ನಾವ್ಯಾಕೆ ತೈಲ ನೀಡಬೇಕು? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ
India refuses to follow calls of IEA to release strategic oil reserves: ತೈಲ ಬಿಕ್ಕಟ್ಟು ನೀಗಿಸಲು ಎಲ್ಲಾ ದೇಶಗಳು ತಮ್ಮ ತೈಲ ಸಂಗ್ರಹವನ್ನು ಬಿಡುಗಡೆ ಮಾಡಬೇಕೆಂದು ಐಎಇ ತಿಳಿಸಿದೆ. ಆದರೆ, ಭಾರತಕ್ಕೆ ಇದಕ್ಕೆ ಒಪ್ಪಿಲ್ಲ. ಈ ಬಿಕ್ಕಟ್ಟು ಸೃಷ್ಟಿಗೆ ತಾವು ಕಾರಣರಲ್ಲ. ಅದಕ್ಕೆ ಕಾರಣರಾದವರನ್ನು ಜವಾಬ್ದಾರರನ್ನಾಗಿಸಿ ಎಂದು ಭಾರತ ಹೇಳಿದೆ. ಇರಾನ್ ಯುದ್ಧದಿಂದಾಗಿ ತೈಲ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗಿರುವುದರಿಂದ ತುರ್ತು ಸ್ಥಿತಿ ಉದ್ಭವಿಸಿದೆ.

ನವದೆಹಲಿ, ಮಾರ್ಚ್ 10: ಆಂತರಿಕ ಬಳಕೆಗೆಂದು ಇಡಲಾಗಿರುವ ತೈಲ ಸಂಗ್ರಹವನ್ನು (Strategic Oil Reserves) ಬಿಡುಗಡೆ ಮಾಡಬೇಕೆಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಾದ ಐಇಎ ಮಾಡಿರುವ ಪ್ಲಾನ್ಗೆ ಭಾರತ ನಕಾರ ತೋರಿದೆ. ಜಾಗತಿಕವಾಗಿ ತೈಲ ಬೆಲೆ ಕಡಿಮೆಗೊಳಿಸಲು ಐಇಎ ತೈಲ ಸಂಗ್ರಹ ಬಿಡುಗಡೆ ಮಾಡುವಂತೆ ಎಲ್ಲಾ ದೇಶಗಳಿಗೂ ನೀಡಿರುವ ಕರೆಗೆ ಭಾರತ ಓಗೊಟ್ಟಿಲ್ಲ. ಈ ಬಿಕ್ಕಟ್ಟು ಸೃಷ್ಟಿಸಿದವರು ತಾವಲ್ಲ. ನಮ್ಮಿಂದ ಈ ಕೆಲಸ ಆಗಲ್ಲ ಎಂದು ಭಾರತ ಹೇಳೀದೆ.
‘ತೈಲ ಸಂಗ್ರಹವನ್ನು ಭಾರತ ಬಿಡುಗಡೆ ಮಾಡುವುದಿಲ್ಲ. ಈ ಬಿಕ್ಕಟ್ಟು ಸೃಷ್ಟಿಗೆ ನಾವು ಕಾರಣರಲ್ಲ. ಇದಕ್ಕೆ ಕಾರಣರಾದವರು ತೈಲ ಬೆಲೆ ಇಳಿಕೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ’ ಎಂದು ಸರ್ಕಾರದ ಮೂಲಗಳು ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತದಲ್ಲಿ ಭೂಗತ ತೈಲ ಸಂಗ್ರಹ ಸಾಮರ್ಥ್ಯ 5.33 ಮಿಲಿಯನ್ ಟನ್ಗಳಷ್ಟಿವೆ. ಆದರೆ, ಇದರಲ್ಲಿ ಶೇ 80 ಮಾತ್ರವೇ ಭರ್ತಿಯಾಗಿರುವುದು. ಭಾರತಕ್ಕೆ ಮೊದಲ ಬಳಕೆ ಎನ್ನುವುದು ಸರ್ಕಾರದ ನೀತಿಯಾಗಿದೆ. ಪೂರೈಕೆಯಲ್ಲಿ ವ್ಯತ್ಯಯವಾದಾಗ ಈ ಸಂಗ್ರಹವನ್ನು ಬಳಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ.
ಭಾರತದಲ್ಲಿ ಭೂಗತ ತೈಲ ಸಂಗ್ರಹಗಾರಗಳು ಮೂರು ಕಡೆ ಇವೆ. ಕರ್ನಾಟಕದಲ್ಲಿ ಎರಡು ಮತ್ತು ಆಂಧ್ರದಲ್ಲಿ ಒಂದು ಇದೆ. ಇಲ್ಲಿ ಕಚ್ಚಾ ತೈಲ ಸಂಗ್ರಹ ಕೆಲ ವಾರಗಳ ಬಳಕೆಗೆ ಸಾಕಾಗುವಷ್ಟು ಇದೆ. ಇದರ ಜೊತೆಗೆ ರಿಫೈನರಿಗಳಲ್ಲಿ ತೈಲ ಸಂಗ್ರಹ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Tue, 10 March 26
