AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

India's strategic petroleum reserves: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತಕ್ಕೆ ಆಗುವ ಪರಿಣಾಮವೇನು? ಬಹಳ ಅಧಿಕ ಪೆಟ್ರೋಲ್ ಬಳಸುವ ಭಾರತವು ಪೆಟ್ರೋಲ್​ಗಾಗಿ ಏನು ಮಾಡಬೇಕು? ಇಲ್ಲಿರುವ ಪೆಟ್ರೋಲ್ ಸಂಗ್ರಹ ಎಷ್ಟು ದಿನಗಳಿಗೆ ಆಗುವಷ್ಟು ಇದೆ? ಈ ಬಗ್ಗೆ ಒಂದು ಮಾಹಿತಿ...

ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?
ಪೆಟ್ರೋಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 02, 2026 | 3:22 PM

Share

ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿದೆ. ಇಸ್ರೇಲ್, ಇರಾನ್ ಸಂಘರ್ಷದಲ್ಲಿ (Middle East crisis) ಅಮೆರಿಕ ಅಖಾಡಕ್ಕೆ ಪ್ರವೇಶ ಮಾಡಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸೇರಿದಂತೆ ಹಲವು ಪ್ರಮುಖ ಮುಖಂಡರನ್ನು ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಕೊಂದು ಹಾಕಿವೆ. ಗಲ್ಫ್ ದೇಶಗಳಿಂದ ತೈಲ ಪೂರೈಕೆಗೆ ಅಡಚಣೆ ಆಗಿದೆ. ಜಾಗತಿಕವಾಗಿ ತೈಲ ಬೆಲೆ ಹೆಚ್ಚುವ ಮತ್ತು ಪೂರೈಕೆ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚು ಕಾಣುತ್ತಿದೆ.

ಒಂದು ವೇಳೆ, ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಏನು ತೊಂದರೆ? ಅತಿಹೆಚ್ಚು ಪೆಟ್ರೋಲ್ ಬಳಸುವ ದೇಶಗಳಲ್ಲಿ ಭಾರತ ಒಂದು. ಒಂದು ವೇಳೆ ತೈಲ ಪೂರೈಕೆ ಸ್ಥಗಿತಗೊಂಡರೆ ಭಾರತದಲ್ಲಿ ಈಗಿರುವ ಪೆಟ್ರೋಲಿಯಂ ಸಂಗ್ರಹ ಎಷ್ಟು ದಿನಕ್ಕೆ ಸಾಕಾಗಬಹುದು? ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಅವರು ಕಳೆದ ತಿಂಗಳು (ಫೆಬ್ರುವರಿ) ಈ ಬಗ್ಗೆ ರಾಜ್ಯಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಇರುವ ಪೆಟ್ರೋಲಿಯಂ ಸಂಗ್ರಹವು 74 ದಿನಗಳಿಗೆ ಸಾಕಾಗುವಷ್ಟು ಇದೆಯಂತೆ.

ಅಂತಾರಾಷ್ಟ್ರೀಯ ಇಂಧನ ಸಂಘಟನೆಯಾದ ಐಇಎ (IEA) ಒಂದು ದೇಶದಲ್ಲಿ ಕನಿಷ್ಠ 90 ದಿನಗಳಿಗೆ ಆಗುವಷ್ಟು ಪೆಟ್ರೋಲ್ ಸಂಗ್ರಹ ಇರಬೇಕು ಎಂದು ಶಿಫಾರಸು ಮಾಡಿದೆ. ತೈಲ ನಿಕ್ಷೇಪಗಳಿಲ್ಲದ ದೇಶಗಳಿಗೆ ಈ ನಿಯಮ ಅಥವಾ ಶಿಫಾರಸು ಅನ್ವಯ ಆಗುತ್ತದೆ. ಹಲವು ಐರೋಪ್ಯ ದೇಶಗಳು ಈ ನಿಯಮವನ್ನು ಪಾಲಿಸುತ್ತಿವೆ. ಅವನ್ನು ಬಿಟ್ಟು ಹೆಚ್ಚಿನ ದೇಶಗಳಲ್ಲಿ ಇಷ್ಟು ಸಂಗ್ರಹ ಇಲ್ಲ. ಭಾರತದಲ್ಲಿ ಬಹಳ ಪೆಟ್ರೋಲ್ ಬಳಕೆ ಇದ್ದರೂ 74 ದಿನಗಳಿಗೆ ಆಗುವಷ್ಟು ಸಂಗ್ರಹ ಹೊಂದಿರುವುದು ಗಮನಾರ್ಹ.

ಇದನ್ನೂ ಓದಿ: ಇರಾನ್​ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಎಷ್ಟು ದಿನಗಳವರೆಗೆ ಮುಂದುವರೆಯಬಹುದು, ಟ್ರಂಪ್ ಹೇಳಿದ್ದೇನು?

ಭಾರತದಲ್ಲಿ ಮೂರು ಕಡೆ ತೈಲ ಸಂಗ್ರಹ ಸ್ಥಳಗಳಿವೆ. ಕರ್ನಾಟಕದ ಮಂಗಳೂರು ಮತ್ತು ಉಡುಪಿಯಲ್ಲಿ, ಹಾಗೂ ಆಂಧ್ರದ ವಿಶಾಖಪಟ್ಟಣಂನಲ್ಲಿ ಕ್ಯಾವರ್ನ್​ಗಳು ಅಥವಾ ಭೂಗತ ತೈಲಾಗಾರಗಳಿವೆ. ಒಡಿಶಾದಲ್ಲೂ ಒಂದು ತೈಲ ಸಂಗ್ರಹಗಾರವನ್ನು ಸ್ಥಾಪಿಸಲಾಗುತ್ತಿದೆ. ಒಡಿಶಾದ್ದು ಪೂರ್ಣಗೊಂಡರೆ ಭಾರತದಲ್ಲಿ 90 ದಿನಗಳಿಗಾಗುಷ್ಟು ಪೆಟ್ರೋಲ್ ಸಂಗ್ರಹ ಹೊಂದಿರಲು ಸಾಧ್ಯವಾಗುತ್ತದೆ. ಈಗಿರುವ ಮೂರು ಕ್ಯಾವರ್ನ್​ಗಳಲ್ಲಿ 5 ಎಂಎಂಟಿಗೂ ಅಧಿಕ ಕಚ್ಚಾ ತೈಲವನ್ನು ಇರಿಸಲಾಗಿದೆ. ಇದಲ್ಲದೆ, ದೇಶದ ಹಲವೆಡೆ ರಿಫೈನರಿಗಳಿವೆ. ಅಲ್ಲಿಯೂ ಸಾಕಷ್ಟು ಕಚ್ಚಾ ತೈಲ ಇದ್ದು ಅದನ್ನು ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ತುರ್ತು ಸ್ಥಿತಿ ಬಂದಾಗ ಈ ರಿಫೈನರಿಯಲ್ಲಿರುವ ಪೆಟ್ರೋಲ್ ಎಲ್ಲವನ್ನೂ ಆಂತರಿಕ ಬಳಕೆಗೆ ಉಪಯೋಗಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Mon, 2 March 26

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ