AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

Crude oil prices surge ahead, effects on India and its import bill: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವಂತೆ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಒಂದು ಬ್ಯಾರಲ್ ತೈಲದ ಬೆಲೆ 80 ಡಾಲರ್ ದಾಟಿದೆ. ಇದು ಮತ್ತಷ್ಟು ಏರಿಕೆ ಆಗಲಿದ್ದು ತಜ್ಞರ ಅಂದಾಜಿನ ಪ್ರಕಾರ ಬೆಲೆ 100 ಡಾಲರ್ ದಾಟಬಹುದು. ಬೆಲೆ ಒಂದು ಡಾಲರ್ ಹೆಚ್ಚಿದಂತೆ ಭಾರತಕ್ಕೆ ಆರ್ಥಿಕ ಹೊರೆ ಬಹಳ ಅಧಿಕ ಇರುತ್ತದೆ.

ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?
ಕಚ್ಚಾ ತೈಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 02, 2026 | 5:11 PM

Share

ನವದೆಹಲಿ, ಮಾರ್ಚ್ 2: ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ (crude oil prices) ಬಹಳಷ್ಟು ಏರುತ್ತಿದೆ. ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ತೈಲ ಬ್ಯಾರಲ್​ಗೆ 80 ಡಾಲರ್ ಬೆಲೆ ದಾಟಿದೆ. ಬ್ಯಾರಲ್​ಗೆ 60 ಡಾಲರ್ ಆಸುಪಾಸಿನ ಬೆಲೆಯಲ್ಲಿ ತೈಲ ಖರೀದಿ ಮಾಡುತ್ತಿದ್ದ ಭಾರತಕ್ಕೆ ಈಗ ಬೆಲೆ ಏರಿಕೆಯ ಬಿಸಿ ಆರ್ಥಿಕವಾಗಿ ತಾಗಲಿದೆ. ಸದ್ಯ ತೈಲ ಬೆಲೆ ಹಲವು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ.

ಕಚ್ಛಾ ತೈಲ ಬೆಲೆ ಏರಿಕೆಯಿಂದ ಭಾರತಕ್ಕೆ ಏನು ನಷ್ಟ?

ಭಾರತಕ್ಕೆ ಅಗತ್ಯವಾದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಇರಾನ್ ಹಾಗೂ ಕೊಲ್ಲಿ ರಾಷ್ಟ್ರಗಳದ್ದು ಸಿಂಹಪಾಲು. ಭಾರತದ ಒಟ್ಟಾರೆ ಆಮದಿನಲ್ಲಿ ತೈಲ ಮತ್ತು ಚಿನ್ನದ ಪಾಲು ಬಹಳ ಹೆಚ್ಚು. ಇದರಿಂದಾಗಿ ಭಾರತದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಅಧಿಕ ಮಟ್ಟದಲ್ಲಿ ಇದೆ. ಹೀಗಾಗಿ, ಆಮದು ಹೆಚ್ಚಿದಂತೆ ಭಾರತದ ಆಮದು ವೆಚ್ಚವೂ ಹೆಚ್ಚುತ್ತಾ ಹೋಗುತ್ತದೆ. ಸಿಎಡಿ ಅಥವಾ ಕರೆಂಟ್ ಅಕೌಂಟ್ ಡೆಫಿಸಿಟ್ ಕೂಡ ಹಿಗ್ಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆಯಲ್ಲಿ ಒಂದು ಡಾಲರ್ ಏರಿದರೆ ಭಾರತದ ವಾರ್ಷಿಕ ಆಮದು ವೆಚ್ಚ 2 ಬಿಲಿಯನ್ ಡಾಲರ್ ಹೆಚ್ಚುವರಿಯಾಗಿ ಹೊರೆ ಬೀಳುತ್ತದೆ. ಅಂದರೆ, ಸುಮಾರು 19,000 ಕೋಟಿ ರೂನಷ್ಟು ಹೆಚ್ಚುವರಿ ಹೊರೆಯನ್ನು ಭಾರತ ಹೊರಬೇಕಾಗುತ್ತದೆ.

ಪಶ್ಚಿಮ ಏಷ್ಯಾ ಮೇಲೆ ತೈಲಕ್ಕೆ ಅವಲಂಬನೆ

ಭಾರತ ತನಗೆ ಬೇಕಾದ ಶೇ. 50ಕ್ಕೂ ಹೆಚ್ಚು ತೈಲವನ್ನು ಇರಾನ್ ಹಾಗು ಕೊಲ್ಲಿ ರಾಷ್ಟ್ರಗಳಿಂದ ಮಾಡಿಕೊಳ್ಳುತ್ತದೆ. ಶೇ. 35-50ರಷ್ಟು ತೈಲವು ಹಾರ್ಮುಜ್ ಜಲಸಂಧಿ ಮೂಲಕ ಬರಬೇಕು. ರಷ್ಯಾ, ಅಮೆರಿಕದಿಂದಲೂ ಭಾರತ ತೈಲ ಪೂರೈಕೆ ಪಡೆಯುವುದರಿಂದ ಕೊಲ್ಲಿ ಪ್ರದೇಶದ ಮೇಲೆ ಹೆಚ್ಚಿನ ಅವಲಂಬನೆ ಇಲ್ಲ ಎನ್ನುವುದು ಸಮಾಧಾನದ ಸಂಗತಿ. ಆದರೂ ಕೂಡ ಹಾರ್ಮುಜ್ ಹಾದಿಗೆ ತಡೆ ಬಿದ್ದರೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿ ಬೆಲೆ ಏರಿಕೆ ಮತ್ತಷ್ಟು ಆಗುತ್ತದೆ.

ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

ರಷ್ಯಾ ಕೂಡ ತೈಲ ಬೆಲೆ ಹೆಚ್ಚಿಸಿದೆ. ಅಮೆರಿಕದ ತೈಲ ಬೆಲೆಯೂ ಏರಿಕೆ ಆಗಿದೆ. ಹೀಗಾಗಿ, ಭಾರತ ತೈಲ ಪಡೆಯಲು ಹೆಚ್ಚಿನ ಬೆಲೆ ತೆರುವುದು ಅನಿವಾರ್ಯವೇ. ಒಂದು ಅಂದಾಜು ಪ್ರಕಾರ 80 ಡಾಲರ್ ಆಸುಪಾಸು ಇರುವ ತೈಲ ಬೆಲೆ ಮುಂದಿನ ದಿನಗಳಲ್ಲಿ 100 ಡಾಲರ್ ದಾಟಿ 110 ಡಾಲರ್ ಸಮೀಪಕ್ಕೆ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ