Diesel
ಡೀಸಲ್ ಎಂಬುದು ಪೆಟ್ರೋಲ್ ರೀತಿ ಒಂದು ಪೆಟ್ರೋಲಿಯಂ ಉತ್ಪನ್ನ. ಡೀಸಲ್ ಎಂಜಿನ್ನ ವಾಹನಗಳಿಗೆ ಇದನ್ನು ಇಂಧನವಾಗಿ ಬಳಸಲಾಗುತ್ತದೆ. ಪೆಟ್ರೋಲಿಯಂ ಅಥವಾ ಕಚ್ಛಾ ತೈಲ ಮಾತ್ರವಲ್ಲ, ಬೇರೆ ಮೂಲಗಳಿಂದಲೂ ಡೀಸೆಲ್ ಇಂಧನ ತಯಾರಿಸಬಹುದು. ಸಿಂಥೆಟಿಕ್ ಡೀಸಲ್, ಬಯೋಡೀಸಲ್ ಕೂಡ ಇದೆ. ವೆಜಿಟಬಲ್ ಆಯಿಲ್ ಅಥವಾ ಪ್ರಾಣಿಗಳ ಕೊಬ್ಬಿನಿಂದ ಬಯೋಡೀಸಲ್ ತಯಾರಿಸಬಹುದು. ಪೆಟ್ರೋಲಿಯಂನಿಂದ ತಯಾರಿಸಲಾಗುವ ಡೀಸಲ್ ಅತಿ ಸಾಮಾನ್ಯವಾಗಿ ಬಳಕೆಯಲ್ಲಿ ಇದೆ. ಪೆಟ್ರೋಲ್‌ಗೆ ಹೋಲಿಸಿದರೆ ಡೀಸಲ್ ಹೆಚ್ಚು ಮಾಲಿನ್ಯಕಾರಕ ಎನಿಸಿದೆ. ಹೀಗಾಗಿ, ಡೀಸಲ್ ಇಂಧನ ಬಳಕೆಯನ್ನು ವಿವಿಧ ಸರ್ಕಾರಗಳು ಸಾಧ್ಯವಾದಷ್ಟು ನಿರ್ಬಂಧಿಸಲು ಯತ್ನಿಸುತ್ತಿವೆ. ಡೀಸಲ್ ಎಂಜಿನ್ನ ವಾಹನಗಳ ತಯಾರಿಕೆ ಬಹಳ ಕಡಿಮೆ ಆಗಿದೆ. ಮುಂದಿನ ಕೆಲ ವರ್ಷಗಳಲ್ಲಿ ಡೀಸಲ್ ಮಾತ್ರವಲ್ಲ ಪೆಟ್ರೋಲ್ ಎಂಜಿನ್ನ ವಾಹನಗಳ ತಯಾರಿಕೆಯೂ ನಿಂತು ಹೋಗಲಿದೆ. ಪರಿಸರ ಮಾಲಿನ್ಯಕ್ಕೆ ಧಕ್ಕೆಯಾಗುವ ಕಾರಣಕ್ಕೆ ಸರ್ಕಾರಗಳು ಈ ಕ್ರಮ ಕೈಗೊಳ್ಳುತ್ತಿವೆ. ಆದಾಗ್ಯೂ ಕೆಲವಾರು ವರ್ಷಗಳ ಕಾಲ ಡೀಸಲ್ ತೈಲ ಹೆಚ್ಚು ಬಳಕೆಯಲ್ಲಿ ಉಳಿಯುತ್ತದೆ. ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ.