AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ 2026; ಇದು ಬೆಂಗಳೂರಿನ ಅತಿದೊಡ್ಡ ಮೇಳ

TV9 Kannada Presents Lifestyle, Automobile & Furniture Expo 2026 in Bengaluru: ಅತ್ಯಾಧುನಿಕ ಮತ್ತು ಟ್ರೆಂಡಿ ಎನಿಸಿರುವ ಫ್ಯಾಷನ್, ಆಭರಣ, ಪೀಠೋಕರಣಗಳು, ಹೋಮ್ ಡೆಕೋರೇಶನ್​ಗಳು, ಲೇಟೆಸ್ಟ್ ಟೆಕ್ನಾಲಜಿಯ ಇವಿಗಳು, ಎಸ್​ಯುವಿಗಳು ಇತ್ಯಾದಿಯನ್ನು ಒಂದೇ ವೇದಿಕೆಯಲ್ಲಿ ನೋಡಬೇಕಾ? ಅರಮನೆ ಮೈದಾನದಲ್ಲಿ ಮಾರ್ಚ್ 6ರಿಂದ ಮೂರು ದಿನಗಳ ಕಾಲ ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ನಡೆಯಲಿದೆ.

ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ 2026; ಇದು ಬೆಂಗಳೂರಿನ ಅತಿದೊಡ್ಡ ಮೇಳ
ಟಿವಿ9 ಲೈಫ್​ಸ್ಟೈಲ್, ಆಟೊ, ಫರ್ನಿಚರ್ ಎಕ್ಸ್​ಪೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 02, 2026 | 12:38 PM

Share

ಬೆಂಗಳೂರು, ಮಾರ್ಚ್ 2: ಪ್ರತೀ ವರ್ಷ ಸಾವಿರಾರು, ಲಕ್ಷಾಂತರ ಬೆಂಗಳೂರಿಗರನ್ನು ಸೆಳೆಯುತ್ತಾ ಬಂದಿರುವ ಮಹಾಮೇಳ ಈ ವರ್ಷ ಮತ್ತೆ ಸಿಲಿಕಾನ್ ಸಿಟ್ಟಿಗೆ ಮರಳಿದೆ. ಕರ್ನಾಟಕದ ಅಗ್ರಮಾನ್ಯ ಸುದ್ದಿ ವಾಹಿನಿ ಎನಿಸಿರುವ ಟಿವಿ9 ಕನ್ನಡ ವತಿಯಿಂದ ಲೈಫ್​ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್​ಪೋ 2026 ಮೇಳ (TV9 Kannada Lifestyle, Automobile & Furniture Expo 2026) ನಡೆಯಲಿದೆ. ಅರಮನೆ ಮೈದಾನದಲ್ಲಿ ಮಾರ್ಚ್ 6ರಿಂದ ಮೂರು ದಿನಗಳ ಕಾಲ ನಡೆಯುವ ಈ ಮೆಗಾ ಎಕ್ಸ್​ಪೋದಲ್ಲಿ ಹೊಚ್ಚ ಹೊಸ ಫ್ಯಾಷನ್, ವಾಹನಗಳು, ಗೃಹೋಪಕರಣಗಳನ್ನು ಕಾಣಬಹುದು.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋದಲ್ಲಿ ನಿರೀಕ್ಷಿಸಬಹುದಾದದ್ದು…

  • ವೈವಿಧ್ಯಮಯ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳನ್ನು ಈ ಎಕ್ಸ್​ಪೋದಲ್ಲಿ ನೋಡಬಹುದು. ಸ್ಮಾರ್ಟ್​ಹೋಮ್ ಟೆಕ್ನಾಲಜಿ ಹೊಂದಿರುವ ಎಸಿಗಳು, ರೆಫ್ರಿಜರೇಟರ್​ಗಳು, ಅಡುಗೆ ಮನೆ ವಸ್ತುಗಳು, ಪರ್ಸನಲ್ ಗ್ಯಾಜೆಟ್​ಗಳು ನಿಮಗಾಗಿ ಕಾಯುತ್ತಿರುತ್ತವೆ.
  • ಉತ್ಕೃಷ್ಟ ಗುಣಮಟ್ಟದ ಪೀಠೋಪಕರಣ ಮತ್ತು ಹೋಮ್ ಡೆಕೋರೇಶನ್ ವಸ್ತುಗಳು ಇರುತ್ತವೆ. ಬಹಳ ಸುಂದರವಾದ, ಲಕ್ಷುರಿ ಎನಿಸುವ ಸೋಫಾ ಸೆಟ್​ಗಳು, ಡೈನಿಂಗ್ ಟೇಬಲ್, ಇಂಟೀರಿಯನ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್​ಗಳು ಪ್ರದರ್ಶನಗೊಳ್ಳುತ್ತವೆ. ಅತ್ಯಾಧುನಿಕ ಮನೆಗಳಿಗೆ ಒಪ್ಪುವಂತಹ ಇನ್ನೋವೇಟಿವ್ ಎನಿಸುವ ಉತ್ಪನ್ನಗಳು ಇಲ್ಲಿರುತ್ತವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಬ್ರ್ಯಾಂಡ್​ಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ.
  • ಲೇಟೆಸ್ಟ್ ಟೆಕ್ನಾಲಜಿಯೊಂದಿಗೆ ನಿರ್ಮಿಸಲಾಗಿರುವ ಹೊಸ ಎಲೆಕ್ಟ್ರಿಕ್ ವಾಹನಗಳು, ಎಸ್​ಯುವಿಗಳು, ಬೈಕ್​ಗಳು, ಕಾನ್ಸೆಪ್ಟ್ ಕಾರುಗಳು ನಿಮ್ಮನ್ನು ಆಕರ್ಷಿಸಲು ಎಕ್ಸ್ಪೋದಲ್ಲಿ ಕಾಯುತ್ತಿರುತ್ತವೆ.
  • ಫ್ಯಾಷನ್ ಮತ್ತು ಆಭರಣಗಳ ಕಲೆಕ್ಷನ್ಸ್ ಮನೋಹರವಾಗಿರಲಿವೆ. ಹೊಸ ಫ್ಯಾಷನ್ ಟ್ರೆಂಡ್​ಗಳು, ಡಿಸೈನರ್ ಕಲೆಕ್ಷನ್, ಆಭರಣಗಳನ್ನು ಇಲ್ಲಿ ಕಾಣಬಹುದು. ದೇಶ ವಿದೇಶಗಳ ಫ್ಯಾಷನ್ ಬ್ರ್ಯಾಂಡ್​ಗಳ ಉತ್ಪನ್ನಗಳು ಇಲ್ಲಿ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಲಭ್ಯ ಇರುತ್ತವೆ.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಿಂದಿನ ಆವೃತ್ತಿಯ ಮೇಳಗಳಿಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಪ್ರತೀ ಎಕ್ಸ್​ಪೋದಲ್ಲೂ ಸಾವಿರಾರು ಜನರು ಆಗಮಿಸಿ, ಲಾಭ ಪಡೆದಿದ್ದಾರೆ. ಕುಟುಂಬದವರು, ವೃತ್ತಿಪರರು ಮತ್ತು ಹೊಸ ಫ್ಯಾಷನ್ ಮತ್ತು ಗ್ಯಾಜೆಟ್​ಗಳ ಪ್ರೇಮಿಗಳು ಎಲ್ಲರಿಗೂ ಹೇಳಿ ಮಾಡಿಸಿದಂತಹ ಪ್ಲಾಟ್​ಫಾರ್ಮ್ ಇದು. ಈ ಎಕ್ಸ್​ಪೋದಲ್ಲಿ ಆಕರ್ಷಣೀಯ ಎನಿಸುವ ಡಿಸ್ಕೌಂಟ್​ಗಳು, ಡೀಲ್​ಗಳು ನಿಮಗಾಗಿ ಲಭ್ಯ ಇರುತ್ತವೆ.

ಟಿವಿ9 ಕನ್ನಡ ಲೈಫ್​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​ಪೋ ವೇಳಾಪಟ್ಟಿ

  • ಎಕ್ಸ್​ಪೋ ದಿನಾಂಕ: 2026ರ ಮಾರ್ಚ್ 6, 7 ಮತ್ತು 8ರಂದು.
  • ಸ್ಥಳ: ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನ
  • ಸಮಯ: ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ

ಪಾರ್ಕಿಂಗ್ ಮತ್ತು ಪ್ರವೇಶ ಉಚಿತ

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್