಾಡಿರುವ ಪರಿಷ್ಕರಣೆಗಳು ಉತ್ತಮ ಅಭ್ಯಾಸಗಳಿಗೆ (good practices) ಅನುಗುಣವಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ತಿಳಿಸಿದೆ. ಜಿಡಿಪಿ ವಿಧಾನದ ಈ ಬದಲಾವಣೆಯನ್ನು ಐಎಂಎಫ್ ಮುಕ್ತಕಂಠದಿಂದ ಸ್ವಾಗತಿಸಿದೆ. ರುಪಾಯಿ ಕರೆನ್ಸಿ ಮೇಲಿನ ಒತ್ತಡವು ಆರ್ಥಿಕತೆಯ ದೌರ್ಬಲ್ಯದ ಸಂಕೇತವಲ್ಲ ಎಂದೂ ಸ್ಪಷ್ಟಪಡಿಸಿದೆ.
- Vijaya Sarathy SN
- Updated on: Oct 16, 2026
- 5:00 am
ನವೆಂಬರ್ 1ರಿಂದ ಮೊಬೈಲ್ ಕರೆ ಮಾಡುವವರ ಅಧಿಕೃತ ಹೆಸರು ಪ್ರದರ್ಶಿಸಬೇಕು; ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ
ಭಾರತದಲ್ಲಿ ಸ್ಪ್ಯಾಮ್ ಮತ್ತು ವಂಚನೆ ಕರೆಗಳನ್ನು ತಡೆಯುವ ನಿಟ್ಟಿನಲ್ಲಿ ದೂರಸಂಚಾರ ಇಲಾಖೆಯು (DoT) ಕರೆ ಮಾಡುವವರ ಅಧಿಕೃತ ಹೆಸರನ್ನು ಪ್ರದರ್ಶಿಸುವ ‘ಸಿಎನ್ಎಪಿ’ (CNAP) ವ್ಯವಸ್ಥೆಯನ್ನು ನವೆಂಬರ್ 1, 2026ರಿಂದ ಕಡ್ಡಾಯಗೊಳಿಸಿದೆ. ಕರೆ ಮಾಡುವವರು ನಕಲಿ ಹೆಸರನ್ನು ಇಡಲು ಆಗುವುದಿಲ್ಲ. ಕರೆ ಸ್ವೀಕರಿಸುವವರ ಮೊಬೈಲ್ನಲ್ಲಿ ಆ ನಂಬರ್ ಸೇವ್ ಆಗಿದ್ದರೆ ಆ ಹೆಸರೇ ಬರುತ್ತದೆ. ಇಲ್ಲವಾದರೆ ಅಧಿಕೃತ ಹೆಸರು ಕಾಣಿಸುತ್ತದೆ.
- Vijaya Sarathy SN
- Updated on: Oct 15, 2026
- 9:35 pm
5ಜಿ ನೆಟ್ವರ್ಕ್ ಅಳವಡಿಕೆ; ಜಿಯೋ ವೇಗಕ್ಕೆ ಇಲ್ಲ ಸಾಟಿ: ಆಕಾಶ್ ಅಂಬಾನಿ
ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ಪ್ರಕಾರ, ಮುಂದಿನ ಐದು ವರ್ಷದಲ್ಲಿ 31.4 ಕೋಟಿ ಹೊಸ ಮೊಬೈಲ್ ಬಳಕೆದಾರರು ಸೇರ್ಪಡೆಯಾಗಲಿದ್ದಾರೆ. ದೇಶದಲ್ಲಿ ಬ್ರಾಡ್ಬ್ಯಾಂಡ್ ವಿಸ್ತರಣೆ ಸಣ್ಣ ನಗರಗಳಲ್ಲಿ ಹೆಚ್ಚಾಗಲಿದೆ ಎಂದೂ ಅವರು ಹೇಳಿದ್ದಾರೆ. ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
- Vijaya Sarathy SN
- Updated on: Oct 15, 2026
- 8:27 pm
ದೂರದೃಷ್ಟಿ ಮತ್ತು ಆರ್ಥಿಕ ಶಿಸ್ತಿನಿಂದಲೇ ರಿಲಯನ್ಸ್ ಸಂಸ್ಥೆ ಬೃಹತ್ ಯಶಸ್ಸು ಸಾಧಿಸಿದೆ: ಇಶಾ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ದೀರ್ಘಕಾಲೀನ ದೂರದೃಷ್ಟಿ ಮತ್ತು ಕಟ್ಟುನಿಟ್ಟಾದ ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ವ್ಯವಹಾರಗಳನ್ನು ಯಶಸ್ವಿಯಾಗಿ ವಿಸ್ತರಿಸಿದೆ ಎಂದು ರಿಲಯನ್ಸ್ ರಿಟೇಲ್ ಮುಖ್ಯಸ್ಥೆ ಇಶಾ ಅಂಬಾನಿ ತಿಳಿಸಿದ್ದಾರೆ. ಅಲ್ಪಾವಧಿ ಲಾಭದ ಬದಲು ದೀರ್ಘಾವಧಿ ಗುರಿಯೊಂದಿಗೆ ಹೂಡಿಕೆ ಮಾಡುವುದು ರಿಲಯನ್ಸ್ನ ಕಾರ್ಯಶೈಲಿ ಎಂದು ಅವರು ಹೇಳಿದ್ದಾರೆ.
- Vijaya Sarathy SN
- Updated on: Oct 15, 2026
- 7:58 pm
ಜಿಯೋ ಐಪಿಒ ಭಾರತದ ಡಿಜಿಟಲ್ ಪರಿವರ್ತನೆಯ ಐತಿಹಾಸಿಕ ಕ್ಷಣ: ಉದಯ್ ಕೋಟಕ್
ರಿಲಯನ್ಸ್ ಜಿಯೋ ಪ್ಲಾಟ್ಫಾರ್ಮ್ಸ್ನ ಬೃಹತ್ ಐಪಿಒ (IPO) ಘೋಷಣೆಯು ಭಾರತದ ಡಿಜಿಟಲ್ ಕ್ರಾಂತಿಯ ಮೈಲಿಗಲ್ಲು ಎಂದು ಪ್ರಮುಖ ಬ್ಯಾಂಕರ್ ಉದಯ್ ಕೋಟಕ್ ಅಭಿಪ್ರಾಯಪಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾರ್ವಜನಿಕ ಕೊಡುಗೆಯಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ. 30,213 ಕೋಟಿ ರೂ ಮೊತ್ತದ ಐಪಿಒ ಇದಾಗಿದ್ದು, ಅಕ್ಟೋಬರ್ 21ರಿಂದ 23ರವರೆಗೆ ಸಾರ್ವಜನಿಕರಿಗೆ ತೆರೆಯಲಿದೆ.
- Vijaya Sarathy SN
- Updated on: Oct 15, 2026
- 6:46 pm
ಜಿಯೋ ಪ್ಲಾಟ್ಫಾರ್ಮ್ಸ್ 30,213 ಕೋಟಿ ರೂ ಐಪಿಒ: ಭಾರತದ ಇತಿಹಾಸದಲ್ಲೇ ಅತಿದೊಡ್ಡದು; ಶೇರುಬೆಲೆ, ದಿನಾಂಕ, ಹೂಡಿಕೆ ಇತ್ಯಾದಿ ವಿವರ
ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ಸ್ ಸಂಸ್ಥೆಯ ಐಪಿಒ ಸುದ್ದಿ ಸದ್ದು ಮಾಡುತ್ತಿದೆ. 27 ಕೋಟಿ ಷೇರುಗಳನ್ನು ಈ ಐಪಿಒದಲ್ಲಿ ವಿತರಣೆ ಮಾಡಲಾಗುತ್ತಿದೆ. ಒಟ್ಟು 30,213 ಕೋಟಿ ರೂ ಗಾತ್ರದ ಐಪಿಒ ಇದಾಗಿದೆ. ಪ್ರತೀ ಷೇರಿಗೆ 1,065-1,119 ರೂ ಬೆಲೆ ನಿಗದಿ ಮಾಡಲಾಗಿದೆ. 2026ರ ಅಕ್ಟೋಬರ್ 21ರಿಂದ 23ರವರೆಗೆ ಐಪಿಒ ಚಾಲನೆಯಲ್ಲಿರುತ್ತದೆ.
- Vijaya Sarathy SN
- Updated on: Oct 15, 2026
- 3:16 pm
ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು
ಸಣ್ಣ ಉದ್ದಿಮೆಗಳು ಗ್ರಾಹಕರನ್ನು ಸೆಳೆಯುವುದು, ಅವರೊಂದಿಗೆ ವ್ಯವಹರಿಸುವುದು, ಅವರನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಸ್ವಂತ ಉದ್ದಿಮೆದಾರರಿಗೆ ಬಹಳ ನೆರವಾಗುತ್ತವೆ. ವಾಟ್ಸಾಪ್ ಕೂಡ ಬಹಳ ಉಪಯುಕ್ತವೆನಿಸುವ ಫೀಚರ್ಗಳನ್ನು ಹೊಂದಿದೆ. ಯಾವ್ಯಾವ ಫೀಚರ್ಸ್ ಇವೆ, ಇವುಗಳನ್ನು ಹೇಗೆ ಬಳಸುವುದು ಇತ್ಯಾದಿ ಮಾಹಿತಿ ಇಲ್ಲಿದೆ...
- Vijaya Sarathy SN
- Updated on: Oct 15, 2026
- 1:35 pm